ಜೇಡರ ದಾಸಿಮಯ್ಯ
12ನೇ ಶತಮಾನ ಭಕ್ತಿಯ ಕಾಲ, ಈ ವಚನ ಸಾಹಿತ್ಯದ ಉದ್ದೇಶ ಮಾನವೀಯ ಮೌಲ್ಯಗಳಿಗೆ ಬೆಲೆ ಮತ್ತು ಸರ್ವ ಸಮಾನತೆಯ ತತ್ವದಲ್ಲಿ ಆದರ್ಶ ಸಮಾಜ ನಿರ್ಮಾಣದ ಜೊತೆಗೆ ಸಾಮಾಜಿಕ ನ್ಯುನ್ಯತೆಗಳನ್ನು ತಿದ್ದಿ ಸಮಾಜವನ್ನು ಸುಧಾರಿಸುವ ಆಶಯವನ್ನು ವಚನಗಳಲ್ಲಿ ಕಾಣುತ್ತೇವೆ.
ಪ್ರಸ್ತುತ ಸಮಾಜಕ್ಕೆ ಬಸವಾದಿ ಶರಣರ ಚಿಂತನೆ ಮತ್ತು ಆಚರಣೆ ಅವಶ್ಯಕವಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಸಾಹಿತ್ಯ ಕ್ರಾಂತಿ ಯು ಮಹತ್ವಪೂರ್ಣವಾಗಿದ್ದು, ಅದರಲ್ಲಿ ಅನೇಕ ಶರಣರು ಸಮರ್ಪಣಾ ಭಾವದಿಂದ ಸೇರಿದ್ದಾರೆ, ಅವರಲ್ಲಿ ಜೇಡರ ದಾಸಿಮಯ್ಯನವರು ಅಗ್ರರಾಗಿದ್ದಾರೆ.
ಅವರ ಕಿರು ಪರಿಚಯ
ಜನನ_ಕ್ರಿ ಶ 1148
ತಂದೆ _ರಾಮಯ್ಯ
ತಾಯಿ_ ಶಂಕರಿ
ಜನ್ಮಸ್ಥಳ _ಗುಲ್ಬರ್ಗ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು
ಕಾಯಕ _ನೇಯ್ಗೆ
ಆರಾಧ್ಯ ದೈವ _ರಾಮನಾಥ
ಅಂಕಿತನಾಮ _ರಾಮನಾಥ
ಹೆಂಡತಿ _ದುಗ್ಗಳೆ
ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಹೇಳಬೇಕಾಗಿಲ್ಲ ಮನವರಿಕೆ ಮಾಡಿಸಿದ್ದಾರೆ.
ಜೇಡರ ದಾಸಿಮಯ್ಯರನ್ನು ನೇಕಾರ ದಾಸಿಮಯ್ಯ ,ದೇವಾಂಗ ಎಂದು ಕರೆಯಲ್ಪಡುವರು ,ಇವರು ಶಿವಾಪುರದಲ್ಲಿ ಬೆಳೆದ ದುಗ್ಗಳೆ ಅವರನ್ನು ವಿವಾಹವಾದರು.
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ?
ಕರಿಯನಿತ್ತಡೆ ಒಲ್ಲೆ, ಸಿರಿಯ ನಿತ್ತಡೆ ಒಲ್ಲೆ
ಹಿರಿದಿಪ್ಪ ರಾಜ್ಯವನಿತ್ತಡೆ ಒಲ್ಲೆ ಎನ್ನುತ
ನಿಷ್ಠೆಯುಳ್ಳ ಭಕ್ತಿ ನಟ್ಟಡವಿಯಲ್ಲಿದ್ದ ಡೇನು? ಹಾಗೆಯೇ ಭವಿಯ ಕಳೆದು ಭಕ್ತನಾದ ಬಳಿಕ
ವೇಶಕ್ಕೆ ಅಂಜುವೆ, ದೋಷಕ್ಕೆ ಹೇಸುವೆ!
ವಿಷಯದ ಪಿತ್ತ ತಲೆಗೇರಿದಲ್ಲ
ಮನ ಮುಟ್ಟಿ ನೆನೆವಲ್ಲಿ ತನು ನಿಮ್ಮ ದಾಯಿತ್ತು.
ಚಿನ್ನದೊಳಗಣ ಬಣ್ಣವ, ಆ ಚಿನ್ನ ತನ್ನ ತಾನರಿವುದೇ? ಹೀಗೆಅವರ ಹಲವಾರು ವಚನಗಳನ್ನು ನೋಡಿದಾಗ ಸಂಕ್ಷಿಪ್ತದೊಂದಿಗೆ, ಅರ್ಥ ಪ್ರಚುರತೆ, ಸಾಮಾಜಿಕ ಜೀವನದ ವಿಡಂಬನೆ, ಟೀಕೆಯನ್ನು ಕಾಣುತ್ತೇವೆ.
ಅವರ ಒಂದು ವಚನದ ನಿರ್ವಚನ
ಉಣ್ಣೆ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ?
ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಆ ಉಣ್ಣಿಯಿಂದ ಕರಕಷ್ಟ !ರಾಮನಾಥ
ನಾವು ಇಲ್ಲಿ ದೇಹವನ್ನು ಧರಿಸಿಕೊಂಡು ಬಂದಿರುವುದೇ ಆತ್ಮ ತತ್ವವನ್ನು ಅರಿತುಕೊಳ್ಳಲು, ಅದಕ್ಕೆ ಹೇಳುತ್ತಾರೆ ಹೇ ಹುಚ್ಚಪ್ಪ ಗಳಿರಾ ಮಾನವ ಜನ್ಮ ದೊಡ್ಡದು ಅಂತ. ಇಂಥ ಪುಣ್ಯಕ್ಷೇತ್ರಕ್ಕೆ ನಾವು ಬಂದರೂ ಕೂಡ ಹಾಲು ಕುಡಿಯಲಿಕ್ಕೆ ನಮಗೆ ಬರ್ತಾ ಇಲ್ಲ ಅದಕ್ಕೆ ಹೇಳ್ತಾರೆ ಈ ಉಣ್ಣೆ ಏನಪ್ಪಾ ಆ ಕಳೀನ ಕೆಚ್ಚಲಿನ ಹಾಲನ್ನು ಕುಡಿಯುವುದು ಬಿಟ್ಟು ರಕ್ತವನ್ನು ಹೀರುತ್ತಿದೆ ಅಂತ ಹೇಳುತ್ತೇವೆ ಇದು ಪ್ರಾಣಿ ಗುಣ .ಆದರೆ ಮಾನವ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠ, ಮಾನವನಿಗೆ ಎಲ್ಲಾ ತಿಳುವಳಿಕೆ ಇದ್ದರೂ ಕೂಡ ನಮ್ಮೊಳಗೆ ಭಗವಂತ ಇದ್ದಾನೆ ,ಹಾಲು ಇದೆ ,ಅಮೃತವು ಇದೆ ,ನಮ್ಮಲ್ಲಿಯೂ ಸಾಯದೆ ಇರುವಂತಹ ಸ್ಥಿತಿಯು ಕೂಡ ಇದೆ ,ಇದನ್ನು ನಾವು ಅರಿತುಕೊಳ್ಳದೆ ಹೋದರೆ ಆ ಉಣ್ಣೆಗಿಂತಲೂ ಕರ ಕಷ್ಟ.
ಪ್ರಾಣಿ ಪ್ರಾಣಿಯಂತೆ ವರ್ತಿಸುವ ತಪ್ಪಲ್ಲ ,ಮಾನವ ತನ್ನ ಒಳಗಡೆ ಇರುವಂತಹ ಸತ್ವವನ್ನು ಅರಿತುಕೊಳ್ಳದೆ ಹೋದರೆ ಪ್ರಾಣಿಗಳಿಗಿಂತಲೂ ಕನಿಷ್ಠ ಅಂದರೆ ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು ಆ ಉಣ್ಣಿಗಿಂತ ಕರಕಷ್ಟ! ಇಲ್ಲಿ ಪುಣ್ಯಕ್ಷೇತ್ರವೆಂದರೆ ಕಾಶಿ ,ರಾಮೇಶ್ವರ ,ಶ್ರೀಶೈಲ ,ಕೂಡಲಸಂಗಮ ಅಲ್ಲ ಪುಣ್ಯಕ್ಷೇತ್ರವೆಂದರೆ ಭೂಲೋಕ, ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ ಎನ್ನುವ ಹಾಗೆ ಈ ಪುಣ್ಯಕ್ಷೇತ್ರದಲ್ಲಿ ಹುಟ್ಟಿರುವುದೇ ಮಾನವ ತನ್ನ ಆತ್ಮೋದ್ದಾರವನ್ನು ಮಾಡಿಕೊಳ್ಳಲು ,ತನ್ನ ಆತ್ಮವನ್ನು ಕಂಡುಕೊಳ್ಳಲು, ಈ ದೇಹ ಸೃಷ್ಟಿಗೆ ಲೋಕ ಸೃಷ್ಟಿಗೆ ಭಗವಂತನೇ ಕಾರಣ ಎನ್ನುವುದನ್ನು ತಿಳಿದುಕೊಳ್ಳಲು ಮಾನವನಾಗಿ ಜನಿಸಿದ್ದಾನೆ ,ಆದರೆ ನಾವು ಇದರ ಯಾವುದೇ ಪರಿವೇ ಇಲ್ಲದ ಹಾಗೆ ಇದ್ದು ಆ ಹುಣ್ಣಿಗೆ ನಾವು ಬೈದರೆ ಉಪಯೋಗವಿಲ್ಲ ಯಾಕೆಂದರೆ ಮನುಷ್ಯನಿಗೆ ಇಷ್ಟೆಲ್ಲಾ ಅವಕಾಶ ನೀಡಿದರು ಕೂಡ ಕೇವಲ ಲೌಕಿಕವಾದ ವಸ್ತು ವಿಷಯಗಳಿಗೆ ಉಣ್ಣಿಯಂತೆ ರಕ್ತ ಹೀರುವ ಹಾಗೆ ಹೊನ್ನು ,ಮಣ್ಣು, ಹೆಣ್ಣು, ಮದ ,ಮತ್ಸರಗಳನ್ನು ಹೀರಿಕೊಳ್ಳುತ್ತಾ ಕೊನೆಯವರೆಗೂ ಅರಿತುಕೊಳ್ಳದೆ ಹೋದರೆ ಈ ಉಣ್ಣಿ ಬೇರೆ ಅಲ್ಲ ನಾವು ಮಾನವರು ಬೇರೆ ಅಲ್ಲ ಎನ್ನುವರು, ಇವನ್ನೆಲ್ಲ ನೋಡಿದಾಗ ನಮ್ಮ ಶರಣರು ಮರ್ತ್ಯ ಲೋಕವೆಂಬುದು ಕರ್ತರ್ನ ಕಮ್ಮಟ ಎಂಬುದನ್ನು ಈ ಹಿಂದೆ ಕಂಡುಕೊಂಡಿದ್ದರು ಹಾಗಾಗಿ ಇದು ನಮ್ಮ ದೇವರಮನೆ ಹೊಲಸು ಮಾಡಬೇಡಿ ಹುಚ್ಚಪ್ಪ ಗಳಿರಾಎಂದು ಹೇಳುತ್ತಾರೆ ನಾವು ಎಲ್ಲಿ ಹುಟ್ಟಿರುತ್ತೇವೆಯೋ ಅದೇ ಪುಣ್ಯಕ್ಷೇತ್ರ ಅಲ್ಲಿ ಇದ್ದುಕೊಂಡೇ ಈ ಎಲ್ಲಾ ಕಾಮನೆಗಳನ್ನು ಅಂದರೆ ಆಶೆ ಎನ್ನುತ್ತಿರುವಂತಹ ಉಣ್ಣಿಯನ್ನು ಬದಲಿ ಮಾಡಿ ಅಮೃತವನ್ನು ಕುಡಿಯುವದರ ಕಡೆಗೆ ನಾವು ಕಳುಹಿಸಬೇಕು ಯಾಕೆಂದರೆ ನಾವು ಪ್ರಾಣಿಯಲ್ಲ ಉಣ್ಣೆಯ ಹೆಸರನ್ನು ಇಟ್ಟುಕೊಂಡಿರುವಂತಹ ಮಾನವರು ಹಾಗಾಗಿ ಆ ದೈವವನ್ನು ಅರಿತುಕೊಳ್ಳಲು ,ದೈವತ್ವದ ಕಡೆಗೆ ಹೋಗಬೇಕು ರಾಮನಾಥ ಎನ್ನುವುದೇ ಈ ವಚನದ ನಿರ್ವಚನ.
ಮಾನವರಾಗಿ ಭೂಲೋಕದಲ್ಲಿ ಹುಟ್ಟಿದ್ದು ನಮ್ಮ ಆತ್ಮಜ್ಞಾನ ವನ್ನು ಮಾಡಿಕೊಳ್ಳಲು ಆತ್ಮಜ್ಞಾನದ ಅನುಭಾವವನ್ನು , ಆನಂದವನ್ನು ಪಡೆದುಕೊಳ್ಳುವುದಕ್ಕಾಗಿ ,ಹಾಗಾಗಿ ನಮ್ಮ ಶರಣರು ಮಾಡಿದ್ದು ಇದೇ ಕಾರ್ಯ ಅದರಲ್ಲಿಯೂ ನಮ್ಮೆಲ್ಲರ ಅಕ್ಕನಾದ ಅಕ್ಕಮಹಾದೇವಿಗೆ ಗೊತ್ತಿತ್ತು ನಾನು ಹುಟ್ಟಿದ್ದೆ ಪುಣ್ಯಕ್ಷೇತ್ರ ,ನಾ ಬಂದಿರುವುದೇ ಆತ್ಮ ಜ್ಞಾನಕ್ಕಾಗಿ ಎಂಬುದನ್ನು ಅವಳ ವಚನದಲ್ಲಿಯೂ ಕೂಡ ನಾವು ಕಾಣಬಹುದು.
ಅವರ ಇನ್ನೊಂದು ವಚನ
ಆದಿ ಪ್ರಕೃತಿಯ ಮಕ್ಕಳು ಅಂದಿನವರು
ಆದಿ ಪ್ರಕೃತಿಯ ಮಕ್ಕಳು ಇಂದಿನವರು
ಆದಿ ಪ್ರಕೃತಿಯ ಜೀವ ಪ್ರಕೃತಿಯ ಭೇದವ ಬಲ್ಲವರ ಪಾದವೇ ಗತಿಯನಗೆ ರಾಮನಾಥ!
ಚಲನಶೀಲವಾದಂತಹ ರೀತಿಯನ್ನು ನಾನು ಅರಿಯಬೇಕು ಎಂಬುದನ್ನು ವ್ಯಕ್ತಪಡಿಸುತ್ತಾರೆ.
ಹಿಂದೂ ಕೂಡ ಆದಿ ಇತ್ತು, ಪ್ರಕೃತಿ ಇತ್ತು, ಜೀವ ಚಲನ ಶೀಲವಾಗಿತ್ತು, ಆದರೆ ಕಣ್ಣಿಗೆ ಕಾಣುತ್ತಿರಲಿಲ್ಲ, ಇಂದೂ ಕೂಡ ಅದೇ ಪ್ರಕೃತಿ ಅದೇ ತತ್ವಗಳು ಇದ್ದರೂ ಕೂಡ ಅದು ಮುಂದುವರೆದುಕೊಂಡು ಹೋಗುತ್ತಿದೆ ಆದರೂ ಜೀವ ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ ಇದು ಅಲೌಕಿಕ ,ಲೋಕವನ್ನು ಕಣ್ಣಿಗೆ ಕಾಣಲಾರದಂತಹ ಅಲೌಕಿಕ ಜೀವನದ ಸ್ಥಿತಿಯನ್ನು ಹಾಗೂ ಯಾವುದು ಭೇದ ಯಾವದು ಅಭೇದ ಎನ್ನುವುದನ್ನು ಯಾವದು ಅರಿತುಕೊಂಡು ಮುನ್ನಡೆಸಿಕೊಂಡು ಹೋಗುತ್ತದೆಯಲ್ಲ ಅದು ಎನಗೆ ಬೇಕು ಎಂದು ಹೇಳುತ್ತಾರೆ , ಭೇದವ ಬಲ್ಲವರ ಪಾದವೇ ಗತಿ ಎನಗೆ ರಾಮನಾಥ ಅಂತವರು ಎನೆಗೆ ಬೇಕು ಇಂತಹುದನ್ನು ಕಂಡುಕೊಂಡವರು ಯಾರಾದರೂ ಇದ್ದರೆ ಅವರೇ ಮಹಾತ್ಮರು ,ಶರಣರು .ಅಂತವರಿಂದ ಮಾತ್ರ ನಾನು ಗತಿಯನ್ನು ಮುಟ್ಟುತ್ತೇನೆ. ಇಲ್ಲಿ ಗತಿ ಎಂದರೆ ಮೋಕ್ಷ ಅಲ್ಲ ,ಚಲನೆ ಎಂದರ್ಥ ಇವರ ಮೂಲಕವೇ ನಾವು ಹೋಗಿದ್ದೆ ಆದರೆ ಚಲಿಸ್ತಾ ಇರತಿವಿ, ಕ್ರಿಯಾಶೀಲರಾಗ ತೀವಿ,ನಮಗೂ ಕೂಡ ಕಲ್ಯಾಣದ ಸ್ಥಿತಿ ಬರ್ತದ ಅದನ್ ಎನಗೆ ತೋರಿಸು ಎನ್ನಲು ಬಲ್ಲವರ ಪಾದವೇ ಗತಿಯೆಂದು ಹೇಳುತ್ತಾರೆ.
ಈ ವಚನ ಲೌಕಿಕ ಮತ್ತು ಅ ಲೌಕಿಕ ವನ್ನುಒಳಗೊಂಡಿದೆ. ಉದಾಹರಣೆಗೆ ನಮ್ಮ ದೇಹವನ್ನು ನೋಡಿದಾಗ ಪ್ರಕೃತಿ ಸಹಜಯುಕ್ತವಾಗಿ ಲೋಕಿಕವಾದದ್ದು ಬರೆ ಜೀವವನ್ನು ನೋಡಿದಾಗ ಅ ಲೌಕಿಕವಾದದ್ದು.
ಜೀವವನ್ನು ತೋರಿಸಲಿಕ್ಕೆ ಸಾಧ್ಯವೇ? ಇಲ್ಲ ಹಾಗಾದರೆ ನಮ್ಮೆಲ್ಲರಿಗೂ ಕಾಣುತ್ತಿರುವ ನಾನು ನಾನಲ್ಲ, ಇವೆರಡನ್ನು ಸೃಷ್ಟಿ ಮಾಡಿ ಕಳುಹಿಸಿದಂತಹುದನ್ನು ಯಾರು ಅರಿತುಕೊಳ್ಳುತ್ತಾ ರೋ ಅವರೇ ಮಹಾತ್ಮರು . ಜೀವ ಕೊಟ್ಟವರು ಯಾರು? ಪ್ರಕೃತಿ ನಿರ್ಮಾಣ ಮಾಡಿದವರು ಯಾರು? ಇವೆರಡನ್ನೂ ತಿಳಿದುಕೊಳ್ಳಲು ಹಪಾಹಪಿಯುಳ್ಳವರು ಯಾರೆಂದರೆ ಮಹಾತ್ಮರು ,ಶರಣರು. ಯಾರು ಅದರತ್ತ ಸದಾ ಕಾಲ ಹುಡುಕಾಟದಲ್ಲಿ ಇರುತ್ತಾರೋ ಅಂತವರ ಸ್ನೇಹವನ್ನು ಒದಗಿಸು ಎಂದು ಕೇಳುತ್ತಾರೆ.
ಕೇವಲ ಜೀವನದ ಜಂಜಾಟದಲ್ಲಿ ಹೊನ್ನು ,,ಮಣ್ಣು, ನನ್ನದು ಎನ್ನುವವರೆಗೆ ಭೇದ ಭಾವ ಗೊತ್ತಾಗುವುದಿಲ್ಲ ,ಇವೆಲ್ಲವೂ ವೈಜ್ಞಾನಿಕವಾಗಿ ಸಾಧ್ಯವಾಗಿದ್ದ ರೂ ಕೂಡ ನಾವು ಅದನ್ನು ಅನುಸರಿಸಿದಾಗ ಮಾತ್ರ ಅರಿವನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ.
-ಪ್ರೊ ದೀಪಾ ಜಿಗಬಡ್ಡಿ ಬಾದಾಮಿ