ವಿಜಯ ಸಾಧಿಸಿದ ವಿಜಯಾನಂದ ಕಾಶಪ್ಪನವರ್…
e-ಸುದ್ದಿ ಹುನುಗುಂದ
ಹುನಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಾನಂದ ಎಸ್ ಕಾಶಪ್ಪನವರ ಮೊದಲಿನಿಂದಲೂ ಮುನ್ನಡೆಯನ್ನು ಸಾಧಿಸುತ್ತಾ ಅಂತಿಮವಾಗಿ ವಿಜಯ ಸಾಧಿಸಿದ್ದಾರೆ. ಕಾಶಪ್ಪನವರ್ ಗೆಲುವು ಸಾಧಿಸಿದ ಹಿನ್ನೆಲೆ ಇಲಕಲ್ಲ ನಗರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗುಲಾಲ ಹಾಕಿಕೊಂಡು ಕಾಂಗ್ರೆಸ್ಸಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಪರಸ್ಪರ ಬಣ್ಣ ಹಚ್ಚಿ ವಿಜಯೋತ್ಸವ ಆಚರಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶರಣಗೌಡ ಕಂದಕೂರು