ಮಾತೃತ್ವ

ಮಾತೃತ್ವ

ಏನೆಂದು ನಾ ವರ್ಣಿಸಲಿ ನಿನ್ನ ಮಾತೃತ್ವ ನಿವೃತ್ತಿಯಿಲ್ಲದ ಬದುಕು ನಿನ್ನದು ಎಷ್ಟು ಹುಡುಕಿದರೂ ಸಿಗದ ಪದ ಪುಂಜಗಳಲ್ಲಿ , ಏನೂ ಅಪೇಕ್ಷೆಯಿಲ್ಲದೆ ಸದಾ ನನಗಾಗಿ ನೊಂದು – ಬೆಂದು – ಸೊರಗುತ್ತಿರುವ ಜೀವ ನೀನು ಸಂಸಾರವೆಂಬ ಸಾಗರದಲ್ಲಿ ಈಜಿ ಮುಳುಗದೆ ತೇಲುವ ನೌಕೆಯಲ್ಲಿ ಅದಮ್ಯ ಚೇತನಳು ನೀನಾದೆ ನೀನಾಡುವ ಒಂದೊಂದು ಮಾತುಗಳು ಕಡಲಾಳದ ಮುತ್ತುಗಳು ನಿನ್ನಯ ಹಾಲಿನಂತಹ ಮನಸು ದೇವರಲ್ಲಿ ಬೇಡುತ್ತೆ ನಮಗಾಗಿ ಆಯಸ್ಸು ಸರ್ವಶಕ್ತಳಾಗಿ ನೀನುಣಿಸಿದ ಊಟ – ಹಾಲು ಉಕ್ಕಿನಂತಿದೆ ಇಂದಿಗೂ ನನ್ನ ಕೈ ಕಾಲು ನಿನ್ನಯ ಜೇನುಗೂಡಿನಿಂದ ಅನುಬಂಧ ಎಷ್ಟು ತೇಯ್ದರು ಕಡಿಮೆ ಆಗದ ಶ್ರೀಗಂಧನಿನ್ನದೇ ಶಾಂತಿ – ಸಹನೆ – ಸಾಹಸದೊಂದಿಗೆ ಎಲ್ಲವನ್ನೂ ದೈರ್ಯದಿಂದ ಎದುರಿಸುವ ಶಕ್ತಿ ನೀಡೆನಗೆ 🙏

ಡಾ.ಮಮತ (ಕಾವ್ಯಬುದ್ಧ)

Don`t copy text!