ಬದುಕು ಭಾರವಲ್ಲ 22

ಸೋಲನ್ನು ಸವಾಲಾಗಿ ಸ್ವೀಕರಿಸಿ…

ಈ ಜಗತ್ತು ನಿಂತಿರುವುದು ಸ್ಪರ್ಧೆಯ ಮೇಲೆ .ಪ್ರತಿ ಪ್ರಾಣಿ ಪಕ್ಷಿಗಳ ನಡುವೆಯೂ ಒಂದು ರೀತಿಯ ಸ್ಪರ್ಧೆಯು ಏರ್ಪಟ್ಟಿರುವಾಗ ಇನ್ನೂ ಮನುಷ್ಯರಾದವರು ಪ್ರತಿ ಹಂತದಲ್ಲಿಯೂ ಒಂದು ರೀತಿಯ ಸ್ಪರ್ಧೆಯು ಏರ್ಪಟ್ಟಿರುವಂತೆ ಕಾಣುತ್ತದೆ .
ಓದುವಾಗ, ಬರೆಯುವಾಗ, ಓಡುವಾಗ, ಜಿಗಿವಾಗ, ಈಜುವಾಗ ,ಹಾರುವಾಗ, ಪರೀಕ್ಷೆಯಲ್ಲಿ . ಇಲೆಕ್ಷಣದಲ್ಲಿ ಪ್ರತಿ ಕೆಲಸ ಕಾರ್ಯದಲ್ಲಿ ಸ್ಪರ್ಧೆಯು ಇದ್ದು . ಗೆಲವು ಸಾಧಿಸಿದ ಎಲ್ಲಾ ವ್ಯಕ್ತಿಗಳಲ್ಲಿ ಸಂತೋಷದ ಹೊಳೆ ಹರಿಯುತ್ತದೆ .
ಸೋತ ವ್ಯಕ್ತಿಗಳಲ್ಲಿ ಹತಾಸೆ ನಿರಾಸೆ ಇರುವುದು .ಯಾವ ಕೆಲಸ ಮಾಡಲು ಮನಸ್ಸು ಹಿಂದೇಟು ಹಾಕುವುದು ಕೆಲವು ವ್ಯಕ್ತಿಗಳಿಗೆ ಜೀವನವೇ ಬೇಡವಾಗುತ್ತದೆ. ಬದುಕು ಭಾರವಾಗಿ ಹೋಗುತ್ತದೆ.

ಇಂಥಹ ಪರಿಸ್ಥಿತಿಯಲ್ಲಿ
ತಾನು ಇರುವ ಜಾಗವನ್ನು ತಾತ್ಕಾಲಿಕವಾಗಿ ಬದಲಿಕೊಳ್ಳಬೇಕು.

ಸಂಬಂಧಿಕರ ಮನೆಗೋ ಆತ್ಮೀಯ ಸ್ನೇಹಿತರ ಮನೆಗೋ ಹೋಗಿ ಮನ ಬಿಚ್ಚಿ ಮಾತನಾಡಿದಾಗ ಮನ ಹಗುರಾಗಿ ಬದುಕಬೇಕು .ಈ ಬದುಕು ಭಾರವಲ್ಲ ಅನ್ನುವ ಅನುಭವಕ್ಕೆ ಬಂದು ಬಿಡುತ್ತೇವೆ .

ಆತ್ಮೀಯ ಸ್ನೇಹಿತರ ಮನೆಗೆ ಹೋಗಲು ಮನ ಒಪ್ಪದಿದ್ದಾಗ ಪುಣ್ಯ ಕ್ಷೇತ್ರ ದ ದರುಶನ ಪಡೆದಾಗ ಮಾನಸಿಕವಾಗಿ ಕುಗ್ಗಿ ಹೋದ ಮನ ಕ್ಕೆ ನವ ಚೈತನ್ಯ ಮೂಡಿ ಬಂದಂತೆ ಆಗುವುದು .

ಬದುಕಿ ಸಾಧಿಸಿ ತೋರಿಸುವ ಛಲ ಹುಟ್ಟಿಕೊಳ್ಳುತ್ತದೆ. ನೋಡಿ ನಕ್ಕ ಮನಸ್ಸಿಗೆ ಸಾಧನೆಯೇ ಉತ್ತರ ನೀಡುತ್ತದೆ .

ಸೋಲನ್ನು ಸವಾಲಾಗಿ ದಿಟ್ಟವಾಗಿ ದೈರ್ಯವಾಗಿ ಎದುರಿಸಿ ನಿಲ್ಲಬೇಕು

ಯಾವುದೇ ಎಡರು ತೊಡರು ಬಂದರೂ ಎದೆಗುಂದಬಾರದು.
ಇಂಥಹ ಸಂದರ್ಭಗಳಲ್ಲಿಯೇ ನಮಗೆ ಹಲವಾರು ಎಡರು ತೊಡರುಗಳು ಬಂದು ಸಾಧನೆಯ ಕಾಲನ್ನು ಜಗ್ಗಿ ಎಳೆದಂತೆ ಆಗುತ್ತದೆ . ಸಾಧನೆ ಮಾಡುವ ಮನಸ್ಸು .ಎಂತಹದೇ ಎಡರು ತೊಡರು ಬಂದರೂ ಎದುರಿಸಿ ಗೆಲುವು ಸಾಧಿಸಿಯೇ ತಿರುತ್ತದೆ.

ನಾನು ಬಿ ಎ ಓದುತ್ತಿದ್ದೆ .
ನಮ್ಮ ಅಣ್ಣನ ಕಡೆಯಿಂದ ಯಾವಾಗಲೂ ಬೈಯಿಸಿಕೊಳ್ಳುತ್ತಿದ್ದೆ.
ತಿನ್ನುವುದು ಮಲಗುವುದು ಸರಿಯಾಗಿ ಓದುವುದಿಲ್ಲ.ನೀನು ಎಂದು ನನಗೆ ಪದೇ ಪದೇ ಅನ್ನುತ್ತಿದ್ದ .
ನನಗೆ ಓದಲು ಸಮಯ ಸಿಗುತ್ತಿರಲಿಲ್ಲ

. ತುಂಬಿದ ಮನೆ ರೈತರ ಮನೆ ಮನೆಗೆ ಬರುವರು ಹೋಗುವರು .ಅಕ್ಕಂದಿರು ಅವರ ಡಿಲೇವರಿ ಕೆಲಸ ಅದು ಇದು ಸಮಯ ಹೇಗೆ ಓದಲಿ ?ಹೇಗೆ ಪಾಸ್ ಮಾಡಲಿ? ಎಂದು ಬೆಳಿಗ್ಗೆ 3 ಗಂಟೆಗೆ ಏಳಲು ಸುರು ಮಾಡಿದೆ 3 ಗಂಟೆಗೆ ಎದ್ದರೂ ಕೂಡ ಓದಲು ಸಮಯವಿಲ್ಲ ಏಕೆಂದರೆ ಕುಡಿಯುವ ನೀರು ಮಧ್ಯ ರಾತ್ರಿಯೇ ಬರುತ್ತಿದ್ದವು .ಕಿಟಕಿಯಲ್ಲಿ ಪುಸ್ತಕ ಇಟ್ಟು ಕೊಡ ತುಂಬುವವರೆಗೆ ಓದುತ್ತಿದ್ದೆ ಮತ್ತೆ ಕೊಡ ತುಂಬಿದ ನಂತರ ಒಳಗೆ ಹೋಗಿ ತುಂಬಿದ ಕೊಡ ಸುರವಿ ಬಂದು ಓದಬೇಕು ಅಷ್ಟೋತ್ತಿಗೆ ಬೆಳಗೆ ಆಗಿ ಬಿಡುತ್ತಿತ್ತು .ಮತ್ತೆ ಬೆಳಿಗ್ಗೆ 6 ಗಂಟೆಯ ರೆಡಿಯಾಗಿ ಬಸ್ಸನ್ನು ಹಿಡಿಯಬೇಕು ಬಸ್ಸು ಹೋಗಿದ್ದರೆ ಬೆಳಿಗ್ಗೆಯ ಒಂದು ಕ್ಲಾಸು ತಪ್ಪುತ್ತಿತ್ತು.
ಪರೀಕ್ಷೆಗಳು ಹತ್ತಿರ ಬಂದವು ಎಲ್ಲರೂ ಮಲಗಿದ ಮೇಲೆ ಯಾರಿಗೂ ಗೊತ್ತಾಗದಂತೆ ಓದುತ್ತಿದ್ದೆ .ಪರೀಕ್ಷೆಯ ಫಲಿತಾಂಶ ನೋಡಿದಾಗ ಅಚ್ಚರಿ ನಾನೇ ಕ್ಲಾಸಿಗೆ ಪಷ್ಟು. ಪ್ರಥಮ ಬಂದರೂ ಕುಣಿದಾಡಲಿಲ್ಲ ಸಂತೋಷ ಪಡಲಿಲ್ಲ ಮುಂದಿನ ಶಿಕ್ಷಣಕ್ಕಾಗಿ ಯೋಚಿಸಿದೆ.
ನನ್ನ ಸಮಸ್ಯೆಗಳನ್ನು ನಾನು ಸವಾಲಾಗಿ ತೆಗೆದುಕೊಂಡು ಗುರು ಹಿರಿಯರ ಆಶೀರ್ವಾದದಿಂದ ಕಾಲೇಜಿಗೆ ಪ್ರಥಮ ಬಂದೆ .
ಕೊನೆಗೆ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ಕರ್ನಾಟಕ ಪಬ್ಲಿಕ ಸ್ಕೂಲಿನ ಪ್ರಾಚಾರ್ಯರಾಗಿ ನನ್ನ ಕನಸು ಡಾಕ್ಟರೇಟ ಪಡೆಯುವುದಾಗಿತ್ತು ಸಿಕ್ಕ ಡಾಕ್ಟರೇಟ ಪದವಿ ಬಿಟ್ಟು ಬಂದ ನೋವು ನನ್ನನ್ನು ಕಾಡುತ್ತಿತ್ತು.ಕೊನೆಗೆ ನನ್ನ ನೋವು ದೇವರಿಗೆ ಗೊತ್ತಾಗಿರಬೇಕು ಅಮೇರಿಕ ವಿಶ್ವ ವಿದ್ಯಾಲಯವು ನನಗೆ ಗೌರವ ಡಾಕ್ಟರೇಟ ಕೊಟ್ಟು ಗೌರವಿಸಿದ್ದು ಮರೆಯದ ನೆನಪು. ಹೀಗೆ ಸೇವೆ ಸಲ್ಲಿಸುತ್ತಿರುವುದು.ಗುರು ಹಿರಿಯ ರ ಆಶೀರ್ವಾದ ಮತ್ತು ನಾನು ಪಟ್ಟ ಶ್ರಮ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸಿದ ಮನ ಎಂದರೆ ತಪ್ಪಿಲ್ಲ ಅಲ್ಲವೇ ?

ನಾನು ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಪಾಠ ಮಾಡುವಾಗ ಗಂಡು ಮಕ್ಕಳು ನೀವು ಸರಿಯಾಗಿ ಓದಬೇಕು ಸರಿಯಾಗಿ ಓದುವುದಿಲ್ಲ.ಒಬ್ಬರಾದರೂ ನನ್ನ ವಿಷಯದಲ್ಲಿ 100 ಕ್ಕೆ 100 ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ 90 ಆದರೂ ದಾಟಿ ನೋಡೋಣ ಯಾರೂ ದಾಟುವುದಿಲ್ಲ ನೀವು ಅಂದೆ ಪರೀಕ್ಷೆ ಮುಗಿದು ಫಲಿತಾಂಶ ಬಂತು .ಒಬ್ಬ ವಿದ್ಯಾರ್ಥಿ ನಾಗಪ್ಪ ಅಂಗಡಿ ಅಂತಾ ಮೆಡಂ ನಮಸ್ಕಾರ ನಾನು ನಾಗಪ್ಪ ಅಂಗಡಿ ನಿಮ್ಮ ವಿಷಯದಲ್ಲಿ ನನಗೆ 97 ಅಂಕ ಬಂದಿದೆ ನೋಡಿ ಯಾರೂ ಗಂಡು ಮಕ್ಕಳು 90 ದಾಟುವುದಿಲ್ಲ ಅಂದ್ರಿ ನಾನು ಮಾಡಿದೆ ನೋಡಿ ಮೆಡಂ very good ಅಂದೆ.
ಈ ವಿದ್ಯಾರ್ಥಿಯ ಹಾಗೇ ಇತರರು ಸೋಲನ್ನು ಸವಾಲಾಗಿ ತೆಗೆದುಕೊಂಡರೆ ನಿಜಕ್ಕೂ ಯಾವೊಬ್ಬ ವಿದ್ಯಾರ್ಥಿಗಳು ಅನುತ್ತೀರ್ಣ ಗೊಳ್ಳಲಾರರು ಅಲ್ಲವೇ ?
ಕೆಲವೊಂದು ಗೆಲುವು ಸಾರ್ವಜನಿಕ ರಿಂದ ಆಗುತ್ತದೆ ನಾವು ಸಾರ್ವಜನಿಕರಿಗೆ ಮಾಡಿದ ಕೆಲಸ ಕಾರ್ಯಗಳಿಂದ ನಮ್ಮನ್ನು ಗುರುತಿಸಿ ಜನರೇ ಆಯ್ಕೆ ಮಾಡಿ ಕಳುಹಿಸುತ್ತಾರೆ .
ಸೋಲನ್ನು ನಾವು ಯಾವಾಗಲೂ ಧನಾತ್ಮಕವಾಗಿ ತೆಗೆದುಕೊಳ್ಳಬೇಕು .

ಇವತ್ತು ಜಯಿಸಲು ಆಗದಿದ್ದರೂ ಮುಂದಿನ ಅವಕಾಶಗಳಲ್ಲಿ ಆದರೂ ಜಯಿಸುವೆ. ಉತ್ತೀರ್ಣ ಆಗುವೆ ಎನ್ನುವ ಆಶಾಭಾವನೆಯಿಂದ ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕು.

ಸೋತವರು ಗೆದ್ದವರ ಮೇಲೆ ಯಾವತ್ತೂ ಸೇಡನ್ನು ಇಟ್ಟುಕೊಳ್ಳಬಾರದು.

ಅನುತ್ತೀರ್ಣ ಗೊಂಡರೂ ಸತತ ಪ್ರಯತ್ನ ಇರಬೇಕು

ಸಮಯವನ್ನು ವ್ಯರ್ಥ ಮಾಡಲಾರದೇ ಸಮಯಕ್ಕೆ ಅಧೀನ ರಾಗಿ ಶ್ರದ್ಧಾ ಭಕ್ತಿಯಿಂದ ತಲ್ಲೀನರಾಗಿ ಓದಬೇಕು .

ಅವತ್ತಿನ ಸಮಸ್ಯೆಗಳನ್ನು ಅವತ್ತೇ ಪರಿಹರಿಸಿಕೊಳ್ಳಬೇಕು.

ತಂದೆ ತಾಯಿಯ ಹಾಗೂ ಕಲಿಸಿದ ಗುರುಗಳಲ್ಲಿ ಭಕ್ಕಿಭಾವ ಇರಬೇಕು

ಒಟ್ಟಿನಲ್ಲಿ ಸೋಲನ್ನು ನಗು ನಗುತ್ತ ಸ್ವೀಕರಿಸುವ ಮನವು ಇದ್ದಾಗ ಮುಂದಿನ ಗೆಲುವಿಗೆ ಕಾರಣವಾಗುವುದಲ್ಲವೇ?

-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು
ಕರ್ನಾಟಕ ಪಬ್ಲಿಕ್ ಸ್ಕೂಲ್

Don`t copy text!