ನರೇಗಾ ಕೂಲಿಕಾರರಿಗೆ ಸ್ಥಳದಲ್ಲಿಯೇ ಅರೋಗ್ಯ ತಪಾಸಣಾ ಶಿಬಿರ…

e-ಸುದ್ದಿ ಇಳಕಲ್

ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಮಾನ್ಯ ಸಹಾಯಕ ನಿರ್ದೇಶಕರು, ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಅಯೋಜಿಸಿ, ಅವರಿಗೆ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಎಲ್ಲಾ ಅರೋಗ್ಯ ಅಧಿಕಾರಿಗಳು, ಸಿಬ್ಬಂದಿಯವರೊಂದಿಗೆ ಸೌಲಭ್ಯ ಒದಗಿಸಲಾಗುತ್ತಿದೆ.

ಇಂತಹ ಉತ್ತಮವಾದ ಸೌಲಭ್ಯವನ್ನು ಎಲ್ಲಾ ಕೂಲಿಕಾರರು ತಪ್ಪದೇ ಪಡೆದುಕೊಳ್ಳಲು ಮನವಿ ಮಾಡಿದರು. ಮತ್ತು ಏಪ್ರಿಲ್ ತಿಂಗಳಿನಿಂದ 309 ರಿಂದ 316/- ಹೆಚ್ಚಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಹಣವನ್ನು ನೀಡಲಾಗುವುದರ ಜೊತೆಗೆ, ಕಲ್ಬುರ್ಗಿ ಮತ್ತ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಅನ್ವಯಿಸುವಂತೆ,ಬೆಸಿಗೆ ತಾಪಮಾನದ ಪರಿಣಾಮವಾಗಿ, ಕೂಲಿಕಾರರ ಹಿತದೃಷ್ಟಯಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೆಲಸ ಪರಿಮಾಣದಲ್ಲಿ ಶೇ 30% ರಷ್ಟು ರಿಯಾಯ್ತಿ ನೀಡಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಡಿಒ ಹಾಗೂ TC ,ಐಇಸಿ ಸಂಯೋಜಕರು, ಹಾಗೂ ಕಾರ್ಯದರ್ಶಿ ಹಾಗೂ BFT,ಗ್ರಾಮ ಪಂಚಾಯತಿ , ಸಿಬ್ಬಂದಿ ವರ್ಗದವರು ಮತ್ತು ನರೇಗಾ ಮೇಟ್ ಕೂಲಿಕಾರರು ಹಾಜರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!