ಬದುಕಿಗೆ ಆಶ್ರಯ ಆಯಿತೇ ಸ್ವಾನ?

ಬದುಕು ಭಾರವಲ್ಲ ಸಂಚಿಕೆ 24

ಬದುಕಿಗೆ ಆಶ್ರಯ ಆಯಿತೇ ಸ್ವಾನ?

ಈ ಜಗತ್ತಿನಲ್ಲಿ 84 ಲಕ್ಷ  ಜೀವರಾಶಿಗಳಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಈ ಮನುಷ್ಯನಿಗೂ ಹಾಗೂ ಪ್ರಾಣಿಗಳಿಗೆ ಒಂದು ರೀತಿಯ ನಂಟು .
ಸಾಕಿದ ಯಾವುದೇ ಪ್ರಾಣಿ ಇರಲಿ ಪಕ್ಷಿ ಇರಲಿ ಸಾಕಿದ ಒಡೆಯನಿಗೆ ಅರಿವು ಬಾರದೇ ಋಣ ತೀರಿಸಿಯೇ ಸಾಯುತ್ತವೆ.
ಒಂದೊಂದು ಮನೆಗಳಲ್ಲಿ ಮನೆಯನ್ನು ಕಾಯಲಿಕ್ಕೆ, ತೋಟವನ್ನು ಕಾಯಲಿಕ್ಕೆ ,ಕಳುವು ಆದದ್ದನ್ನು ಪತ್ತೆ ಹಚ್ಚಲಿಕ್ಕೆ ಭೇಟೆಗಾಗಿಯೋ ಶೋಕಿಗಾಗಿಯೋ ಅನೇಕ ರೀತಿಯ ಸ್ವಾನಗಳ ತಳಿಗಳನ್ನು ತಂದು ಸಾಕುವರು. ಮನುಷ್ಯನಷ್ಷೇ ಆತ್ಮೀಯತೆ ಈ ಸ್ವಾನಗಳ ಮೇಲೆ ಇರುವುದನ್ನು ನಾವು ನೀವುಗಳೆಲ್ಲ ನೋಡಿದ್ದೇವೆ ಕೇಳಿದ್ದೇವೆ .ಕೋಟಿ ಬೆಲೆ ಬಾಳುವ ಈ ಸ್ವಾನಗಳು ಮನೆಯ ಯಜಮಾನಿಗೆ ಏನಾದರೂ ತೊಂದರೆ ಯಾದರೆ ಅದು ತನ್ನ ಪ್ರಾಣ ಲೆಕ್ಕಿಸದೇ ಒಡೆಯನ ಜೀವ ಉಳಿಸುವುದು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದ್ದೆ .
ಸುಮಾರ 45 ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದರಂತೆ. ನಮ್ಮದು ರೈತ ಕುಟುಂಬ ದಿನಾಲು ಹೊಲದ ಕೆಲಸಕ್ಕೆ ಚಕ್ಕಡಿ ಹೂಡಿಕೊಂಡು ಹೊಲಕ್ಕೆ ಹೋಗುವಾಗ ಚಕ್ಕಡಿ ಜೊತೆಗೆ ದಿನಾಲು ನಾಯಿ ಜೊತೆಗೆನೇ ಬರುತ್ತಿತ್ತಂತೆ. ಒಂದೊಂದು ದಿವಸ ಹೊಲದ ಕೆಲಸ ಬಹಳ ಇದ್ದರೆ ರಾತ್ರಿ ಆದರೆ ನಮ್ಮ ತಂದೆ ಹೊಲದಲ್ಲಿಯೇ ಇರುತ್ತಿದ್ದರಂತೆ. ನಾಯಿ ನಮ್ಮ ತಾಯಿ ಜೊತೆಗೆ ಮನೆಗೆ ಬಂದು ಮಾರನೇಯ ದಿನ ರೊಟ್ಟಿ ಬುತ್ತಿ ಯನ್ನು ಕಟ್ಟಿಕೊಟ್ಟರೆ ಸುಮಾರು 6 ಕಿ ಮಿ ಹೊಲಕ್ಕೆ ಬಾಯಿಯಲ್ಲಿ ರೊಟ್ಟಿಗಂಟನ್ನು ಹಿಡಿದುಕೊಂಡು ಹೋಗಿ ಹೊಲಕ್ಕೆ ಕೊಟ್ಟು ಬರುತ್ತಿತ್ತಂತೆ. ಇದು ಮಾಡುವ ಕೆಲಸ ನೋಡಿ ಏನಾಯಿತೋ ಗೊತ್ತಾಗಲಿಲ್ಲ ಒಮ್ಮೆಲೇ ಸತ್ತು ಹೋಯಿತಂತೆ ಅವಾಗ ಅದರ ಕಳೆಬರವನ್ನು ನಮ್ಮ ಮನೆಯ ಹಿತ್ತಲಲ್ಲಿ ಬಹಳ ದುಃಖದಿಂದ ಮಣ್ಣು ಮಾಡಿದರಂತೆ.
ಇದು ಸತ್ತ ಮೇಲೆ ಮತ್ತೊಂದು ನಾಯಿಯನ್ನು ನಮ್ಮ ಮನೆಯಲ್ಲಿ ತಂದಿದ್ದರು ನನಗೆ ತಿಳುವಳಿಕೆ ಬಂದಿತ್ತು .ಪದೇ ಪದೇ ನಮ್ಮ ತಂದೆಯ ಮೇಲೆಯೇ ಬಂದು ಮನುಷ್ಯರ ತರ ಬಂದು ಕುಳಿತು ಕೊಳ್ಳುತ್ತಿತ್ತು.ಬೈದರ ಅದಕ್ಕೆ ಅರ್ಥ ಆಗುತ್ತಿತ್ತು .ಸಿಟ್ಟಿನಿಂದ ರೊಟ್ಟಿಒಗೆದರೆ ತಿನ್ನುತ್ತಿರಲಿಲ್ಲ.ಅದಕ್ಕೆ ಒಂದು ತಾಟು ಅದರಲ್ಲೇ ಇಟ್ಟರೇ ಮಾತ್ರ ತಿನ್ನುತ್ತಿತ್ತು.ನಿಮ್ಮ ಮನೆಯಲ್ಲಿಯೂ ಇರಬಹುದು ಆದರೆ ಮುಂದೆ ಓದಿ ಈ ಸ್ವಾನ ದ ಕೆಲಸ ಏನ ಮಾಡಿತು ಅಂತಾ .
ದಿನಾಲೂ ನಮ್ಮ ತಂದೆ ಸ್ನಾನ ಮಾಡಿ ಲಿಂಗ ಪೂಜೆಯನ್ನು ಮಾಡಿಕೊಂಡು ನಂತರ ಆ ಲಿಂಗವನ್ನು ಕೊರಳಲ್ಲಿ ಹಾಕಿಕೊಳ್ಳುವರು ಆಮೇಲೆ ಆಹಾರ ತೆಗೆದು ಕೊಳ್ಳುತ್ತಿದ್ದರು .ನಮ್ಮ ತಂದೆ ಯ ಪೂಜಾ ವಿಧಾನ ಬೇರೆ ಯಾರು ಪಾಲಿಸುವರೋ ನನಗೆ ಗೊತ್ತಿಲ್ಲ ಆದರೆ ನಮ್ಮ ತಂದೆಯ ಭಕ್ತಿಯೇ ನನಗಿಂದು ಆದರ್ಶ. ಮತ್ತು ಅನುಕರಣೀಯ .ದಿನಾಲು ಛಳಿ ಇರಲಿ ಮಳೆ ಇರಲಿ ತನ್ನೀರಿನ ಸ್ನಾನ ಮಾಡುವರು .ಅವತ್ತು ಬೇಗ ಹೊಲಕ್ಕೆ ಹೋಗಬೇಕು ಅಲ್ಲೇ ಹುಕ್ಕೇರಿ ಮಲ್ಲಿಕಾಜಪ್ಪ ಪ್ಪನವರ ತೋಟದ ಹಳ್ಳದ ನೀರಿನಲ್ಲಿ ಸ್ನಾನ ಮಾಡಿದರಾಯಿತೆಂದು ಲಿಂಗಪ್ಪ ನನ್ನು ಹಾಕೊಂಡ ಹೊಲಕ್ಕ ಚಕ್ಕಡಿ ಹೊಡಕೊಂಡ ಹೊರಟರು. ನಾಯಿ ಜೊತೆಗೇ ಹಿಂದೆ ಹಿಂದೆ ಹಳ್ಳದಲ್ಲಿ ಸ್ನಾನ ಮಾಡುವಾಗ ಲಿಂಗಪ್ಪನಿಗೂ ಸ್ನಾನ ಮಾಡಿಸಿ ಮೈ ಒರೆಸಿಕೊಂಡು ಚಕ್ಕಡಿ ಹೊಡಕೊಂಡ ಹೊಲಕ್ಕ ಬಂದ ನೋಡಿದರ ಕೊರಳಲಿ ಲಿಂಗಪ್ಪ ಇಲ್ಲ ತಂದೆಗೆ ಚಿಂತೆ ಎಲ್ಲಿ ಹೋದ ಲಿಂಗಪ್ಪ ಹಳ್ಳದಾಗ ಹರಿದು ಕೊಂಡ ಹೋದ ಅನ್ನುವ ಕಳವಳ ಯಾವ ಕೆಲಸ ಮಾಡಲಾಗುತ್ತಿಲ್ಲ.
ಎತ್ತುಗಳನ್ನು ಜಾಲಿ ಗಿಡದ ನೆರಳಿಗೆ ಕಟ್ಟಿ ಬರಬೇಕು ಎಂದು ಹೋಗುವಾಗ ನಾಯಿಯ ಬಾಯಿಯಲ್ಲಿ ನಮ್ಮ ತಂದೆಯ ಗುಂಡಗಡಿಗಿ ನೋಡಿ ತೆಗೆದುಕೊಂಡು ಕೊರಳಲಿ ಹಾಕೊಂಡು ಕೆಲಸ ಮಾಡಿ ಮನೆಗೆ ಬಂದು ನಡೆದ ಘಟನೆ ಹೇಳಿದರು .ಇದೇ ನಾಯಿಯ ಮೇಲೆ ವಾಹನ ಹಾಯ್ದು ನಡ ಮುರಿದು ಕೊಂಡು ಬಿದ್ದಾಗ ಬೇರೆ ಒಂದು ಮನೆಯಲ್ಲಿ ದೂರ ಇಟ್ಟಾಗ ಅದಕ್ಕೆ ಊಟ ಹಾಕಿ ಬರುತ್ತಿದ್ದ ನೆನಪು .
ಮೂಕಪ್ರಾಣಿಗಳ ಮೇಲೆ ದಯೆ ಇರಲಿ ಅನುಕಂಪ ಇರಲಿ ನಿಮ್ಮ ಸ್ವಾರ್ಥ ಸಾಧನೆಗೋಸ್ಕರ ಪ್ರಾಣಿಗಳನ್ನು ಹಿಂಸಿಸಬೇಡಿ


-ಡಾ ಸಾವಿತ್ರಿ ಮ ಕಮಲಾಪೂರ
ಪ್ರಾಚಾರ್ಯರು

Don`t copy text!