ಭಾವ ಬಿರಿದಾಗ

ಭಾವ ಬಿರಿದಾಗ

ಎದೆಯ ಗೂಡಿನಲಿ ಭಾವ ಬಿರಿದಾಗ
ನಸುನಕ್ಕು ನಗೆಯ ಬೀರಿದವರಾರೋ
ಸ್ನೇಹ ಹಂದರ ಕಟ್ಟಿ ಭಾವದಲ್ಲಿ ಬಿಗಿದಾಗ ಬಾಳ ಬಣ್ಣಗಳ ಕಾಮನಬಿಲ್ಲು ರಂಗೆರಿಸಿತ್ತು ಆ ಕ್ಷಣಕ್ಕೆ

ಯಾರದೋ ಭಾವಕ್ಕೆ ಮನದನಿಯ ಇಂಪಾಗಿ
ಮನಕೆ ತಂಪನೆರೆವರು
ಕೂಡುತಿಹ ಕೂಟದಲಿ
ಸ್ನೇಹ ಸಿಂಚನ ಮಾಡಿ
ಮೇಲು ಕೀಳುಗಳು
ಸಮಭಾವ ಸಮಸ್ಥಿತಿ

ನೋವು ನಲಿವುಗಳಲ್ಲಿ
ದನಿಯಾಗಿ ಬೆರೆತು ಕವಿಯ
ಕಾವ್ಯಕ್ಕೆ ನೀ ರೂಪಕವಾಗಿ
ಪದ ಲಾಲಿತ್ಯದಲಿ ಸೊಗಯಿಸಿ
ಕವಿಯ ಕಲ್ಪನೆಯಲಿ ವಿಹರಿಸುತಿಹುದು

-ಡಾ.ಮೀನಾಕ್ಷಿ ಪಾಟೀಲ
ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿಪೂರ್ವ ಕಾಲೇಜು
ವಿಜಯಪುರ

Don`t copy text!