ಗಝಲ್.

ಗಝಲ್

ರಾಗ ದ್ವೇಷದ ಸಂತೆಯಲಿ ಪ್ರೀತಿ ವಾತ್ಸಲ್ಯ ಅರಸುತ ಸಾಗದಿರು ನೀನು
ರಂಗಿನ ರಂಗೋಲಿ ಹುಯ್ದು ಮರುಳ ಮಾಡಿ ಇರುಳಲಿ ಹೋಗದಿರು ನೀನು.

ಜಗದಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆಯಲ್ಲವೇ
ಮೊಗದಲಿ ಹಸನ್ಮುಖಿ ತೋರುತ ಒಳಗೊಳಗೆ ಕೊಳ್ಳಿಯಿಡುತ ಬೀಗದಿರು ನೀನು.

ವಿಶ್ವಾಸವೇ ವಿಶ್ವವೆಂದು ನಂಬಿ ಬದುಕುವವರಿಗೆ ಮೋಸ ಮಾಡಬೇಡ.
ಅವಿಶ್ವಾಸ ಅವನತಿಯ ಮೂಲವೆಂದು ತಿಳಿದೂ ಕೂಡ ತೂಗದಿರು ನೀನು

ಬಣ್ಣದ ಲೋಕದಲ್ಲಿ ಬದುಕು ಭಾರವಾಗಿ ಹೆಜ್ಜೆ ಗುರುತು ಸಿಗದಂತಾಗಿದೆ.
ಬಣ್ಣನೆಗೆ ನಿಲುಕದ ಸಖಿ ನನ್ನವಳೆಂದು ಕಾಲೆಳೆದು ಮರೆತು ಮಾಗದಿರು ನೀನು.

ಮನಸು ಘಾಸಿ ಮಾಡಿ ನಗುವ ಖಯಾಲಿಗೆ ಜಯಾ ಮೌನ ಕಂಬನಿಯಾಗಿಹಳು
ಕನಸು ಹಾಸಿ ಕೈನೀಡಿ ಕರೆದು ಕರಗದ ಕರುಳೆ ಮರಳಿ ಸಿಗದಿರು ನೀನು

ಜಯಶ್ರೀ ಭ ಭಂಡಾರಿ.
ಬಾದಾಮಿ.

Don`t copy text!