ಸಶಕ್ತ ನಾರಿ..

ಸಶಕ್ತ ನಾರಿ..

 

ಹಳದಿ ಕಂಗಳ ಸಮಾಜದಿ
ಹೆಣ್ಣಾಗಿ ಹುಟ್ಟುವುದು ತಪ್ಪೇ..
ರೀತಿ ರಿವಾಜುಗಳ ನಾಲ್ಕು
ಗೋಡೆಗಳ ನಡುವೆ ನಾ ಬಂಧಿಯೇ..

ನಯ ನಾಜೂಕುಗಳ ಪಾಠ
ಹೆಣ್ಣಿಗೇ ಏಕೆ ಮೊದಲು
ನಡೆನುಡಿಗಳ ಪ್ರವಚನ
ಹೆಣ್ಣಿಗೇ ಏಕೆ ಬೇಕು..

ಕಾಲಡಿಯ ಗುಲಾಮಳು
ಗಂಡಿಗೇಕೆ ಅವಳು..
ವಂಶದ ಕುಡಿ ಬೆಳೆಯಲು
ಬೇಕೇ ನಿಮಗವಳು..

ನಾನೂ ನಿನಗೆ ಸಮಾನಳು
ಕೇಳು ಓ ಪುರುಷನೇ..
ನಾನು ಅಬಲೆಯಲ್ಲೀಗ
ಸಬಲ ಸಶಕ್ತ ನಾರಿ ನಾನೀಗ…!

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

Don`t copy text!