ನರೇಗಾ ಯೋಜನೆ ಅಡಿಯಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾದ ಬಲಕುಂದಿ ಗ್ರಾಮ ಪಂಚಾಯಿತಿ…

ನರೇಗಾ ಯೋಜನೆ ಅಡಿಯಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾದ ಬಲಕುಂದಿ ಗ್ರಾಮ ಪಂಚಾಯಿತಿ…

e-ಸುದ್ದಿ ಇಳಕಲ್

ಜಿಲ್ಲಾ ಪಂಚಾಯತ್ ಬಾಗಲಕೋಟೆ ಸಭಾಭವನದಲ್ಲಿ ನಡೆದ ಜಿಲ್ಲಾ ಪಂಚಾಯತ್ 2022-23ರ ಪ್ರಶಸ್ತಿ ಸಮಾರಂಭದಲ್ಲಿ ಇಲಕಲ್ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆ ಅಡಿಯಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ ಭೂಬಾಲನ್ ರವರು ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿದರು. ಪಂಚಾಯತಿಯ ಪಿಡಿಓ ಹುಲ್ಲಪ್ಪ ವಾಯ್ ಆವಿನ್ ಕಾರ್ಯದರ್ಶಿ ಸಂಗಪ್ಪ ಕುಡ್ಲೂರ, ತಾಂತ್ರಿಕ ಸಹಾಯಕ ಜಗದೀಶ ತಳವಾರ, ಗಣಕ ಯಂತ್ರ ನಿರ್ವಾಹಕ ಡಿ ಇ ಓ ಅಯ್ಯಪ್ಪ ಭಂಡಾರಿ ತಾಂಡಾ ರೋಜಗಾರ್ ಮಿತ್ರ ಅರ್ಜುನ ವಾಯ್ ರಾಠೋಡ ಇವರು ಪ್ರಶಸ್ತಿ ಸ್ವೀಕರಿಸಿದರು ಜಿಲ್ಲಾ ಉಪ ಕಾರ್ಯದರ್ಶಿಗಳಾದ ವಾಯ್ ಎನ್ ಬಸರಿ ಗಿಡದ ಯೋಜನಾ ನಿರ್ದೇಶಕರಾದ ಸಿ ಎಂ ಮುಂಡರಗಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಸಿದ್ಧರಾಮೇಶ್ವರ ಉಕ್ಕಲಿ ಅವರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!