ಶ್ರೀ ನರಸಿಂಹ
ಘುಡು ಘುಡಿಸುತಲಿ ಬಂದ
ದೇವ ನರಸಿಂಹ
ಕಂದ ತೋರಿದ ಕಂಬದಿ ಬಂದ
ನರಸಿಂಹ.
ಮಗನ ವರಗಳ ಇಂದು ನಿಜ
ಪಡಿಸುವೆನೆಂದು
ನರಸಿಂಹ ರೂಪವ ತಾಳಿ ಧರೆ
ಗಿಳಿದ ನರಸಿಂಹ.
ಕಂದ ಪ್ರಹ್ಲಾದನ ಕಷ್ಟಗಳ ತಿಳಿ
ಯುತಲಿ ಇದ್ದ
ಯುಕ್ತಿಯಲಿ ಅಸುರನ ಸವ ರಲು ಬಂದ ನರಸಿಂಹ.
ಎಲ್ಲೆಡೆ ಇರುವ ಈ ಕಂಬದಲಿ
ಇರುವ,
ಎಂಬ ಪ್ರಹ್ಲಾದನ ನುಡಿಗಳ ನಿಜ ಮಾಡಲು ಬಂದ ನರಸಿಂಹ.
ಗಂಡೆದೆಯ ಗಂಡಾಗಿ ಘುಡು
ಘುಡಿಸುತ ಬಂದ
ಹದ್ದು ಮೀರಿದ ಅಸುರನ ಪ್ರಾಣ
ಹರಣ ಮಾಡಿದ ನರಸಿಂಹ.
ಕಂದನ ತೊದಲು ನುಡಿಗಳ
ಪ್ರಾ ರ್ಥ್ನೆಯನಾಲಿಸುತ
ಅಸುರನಿಗೆ ಮುಕ್ತಿ ದಯ ಪಾಲಿ
ಸಿ, ಹರುಷದಿ ನಿಂದ ನರಸಿಂಹ.
ಭಕುತಿಯಲಿ ನೆನೆಯುತ ತಂದೆ
ಶ್ರೀ ಕೃಷ್ಣನ
ತಿಳಿದ ನುಡಿಗಳಲಿ ಬರೆದ ಇಂದು ಈ ಕೃಷ್ಣ.
–ಕೃಷ್ಣ ಬೀಡಕರ… ವಿಜಯಪುರ.