ಡಾ.ಗುರುಮಾಹಾಂತ ಸ್ವಾಮಿಜಿಗಳ ಆಶೀರ್ವಾದ ಪಡೆದ ಸಚಿವ ಎಂ ಬಿ ಪಾಟೀಲ್…

 

 ಡಾ.ಗುರುಮಾಹಾಂತ ಸ್ವಾಮಿಜಿಗಳ ಆಶೀರ್ವಾದ ಪಡೆದ ಸಚಿವ ಎಂ ಬಿ ಪಾಟೀಲ್…

 e-ಸುದ್ದಿ ವರದಿ ಇಳಕಲ್

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ ಬಿ ಪಾಟೀಲ್ ಅವರು ಇಳಕಲ್ ನಗರಕ್ಕೆ ಸಚಿವರಾದ ಮೇಲೆ ಪ್ರಥಮ ಬಾರಿಗೆ ಆಗಮಿಸಿದರು.
ಇಳಕಲ್ ನಗರಕ್ಕೆ ಆಗಮಿಸಿ ನಗರದ ಶ್ರೀ ವಿಜಯ ಮಹಾಂತೇಶ್ವರ ಮಠಕ್ಕೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದ ಸಚಿವರು ಕೆಲ ಸಮಯ ಶ್ರೀ ಗಳ ಜೊತೆ ಮಾತನಾಡಿದರು.

ನಂತರ ಮಠದ ಪರವಾಗಿ ಪೂಜ್ಯರು ನೂತನ ಸಚಿವರಾಗಿ ಆಗಮಿಸಿದ ಎಂ ಬಿ ಪಾಟೀಲ್ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮಠದ ಸದ್ಭಕ್ತರು ,ಸಂಘದ ಆಡಳಿತ ಮಂಡಳಿಯವರು ಹಾಗೂ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!