ಗೊರಬಾಳದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧಾರ…
e-ಸುದ್ದಿ ಇಳಕಲ್
ಸಮೀಪದ ಗೊರಬಾಳ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಗ್ರಾಮದ ಹಿರಿಯರು ಯುವಕ ಮಿತ್ರರು ನಿರ್ಧರಿಸಿದ್ದಾರೆ.
ದಿನಾಂಕ 07.06.2023 ರಂದು ಬೆಳಗ್ಗೆ 10 ಗಂಟೆಗೆ ಮಹಾತಾಯಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕುಂಭ ಹಾಗೂ ಕಳಸದೊಂದಿಗೆ ಪೋಟೋ ಮೆರವಣಿಗೆ ದೇಸಾಯಿ ಮತ್ಯಾನ ಗುಡಿಯಿಂದ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದವರೆಗೆ ನಡೆಯಲಿದೆ ಮಧ್ಯಾಹ್ನ ಹೇಮರೆಡ್ಡಿ ಮಲ್ಲಮ್ಮನ ಸರ್ವ ಭಕ್ತರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಅದೇ ದಿನ ಸಂಜೆ 5:00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ// ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು. ನಂದವಾಡಗಿ ಹಾಗೂ ಡಾ// ಶಿವಕುಮಾರ ಮಹಾಸ್ವಾಮಿಗಳು ಸಿದ್ದನ ಕೊಳ್ಳ ಮಠ ಇವರು ದಿವ್ಯಸಾನಿಧ್ಯ ವಹಿಸಲಿದ್ದು ಶ್ರೀಗಳವರ ಪ್ರವಚನ ನಡೆಸಲಿದ್ದಾರೆ.
ಗೊರಬಾಳ ಗ್ರಾಮದ ಎಲ್ಲ ಗುರು ಹಿರಿಯರು ಹಾಗೂ ತಾಯಂದಿರು ಮಕ್ಕಳು ಹಾಗೂ ಸುತ್ತಮುತ್ತಲ ಗ್ರಾಮಗಳ ಎಲ್ಲ ಹಿರಿಯರು ಯುವಕರ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರಾದ . ವಿಜಯಕುಮಾರ ತಾಳಿಕೋಟಿ.ಪರಶುರಾಮ ಅಮಾತ್ತೆಪ್ಪನವರು. ಮಾಹಾಂತೇಶ ಐದನಾಳ. ವಿರೇಶ ಸಂಗನಾಳ. ಆದೇಶ,ಹಾಗಲದಾಳ. ಪ್ರಕಾಶ ಗೌಡರ.ಕುಮಾರ,ಬಸನಗೌಡ ಗೌಡರ.ಚನ್ನನಗೌಡ.ಗೌಡರ.ಅಮರೇಶ,ಎಂ,ಗೌಡರ. ಸ್ವಾಮಿ ವಿವೇಕಾನಂದ ತರುಣ ಸಂಘದ ಯುವಕ ಮಿತ್ರರು ಹಾಗೂ ಹೇಮರಡ್ಡಿ ಮಲ್ಲಮ್ಮ ತರುಣ ಸಂಘದ ಎಲ್ಲಾ ಮಿತ್ರರು ವಿನಂತಿಸಿಕೊಂಡಿದ್ದಾರೆ.
ವರದಿಗಾರರು: ಶರಣಗೌಡ ಕಂದಕೂರ