ಯಶಸ್ವಿ ನೂರರ ಸಂಭ್ರಮದಲ್ಲಿ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನ
e-ಸುದ್ದಿ ಮಸ್ಕಿ
ಅಭಿನಂದನ್ ಸಂಸ್ಥೆಯ ಮೂಲಕ ಆರಂಭವಾಗಿರುವ ಸ್ವಚ್ಛ ಭಾರತದ ಕನಸನ್ನು ಹೊತ್ತು ಸಾಗುತ್ತಿರುವ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಯಶಸ್ವಿ ನೂರನೇ ವಾರದ ಸೇವಾ ಕಾರ್ಯವನ್ನು ಶತಮಾನದ ಕೀರ್ತಿಯನ್ನು ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಮಸ್ಕಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಶಾಲೆಯ ಮಹಾದ್ವಾರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಹಾದ್ವಾರಕ್ಕೆ ಬಣ್ಣವನ್ನು ಹಚ್ಚುವ ಮೂಲಕ ಹೊಸ ಕಳೆಯನ್ನು ನೀಡಲಾಯಿತು ಎಂದು ಸಂಡೇ ಫಾರ್ ಸೋಶಿಯಲ್ ಕಾನ್ಸ್ ಪೆಟ್ ರೂವಾರಿ ರಾಮಣ್ಣ ಹಂಪರಗುಂದಿ ಹೇಳಿದರು
ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಮಾತನಾಡಿ ಒಂದು ವಾರವೂ ಸಹ ಬಿಡದೆ ಇಲ್ಲಿಯವರೆಗೆ ಅಂದರೆ 100 ವಾರಗಳನ್ನು ಸ್ವಚ್ಛತೆಗಾಗಿ ಅರ್ಪಿಸಿ ಕಾರ್ಯವನ್ನು ನಿರ್ವಹಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನವು ಇನ್ನೂ ಉತ್ತರೋತ್ತರ ಸಾಧನೆಗಳನ್ನು ಮಾಡಿ ರಾಷ್ಟ್ರದಾದ್ಯಂತ ಗಮನ ಸೆಳೆದು ಕೀರ್ತಿಯನ್ನು ಪಡೆದುಕೊಂಡು ಮುನ್ನಡೆಯಲಿ ಎಂದು ಹೇಳಿದರು.
ಹಿರಿಯ ಶಿಕ್ಷಕರಾದ ಯಲ್ಲಪ್ಪ ಜಾಲಿಹಾಳ, ಮಹಮ್ಮದ್ ಹನೀಫ್, ಚನ್ನಬಸವಯ್ಯ ಗುಡದುರು, ಮಹಾಂತೇಶ ಮಸ್ಕಿ, ವಿರೇಶ ಸೌದ್ರಿ, ಮಾತನಾಡಿದರು.
ಬಾಲಸ್ವಾಮಿ, ರಾಮಸ್ವಾಮಿ, ಮೋಹನ್ ಕಟ್ಟಿಮನಿ, ಗೌರಮ್ಮ, ಗುಂಡುರಾವ್ ದೇಸಾಯಿ, ಕಳಕಪ್ಪ ಹಾದಿಮನಿ, ಮಹಾಂತೇಶ ಎಚ್, ಜಾಫರ್ಮಿಯ, ಇಂದೂಧರ ಸಾಲಿಮಠ, ಗೌರಮ್ಮ, ಅಭಿನಂದನ್ ಸಂಸ್ಧೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.