ಪರಿಸರ ಶುಭಕರ
ಪಂಚಭೂತಗಳಿಂದ ನಿರ್ಮಿತ ಈ ಭೂಮಂಡಲ
ತನ್ನ ಹಿಡಿತದಲ್ಲಿ ಕಾಪಾಡಿಕೊಳ್ಳುವ ಸಮತೋಲ
ಋತುಮಾನಗಳ ಅರ್ಪಣೆಗೆ ನಿಸರ್ಗ ಸಮರ್ಧಿಸಿ
ಅನುಭವಿಸಿ ಬದುಕುವ ಪರಿಸರದ ಜೀವಸಂಕುಲ
ನಿಸರ್ಗ ಸಮತೋಲನ ಕೆರಳಿಸುತಿಹ ಅಜ್ಞಾನಿ ಪಡೆಗೆ
ಸ್ವಾರ್ಥಮನುಜನ ಪ್ರಶ್ನಾರ್ಥಕ ಪರಿಕ್ಷಣೆಯ ನಡೆ
ಪರಿಸರದ ಮೇಲೆ ಬೀರುವ ದುಷ್ಪರಿಣಾಮದ ತಡೆಗೆ
ಕೈಕೊಳ್ಳದ ಎಚ್ಚರಿಕೆಗೆ ಪ್ರಕೃತಿಯ ಮಡಿಲು ವಿನಾಶದೆಡೆ
ನಮ್ಮೆಲ್ಲರದಾಗಲಿ ಪರಿಸರ ಸಂರಕ್ಷಿಸುವ ಹೊಣೆ
ಹಸಿರು ಹಸಿರಾಗಿಸಲು ಭೂಮಿಗೆ ಜಲದ ಸಂರಕ್ಷಣೆ
ಮಳೆನೀರು ಸಂಗ್ರಹಿಸಲು ನಿಮ್ಮದಾಗಲಿ ಜಾಣ್ಮೆ
ಮನೆಗೊಂದು ಮರ ಬೆಳೆಸುವ ನಮ್ಮಯ ಪ್ರತಿಜ್ಞೆ
ಹಿತವಾಗಿರಲಿ ಧರೆಯ ವಾತಾವರಣ ಉಸಿರಾಡಲು
ಹಸಿರಾದ ಭೂಮಂಡಲವ ನಾವುಗಳು ಅಪ್ಪಿಕೊಳ್ಳಲು
ಸ್ವಚ್ಛತೆಯ ಪರಿಸರ ಜೀವಸಂಕುಲಕೆ ಹಿತಕರದಂತೆ
ಪರಿಸರದ ಜ್ಞಾನವಿದ್ದಲ್ಲಿ ಬಾಳು ಸುಖ ಸಾಗರದಂತೆ
ಬನ್ನಿ ಪ್ರಜೆಗಳೆ ಭೂಮಾತೆಯನ್ನು ತಣಿಸೋಣ
ಅವಳಿಟ್ಟ ಹಸಿರು ಹಾಸಿಗೆಯ ಹಸನಾಗಿಡೋಣ
ಬೆಳಕು ನೀಡಿ ಬೆಳೆಸುವ ಭಾಸ್ಕರಗೆ ನಮಿಸೋಣ
ಅಲ್ಲಿರಲಿ ನಮ್ಮೆಲ್ಲರ ಜೀವನದ ಸುಂದರ ಪಯಣ
ದಿನನಿತ್ಯದ ದಿನಚರಿಗೆ ಹಸಿರಿನ ಮನೆಯಂಗಳವು
ಪಡೆಯುವ ದೃಷ್ಟಿಗೆ ಶಕ್ತಿ ಚೈತನದ ಬಲವರ್ಧಕವು
ಜನಸಂಖ್ಯೆಯ ಸಾಗರದೊಳು ಕೈಕೊಳ್ಳುವ ನಿರ್ಧಾರ
ಮನುಕುಲಕೆ ಪರಿಸರವಾಗಲಿ ಶುಭಕರದ ಆಗರ
✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.