ಆಯ್ಕೆಯಾದ ನೂತನ ಸಚಿವರಿಗೆ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭ – ಡಾ.ಶಿವಕುಮಾರ್ ಸ್ವಾಮಿಜಿ..
e-ಸುದ್ದಿ ಇಳಕಲ್
ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ
ಸುಕ್ಷೇತ್ರ ಸಿದ್ದನಕೊಳ್ಳದ ಶ್ರೀಮಠದ ಡಾ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಾದದಿಂದ ಚುನಾಯಿತರಾದ ನೂತನ ಸಚಿವರಿಗೆ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭ ಸಿದ್ದನಕೊಳ್ಳ ಶ್ರೀಮಠದಲ್ಲಿ ಆವರಣದಲ್ಲಿನ ಪಿ ಬಿ ದುತ್ತರಗಿ ರಂಗ ಮಂದಿರ ಆಯೋಜಿಸಲಾಗಿದೆ.
19 .6.2023 ರಂದು ಸಂಜೆ 5 ಕ್ಕೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಕನಕಗಿರಿ ಮತಕ್ಷೇತ್ರದಿಂದ ಆಯ್ಕೆಯಾಗಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಮತ್ತು ಸಂಸ್ಕೃತ ಇಲಾಖೆ ಸಚಿವರಾದ ಶಿವರಾಜ ಎಸ್ ತಂಗಡಗಿ, ಹುನಗುಂದ ಮತಕ್ಷೇತ್ರದಿಂದ ಅತಿ ಹೆಚ್ಚು ಮತಗಳಿಂದ ಆಯ್ಕೆಯಾದ ವಿಜಯಾನಂದ ಎಸ್ ಕಾಶಪ್ಪನವರ್,
ಧಾರವಾಡ ಮತಕ್ಷೇತ್ರದಿಂದ ಆಯ್ಕೆಯಾದ ವಿನಯ್ ಕುಲಕರ್ಣಿ, ಬಾಗಲಕೋಟೆ ಮತಕ್ಷೇತ್ರದಿಂದ ಆಯ್ಕೆಯಾದ ಎಚ್ ವೈ ಮೇಟಿ, ರೋಣ ಮತಕ್ಷೇತ್ರದಿಂದ ಆಯ್ಕೆಯಾದ ಮುದ್ದೇಬಿಹಾಳ ಮತಕ್ಷೇತ್ರದಿಂದ ಆಯ್ಕೆಯಾದ ಸಿ .ಎಸ್. ಪಾಟೀಲ್, ಬದಾಮಿ ಮತ ಕ್ಷೇತ್ರದಿಂದ ಆಯ್ಕೆಯಾದ ಭೀಮಸೇನ್ ಚಿಮ್ಮನಕಟ್ಟಿ, ನವಲಗುಂದ ಮತ ಕ್ಷೇತ್ರದಿಂದ ಆಯ್ಕೆಯಾದ ಎನ್ ಹೆಚ್ ಕೋನರೆಡ್ಡಿ, ಕುಷ್ಟಗಿ ಮತಕ್ಷೇತ್ರದಿಂದ ಆಯ್ಕೆಯಾದ ದೊಡ್ಡನಗೌಡ ಪಾಟೀಲ್, ಕಾಪು ಮತಕ್ಷೇತ್ರದಿಂದ ಆಯ್ಕೆಯಾದ ಸುರೇಶ ಕುಮಾರ್ ಗೂರಮೆ ಈ ಮೇಲಿನವರೆಲ್ಲರೂ 2023 ವಿಧಾನಸಭಾ ಚುನಾವಣೆ ನಿಲ್ಲುವುದಕ್ಕಿಂತ ಮುಂಚೆ ಶ್ರೀಮಠಕ್ಕೆ ಬಂದು ಪೂಜ್ಯರ ಆಶೀರ್ವಾದವನ್ನು ಪಡೆದು ನಾಮಪತ್ರ ಸಲ್ಲಿಕೆ ಮಾಡಿ ಎಂದು ಪೂಜೆ ಶ್ರೀಗಳ ಆಜ್ಞೆಯಂತೆ ಅವರೆಲ್ಲರೂ ಚುನಾಯಿತರಾಗಿ ಆಯ್ಕೆಯಾಗಿದ್ದು ಇರುತ್ತದೆ.
ಶ್ರೀಮಠದಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸುಕ್ಷೇತ್ರ ಸಿದ್ದನಕೊಳ್ಳ ದ
ಶ್ರೀಮಠದ ಪೂಜ್ಯ ಪೀಠಾಧಿಪತಿಗಳಾದ ಡಾ ಶಿವಕುಮಾರ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆಯನ್ನು ತಿಳಿಸಿದ್ದಾರೆ.
ವರದಿಗಾರರು:ಶರಣಗೌಡ ಕಂದಕೂರ