ಶ್ರೀ ರಾಮಾನುಜಾಚಾರ್ಯ ಫೌಂಡೇಶನ್ ವತಿಯಿಂದ ರವಿವಾರದಂದು ಬೃಹತ್ ರಕ್ತದಾನ ಶಿಬಿರ…..

ಶ್ರೀ ರಾಮಾನುಜಾಚಾರ್ಯ ಫೌಂಡೇಶನ್ ವತಿಯಿಂದ ರವಿವಾರದಂದು
ಬೃಹತ್ ರಕ್ತದಾನ ಶಿಬಿರ…..

e-ಸುದ್ದಿ ಇಳಕಲ್ 

ಶ್ರೀ ರಾಮಾನುಜಾಚಾರ್ಯ ಫೌಂಡೇಶನ್ ಇಲ್ಕಲ್, ಬನಶಂಕರಿ ಬ್ಲಡ್ ಬ್ಯಾಂಕ್ ಬಾಗಲಕೋಟೆ, ಹಾಗೂ ವಿಜಯ ಮಹಂತ ಅರ್ಥ ಕೇಂದ್ರ ಇಲ್ಕಲ್ ಇವರಗಳ ಸಯುಕ್ತ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ
ನಾಲ್ಕನೇ ಬೃಹತ್ ರಕ್ತದಾನ ಶಿಬಿರ ಮಹೇಶ್ವರಿ ಆಸ್ಪತ್ರೆ ಜೋಷಿಗಲಿಯಲ್ಲಿ ಬರುವ ಭಾನುವಾರ ನಡೆಯಲಿದೆ.

ಈ ಬೃಹತ್ ರಕ್ತದಾನ ಶಿಬಿರಕ್ಕೆ ತಾವೆಲ್ಲರೂ ಹಾಗೂ ಸಮಸ್ತ ಸಂಘ ಸಂಸ್ಥೆಗಳ ಎಲ್ಲಾ ಸದಸ್ಯರು ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು
ಶ್ರೀ ರಾಮಾನುಜಾಚಾರ್ಯ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಪವನ್ ದರಕ್, ಅಧ್ಯಕ್ಷರಾದ ಗೋಕುಲ ದರಕ್, ಸಂದೀಪ್ ಮೆಹತ್, ಡಾ. ರಷ್ಮಿ ದರಕ್, ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!