ನಾನು ಅವಳು

ನಾನು ಅವಳು

ನಾನು ಅವಳು
ನಿತ್ಯ ನಡೆದೆವು
ಮೂರು ದಶಕದ
ದಾರಿ

ಹಗಲು ಇರುಳು
ನೋವು ನಲಿವು
ಮಸುಕು ಹರಿಯಿತು
ಜಾರಿ

ಹಬ್ಬ ಸಂತಸ
ಪ್ರೀತಿ ಹಂಚಿಕೆ
ಒಲವದೂಟ
ಭಾರಿ

ಏಷ್ಟೋ ಕಷ್ಟ
ಸಂಕಟ ಏಳು ಬೀಳಲಿ
ಕೈಯ ಹಿಡಿದಳು
ನಾರಿ

ಹಲವು ಜನ್ಮಕೆ
ನಾವೇ ಜೋಡಿ
ಪ್ರೇಮ ಬೆಸುಗೆ
ಸಾರಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

 

Don`t copy text!