ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ 9 ನೇ ಅಂತರಾಷ್ಟ್ರೀಯ ಯೋಗದಿನ ದಿನಾಚರಣೆ…
.
e-ಸುದ್ದಿ ಇಳಕಲ್
ಲಯನ್ಸ ಕ್ಲಬ್ ಇಲಕಲ್ಲ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಇಲಕಲ್ಲ ಇವರ ಸಹಯೋಗದೊಂದಿಗೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಲಯನ್ಸ ಕ್ಲಬ್ ಅಧ್ಯಕ್ಷರಾದ ರಾಜಕುಮಾರ ಕಾಟಿವಾ ಲಯನ್ಸ ಕ್ಲಬ್ ಕಾರ್ಯದರ್ಶಿ ಖಾಸಿಂಸಾಬ್ ಕಂದಗಲ್, ಮಹಾವಿದ್ಯಾಲಯ ಪ್ರಾಚಾರ್ಯರಾದ ವಿಧ್ಯಾ ಗೊಟೋರ, ಹಿರಿಯರಾದ ರಾಜೇಂದ್ರ ಜುಂಜಾ, ಈ ಕಾರ್ಯಕ್ರಮದ ಮುಖ್ಯ ಅತಿಥಿ ಯೋಗ ಪಟುಗಳಾಗಿ ಆಗಮಿಸಿರುವ ಕೃಷ್ಣ ಲದ್ವಾ ಹಾಗೂ
ದೈಹಿಕ ಶಿಕ್ಷಕರಾದ ನೀಲಪ್ಪ ಕುರಿ. ವರದಿಗಾರ ಸಚಿನ ಸಾಲಿಮಠ ವೇದಿಕೆ ಮೇಲೆ ಇದ್ದ ಗಣ್ಯರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಲಕಲ್ಲ ವರದಿಗಾರಿಗೆ ಹಾಗೂ ಯೋಗಪಟು ಕೃಷ್ಣ ಲದ್ವಾ ಹಾಗೂ ಕಾಲೇಜ ದೈಹಿಕ ಶಿಕ್ಷಕ ನಿಲಪ್ಪ ಕುರಿ ಸನ್ಮಾನಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ರಾಜುಕುಮಾರ ಕಾಟಿವಾ ಯೋಗದಿನ ಬಹಳ ವಿಶೇಷ ದಿನ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲ ದೇಶದ ಪ್ರಧಾನಿ ಬೇರೆ ದೇಶದ ಕಾರ್ಯಕ್ರಮ ಒಂದರಲ್ಲಿ ಭಾಗ ಇರುತ್ತಾರೆ ನಮ್ಮೆಲ್ಲ ಭಾರತೀಯರಿಗೆ ಇದು ಒಂದು ವಿಶೇಷ ಐತಿಹಾಸಿಕ ದಿನ ಎಂದರು. ಉತ್ತಮ ಆರೋಗ್ಯಕ್ಕೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ.
ನಂತರ ಹಿರಿಯರಾದ ಲಯನ್ಸ್ ಸದಸ್ಯರಾದ ತಮ್ಮೆಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು ಮೊದಲಿಗೆ ಎಂದರು ಈ ಭಾರಿ ಯೋಗದ ಉದ್ದೆಶ ವಸುದೈವ ಕುಟುಂಬಕಮ್ಮ ಹಾಗೂ ಅದರ ಪಥದಲ್ಲಿ ನಡೆಯುತ್ತಿದೆ. ಭಾರತ ದೇಶದಲ್ಲಿ ಯೋಗಕ್ಕೆ ಒಂದು ದೊಡ್ಡ ಮಹತ್ವ ದೊರೆತಿದೆ ವಿದೇಶಿಗರು ನಮ್ಮ ನೋಡಿ. ತಾವು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು
ಇದೇ ಸಂಧರ್ಭದಲ್ಲಿ ಟಿಪ್ಪು ಭಂಡಾರಿ.
ಡಾ ಸಂತೋಷ,ಡಾ ವಿಠಲ್ ಶ್ಯಾವೀ. ಸಂತೋಷ ಪೂಜಾರಿ.ಲಾಲಭಾಷ ಶಿವನಗುತ್ತಿ.ಪ್ರಕಾಶ ಕರಡಿ,
ರವಿ ಬಸವಾ, ರವಿ ಅಂಗಡಿ,ಹನಮಂತ ಚುಂಚಾ,
ಹಾಗೂ ಸರ್ವ ಸದಸ್ಯರು, ಮಹಾವಿದ್ಯಾಲಯದ ಬೋಧಕೇತರ ಹಾಗೂ ಬೋಧಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ