ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ನೇಹರಂಗದಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ

 

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ನೇಹರಂಗದಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ …

e-ಸುದ್ದಿ ಇಳಕಲ್ 

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ನೇಹರಂಗದ ವತಿಯಿಂದ. ಎಸ್ ಎಸ್ ಎಲ್ ಸಿಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು.

ಈ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ನಂದವಾಡಗಿಯ ಪೂಜ್ಯರಾದ ಡಾ. ಚನ್ನಬಸವ ದೇಶಕೇಂದ್ರ ಶಿವಾಚಾರ್ಯರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಮಹಾದೇವ ಕಂಬಾಗಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕ್ಕೆ ಮಲ್ಲಮ್ಮ ಸಾಲಾಪುರ್, ಮಲ್ಲಿಕಾರ್ಜುನ ಗೋಟೂರ್, ಸ್ನೇಹ ರಂಗದ ಅಧ್ಯಕ್ಷರಾದ ಬಸವರಾಜ ಮಠದ, ಮಹಾಂತೇಶ ಗಜೇಂದ್ರಗಡ, ಜಾಕೀರ ಗಡೆದ, ಮಹಾಂತೇಶ ಹಲಕುರ್ಕಿ, ರಾಮನಗೌಡ ಸಂದಿಮಿನಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳು, ಸ್ನೇಹ ರಂಗದ ಪದಾಧಿಕಾರಿಗಳು, ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಗುರು ಬಳಗದವರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!