ವರುಣನಿಗೊಂದು ಮನನ
ನಿನ್ನ ಮನದ ಮಾತು ನೀ ನಮಗೆ ಹೇಳು
ನಮ್ಮದೂನು ಸ್ವಲ್ಪ ನೀ ಕೇಳು
ನಮ್ಮ ಮ್ಯಾಲ ನೀ ಹೀಂಗ ಮುನಿದರ
ಹೆಂಗ ನಾವು ಬದುಕಿ ಬಾಳೋದು
ನಿನ್ನಿಂದ ಜೀವ ನಿನ್ನಿಂದ ದೇಹ ನನ್ನಿಂದ ಹಸಿರು ಉಸಿರೆಲ್ಲ
ನನ್ನಿಂದ ನಾವು ನಿನ್ನಿಂದ ಮೇವು ನಿನ್ನಿಂದ ದನಕರುಗಳೆಲ್ಲ
ನೀನಿರದೆ ಲೋಕ ಮರುಮರುಗಿ ಶೋಕಸಾಗರದ ಒಂದಿಣುಕು ನೋಟ
ಮಳೆ ಇರದೆ ರೈತ ಅಳುತಾನೆ ಕುಂತ ದಿನ ಅವನಿಗಿಲ್ಲ ಬಿಸಿ ಊಟ
ನೀ ಇಳಿದು ಬಂದು
ಕೃಪತೋರು ಇಂದು
ಕರ್ತವ್ಯ ಮರೆಯಬೇಡ
ನೀ ಮರೆಯಬೇಡ ನಮ್ಮ ತೊರೆಯಬೇಡ ಬಾನೆಲ್ಲ ಕಟ್ಟು ಮೋಡ
ಗುಡುಗುಡುಸಿ ಒಮ್ಮೆ ಮಿಂಚೊಂದು ಬೆಳಗಿ ಬಿಚ್ಚೊಮ್ಮೆ ಮೋಡ ಮುಷ್ಠಿ
ಒಂದೊಂದು ಹನಿಯು ಅಮೃತವು ಧರೆಗೆ ಇಳಿದೊಮ್ಮೆ ಬೆಳಗು ಸೃಷ್ಟಿ
ಜ್ಯೋತಿ ಮಾಳಿ