ದಾಖಲಿಸುವುದಿಲ್ಲ

ದಾಖಲಿಸುವದಿಲ್ಲ
ಗೆಳೆಯ
ನಿನ್ನ ಹಾಗೆ ನಾನು
ನನ್ನ ಸ್ನೇಹ ಪ್ರೀತಿಯ

ಕೆತ್ತುವದಿಲ್ಲ ಗೋಡೆ
ಮರದ ಮೇಲೆ
ನನ್ನ ನಿನ್ನಯ ಹೆಸರು
ಮಳೆ ನೆಲದ ಹಸಿರು

ಕಟ್ಟುವುದಿಲ್ಲ
ಕನಸಿನ ಗೋಪುರ
ಕೋಟೆ ಕಟ್ಟಳೆ
ಮುಕ್ತ ಸುಳಿವ ಗಾಳಿ

ಬಂಧಿಸುವದಿಲ್ಲ
ಪಂಜರದಲ್ಲಿ ಪಕ್ಷಿ
ಹಾರಲಿ ದಟ್ಟ ಕಾಡಿನಲ್ಲಿ
ಒಲುಮೆ ಬಾಳ ಬಿಚ್ಚಿ

ಗೆಳೆಯ
ವ್ಯರ್ಥಗೊಳಿಸುವುದಿಲ್ಲ
ಶಬ್ದ ಅಕ್ಷರಗಳ ಹಾಳೆಯಲ್ಲಿ
ತೆರೆದಿಡುವೆ ಹೃದಯ ಜೀವಿ

ಜಯ ಹುನಗುಂದ ಆಸ್ಟ್ರೇಲಿಯಾ

Don`t copy text!