ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ರಕ್ತದಾನ ಶಿಬಿರ..

ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ರಕ್ತದಾನ ಶಿಬಿರ..

e-ಸುದ್ದಿ ವರದಿ ಇಳಕಲ್

ಇಳಕಲ್ ನಗರದ ಸಮೀಪದ ತೊಂಡಿಹಾಳ ಗ್ರಾಮದಲ್ಲಿರುವ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗರ್ದರ್ಶನ ಪ್ಯಾರ ಮೆಡಿಕಲ್ ಕಾಲೇಜ್, ಮಾರ್ಗದರ್ಶನ ಕಾಲೇಜ ಫಾರ್ಮಸಿ ಹಾಗೂ ಕೆರೂಡಿ ಬ್ಲಡ್ ಸೆಂಟರ್ ಬಾಗಲಕೋಟೆ ಇವರ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಜಿ ಕೂಡಲಗಿಮಠ ರಕ್ತದಾನ ಮಾಡುವುದು ಜೀವನದ ಬಹುದೊಡ್ಡ ದಾನವಾಗಿದೆ. ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಉಳಿಸುವ ಪುಣ್ಯ ಕಾರ್ಯ ಎಂದರು. ಇಂತಹ ರಕ್ತದಾನ ಶಿಬಿರಗಳು ನಡೆಯಬೇಕು ಎಂದರು.

ಈ ರಕ್ತದಾನ ಶಿಬಿರದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೋಭಾ ವಿ ಕೂಡಲಗಿ ಮಠ, ಡಾಕ್ಟರ್ ಕ್ಷೇತ್ರ ದೇಶಪಾಂಡೆ ಕೆರೂಡಿ ಕ್ಯಾನ್ಸರ್ ಆಸ್ಪತ್ರೆ ಬಾಗಲಕೋಟೆ, ಕಲ್ಲಪ್ಪ ಅಮೀನ್ಬಾವಿ ಕೆರೂಡಿ ರಕ್ತ ಬಂಡಾರ ಬಾಗಲಕೋಟೆ, ಶ್ರೀಮತಿ ಸವಿತಾ ಕೋರಿ ಶೆಟ್ಟಿ, ಪ್ರಾಚಾರ್ಯರು ಮಾರ್ಗದರ್ಶನ ನರ್ಸಿಂಗ್ ಕಾಲೇಜ್, ಶಶಿಕಲಾ ಅಂತರಪಾನಿ ವೈದ್ಯರು ಕೆರೋಡಿ ಆಸ್ಪತ್ರೆ ಬಾಗಲಕೋಟೆ, ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!