ಡಾ.ಚೆನ್ನಬಸವಯ್ಯ ಹಿರೇಮಠ ರವರಿಗೆ ಗೌರವಪೂರ್ವಕ ಬಿಳ್ಕೊಡುಗೆ ಸಮಾರಂಭ

ಡಾ.ಚೆನ್ನಬಸವಯ್ಯ ಹಿರೇಮಠ ರವರಿಗೆ ಗೌರವಪೂರ್ವಕ ಬಿಳ್ಕೊಡುಗೆ ಸಮಾರಂಭ

e-ಸುದ್ದಿ ರಾಯಚೂರು

ರಾಯಚೂರಿನ ಹಿರಿಯ ಸಾಹಿತಿಗಳು ಸಂಶೋಧಕರು  37 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿ ಸಲ್ಲಿಸಿದ ಡಾ. ಚನ್ನಬಸವಯ್ಯ ಹಿರೇಮಠ ಅವರ ಸೇವೆಯನ್ನು ಸ್ಮರಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವೆಂಕಟೇಶ ಬಿ.ದೇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಚನ್ನಬಸವಯ್ಯ ಹಿರೇಮಠ ಸಾಹಿತಿಗಳ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಧನ್ಯರು. ಇವರು ನಮ್ಮ ಕಾಲೇಜಿನ ಹೆಮ್ಮೆಯ ಸಂಗತಿ. ಇವರು ಸಾಹಿತ್ಯ ಸೇವೆ ಅನುಪಮವಾದುದು. ಇವರ ಜ್ಞಾನ ಭಂಡಾರ ಬರವಣಿಗೆ ರೂಪದಲ್ಲಿ ಹೊರಬರಲಿ.ನಿವೃತ್ತಿ ಜೀವನ ಸಂತೋಷ ಸಂತೃಪ್ತಿ ಉತ್ತಮ ಆರೋಗ್ಯದೊಂದಿಗೆ ಭಗವಂತನ ಕೃಪೆ ಸದಾ ಇರಲಿ ಎಂದರು.

ಶ್ರೀ ಅಮರೇಗೌಡ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಪದೋನ್ನತಿ ಹೊಂದಿ ಎಸ್ ಎಸ್ ಆರ್ ಜಿ ಮಹಿಳಾ ಮಹಾವಿದ್ಯಾಲಯಕ್ಕೆ ಪ್ರಾಚಾರ್ಯರಾಗಿರುವುದು ತುಂಬಾ ಸಂತೋಷದ ವಿಷಯ. ಅವರ ಸೇವೆಯಿಂದ ಕಾಲೇಜಿಗೆ ಮತ್ತಷ್ಟು ಕೀರ್ತಿ ಯಶಸ್ಸು ದೊರೆಯಲಿ ಎಂದು ಹಾರೈಸಿದರು. ಕಾಲೇಜು ಅಧ್ಯಾಪಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ನಡೆಸಿಕೊಟ್ಟರು.ಶ್ರೀ ಚೆನ್ನಬಸವಯ್ಯ ಹಿರೇಮಠ ಹಾಗೂ ಶ್ರೀ ಅಮರೇಗೌಡ ಇವರೀರ್ವರನ್ನು ಸಂಘದ ವತಿಯಿಂದ ಪ್ರಾಚಾರ್ಯರು,ಉಪ ಪ್ರಾಚಾರ್ಯರು, ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ನಾಯಕ ರವರು ಗೌರವಪೂರ್ವಕವಾಗಿ ಸನ್ಮಾನಿಸಿದರು.

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ರಂಗಣ್ಣ ಪಾಟೀಲ ಅಳ್ಳುಂಡಿ ಕಾರ್ಯದರ್ಶಿಗಳಾದ ಶ್ರೀ ನಾಗಪ್ಪ ಹೊರಪೇಟೆ, ಹಿರಿಯ ಸಾಹಿತಿಗಳಾದ ಶ್ರೀ ವೀರ ಹನುಮಾನ ರವರು ಶ್ರೀ ಚನ್ನ ಬಸವಯ್ಯ ರವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಕನ್ನಡ ಉಪನ್ಯಾಸಕರಾದ ಡಾ ಶಾಂತಲಾ ಮುಕ್ಕುಂದಿಮಠ ಮತ್ತು ಅರ್ಥಶಾಸ್ತ್ರ ವಿಭಾಗದ ಶ್ರೀಮತಿ ರೂಪಾ ಕುಲಕರ್ಣಿ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಪುರುಷೋತ್ತಮ, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಂ ವೀರೇಶಪ್ಪಾ ರವರು ಮಾತನಾಡಿ ಅವರೊಂದಿಗಿನ ಸೇವಾ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮವು ಕಾಲೇಜು ಅಧ್ಯಾಪಕರ ಸಂಘದ ಉಪಾಧ್ಯಕ್ಷರಾದ ಡಾ. ಹನುಮಂತ್ರಾಯ ರವರು ಸ್ವಾಗತಿಸಿದರೆ ಡಾ.ಕೃಷ್ಣ ನಾಯಕ ನಿರೂಪಿಸಿದರು.ಖಜಾಂಚಿಗಳಾದ ಡಾ.ಪ್ರಶಾಂತ ಕುಮಾರ್ ವಂದಿಸಿದರು. ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶುಭ ಹಾರೈಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Don`t copy text!