ಮರಳಿ ಗೂಡಿಗೆ

ಮರಳಿ ಗೂಡಿಗೆ

ಹಾರಿ ಬಂದೆ
ದೂರ ದೇಶಕೆ
ತಂದೆ ತಾಯಿ
ಪ್ರೀತಿ ಬಿಟ್ಟು

ಹಬ್ಬ ಹುಣ್ಣಿಮೆ
ಇಲ್ಲ ಸಂತಸ
ದುಡಿಮೆ ಯಂತ್ರದ
ಜೀವ ಕಟ್ಟು

ಬಯಲೇ ಬೇಲಿ
ಗೋಡೆ ಕೈದಿ
ಹಗಲು ಇರುಳು
ಕಷ್ಟು ಪಟ್ಟು

ಏಷ್ಟು ವರುಷ
ಏಷ್ಟು ದುಡಿದರೆನು
ನಾವು ಅಲ್ಲ ಇಲ್ಲಿ
ಸ್ವತಂತ್ರರು

ನನ್ನ ನಾಡಿನ
ಜನರ ಧ್ವನಿಗೆ
ನಿತ್ಯ ಹಂಬಲ
ಸ್ನೇಹ ಪ್ರೀತಿಗೆ

ಹಕ್ಕಿಯಾಗಿ
ಮತ್ತೆ ಹಾರುವೆ
ನನ್ನ ಬಾಳಿನ
ಮರಳಿ ಗೂಡಿಗೆ

ಜಯ ಹುನಗುಂದ ಮೆಲ್ಬೋರ್ನ್

Don`t copy text!