ಧನ್ಯತೆ

ಎಳೆಯ ನಾನು
ಮುಗ್ಧ ಬಾಲೆ
ಇರುಳ ಕನಸಲಿ
ನಿನ್ನ ಕಂಡೆನು
ಹಾಲು ಚೆಲ್ಲಿದ
ಬೆಳಗು ಚಂದಿರ
ಹಬ್ಬ ಸಂತಸ
ಬೆಳದಿಂಗಳ
ಕಾಡಿನಲ್ಲಿ
ಪಕ್ಷಿ ಇಂಚರ
ಸ್ನೇಹ ಪ್ರೀತಿಯ
ಸಂಭ್ರಮ
ಐದು ದಶಕದ
ದೂರ ಪಯಣದಿ
ಬಳಲಿ ಬೆಂದಿಹ
ಹಂದರ
ನೊಂದ ಜೀವಕೆ
ಒಲುಮೆ ತಂಪು
ನೆರಳು ಪ್ರೇಮದ
ಮನ್ವಂತರ
ಹೇಗೆ ಹೇಳಲಿ
ನಿನಗೆ ಧನ್ಯತೆ
ನನ್ನ ಪ್ರೀತಿಯ
ಚಂದಿರ


ಜಯ ಹುನಗುಂದ
ಮೆಲ್ಬೋರ್ನ್ ಆಸ್ಟ್ರೇಲಿಯಾ

Don`t copy text!