ಅಮ್ಮನ ಕೈಚಳಕ

ಅಮ್ಮನ ಕೈಚಳಕ


ಒಲವಿನ ಚಿತ್ತಾರವದು
ಆಯತ ಆಕಾರವದು
ನಿದ್ದೆಗೆ ನಿಜ ಮದ್ದು ಇದು
ಒದ್ದೆಗೆ ಘನ ಭಾರವಿದು

ಸಾವಿರಾರು ಚುಚ್ಚುಮದ್ದನಿಟ್ಟು
ಹಳಿಬಿಗೆ ಹೊಸ ಚಿಕಿತ್ಸೆ ಕೊಟ್ಟು
ತುಸು ನಸಿಕೆ ಸರಕುಗಳ ಒಳಗಿಟ್ಟು
ಹೊತ್ತು ತಂದ ಹೊಸತನ ಮನದಟ್ಟು

ಅರ್ಧಕೆ ಬಂದು ಎದೆಗೊದ್ದು
ಐದೇಶಿ ಗುಗ್ಗರಿಯ ಮೆದ್ದು
ಹೊಟ್ಟೆ ತುಂಬಿದ ಬಳಿಕ ಎದ್ದು
ಕುನಿಯಿತು ತಾ ಗೆದ್ದುಗೆದ್ದು

ಚಳಿಗೆ ಇದು ಬಿಸಿಯನೆರೆದು
ಬಿಸಿಗೆ ಮೈಗೆ ತಂಪನೆರೆದು
ಅಮ್ಮನಂತೆ ಸಲಹುತಿಹುದು
ಅಮ್ಮ ಹೊಲೆದ ಕೌದಿ ಇದು

ಜ್ಯೋತಿ ಮಾಳಿ

Don`t copy text!