ಖಾಸಗಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ- ಹಂಪನಗೌಡ ಬಾದರ್ಲಿ

ಖಾಸಗಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ- ಹಂಪನಗೌಡ ಬಾದರ್ಲಿ

e- ಸುದ್ದಿ ಕಲಬುರ್ಗಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಅತಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಕಲಿಕೆಗೆ ಆಸಕ್ತಿಯಿಂದ ಶಿಕ್ಷಣ ನೀಡುತ್ತಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿವೆ. ಈ ಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನವನ್ನು ನಿರ್ಮಾಣ ಮಾಡಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಂಳಿಯಿಂದ ಸಹಾಯ ಒದಗಿಸುವಂತೆ ರಾಯಚೂರು ಜಿಲ್ಲಾ ವಿವಿಧ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಂಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರನ್ನು ರಾಯಚೂರು ಜಿಲ್ಲಾ ವಿವಿಧ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಮಾಡಿದರು.
ನಂಜುಂಡಪ್ಪ ವರದಿಯಂತೆ ಈ ಭಾಗದ ಖಾಸಗಿ ಶಾಲೆಗಳ ಶಾಲ ಕೊಠಡಿಗಳ ನಿರ್ಮಾಣ, ಆಟದ ಮೈದಾನ, ಮೂಲಭೂತ ಸೌಕರ್ಯಗಳ ಅನುಷ್ಠಾನ ಹಾಗೂ ಅಭಿವೃದ್ದಿಗಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗಾಗಿ ನೆರವು ನೀಡಲು ಬೈಲಾದಲ್ಲಿ ನಮೂದಿಸಲಾಗಿದೆ ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅನುದಾನ ನೀಡಲು ಮಂಡಳಿಯ ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳುವಂತೆ ಡಾ.ಅಜಯಸಿಂಗ್ ಅವರಿಗೆ ಹಂಪನಗೌಡ ಬಾದರ್ಲಿ ಅವರ ನಿಯೋಗದ ಪ್ರಮುಖರು ವಿವರಿಸಿದರು.
ನಿಯೋಗದಲ್ಲಿ ರಾಯಚೂರು ಜಿಲ್ಲಾ ವಿವಿಧ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ ವಕೀಲರು, ಟಿ.ಬಸವರಾಜ ಸಿರವಾರ, ಡಾ.ರಜಾಕ್ ಉಸ್ತಾದ ರಾಯಚೂರು, ಶಿವಕುಮಾರ ಎನ್ ಮಸ್ಕಿ, ಕೆ.ವಿ.ರಡ್ಡಿ ಮಸ್ಕಿ, ಮಂಜುನಾಥ ಸ್ವಾಮಿ ತೋರಣದಿನ್ನಿ, ಚಂದ್ರಶೇಖರ ಬಲ್ಲಟಗಿ, ಪ್ರಕಾಶ ಪಾಟೀಲ, ಬಿಇ.ವಿ.ರಡ್ಡಿ, ಚನ್ನಪ್ಪ ಬೂದಿಹಾಳ, ಥಾಮಸ್, ಬಸವರಾಜ ರಾಯಚೂರು ಇದ್ದರು.

 

Don`t copy text!