ಕನ್ನಡದ ಮೇರು ಗಿರಿ…

ಕನ್ನಡದ ಮೇರು ಗಿರಿ…

ಚೂಪು ಹುಬ್ಬಿನ
ತೀಕ್ಷ್ಣ ಕಂಗಳಲಿ
ಸದಾವಕಾಲದಲಿ
ಸತ್ಯ ಹುಡುಕಾಟ..
ಹರಿತ ಕತ್ತಿಯಂಥ
ನೇರ ಮಾತಿನಲೂ
ಶೋಧದ ಹೋರಾಟ
ಆದರೂ ಮೃದು ಹೃದಯಿ…
ನಾಡ ಮೂಲೆ ಮೂಲೆಯಲಿ
ಮಣ್ಣ ಕಣ ಕಣದಲಿ
ಶಿಲಾ ಶಾಸನಗಳಲಿ
ಓಲೆಗರಿಗಳಲಿ ಸದಾ
ಬಸವಣ್ಣನ ಕಾಣ್ವ ಹಂಬಲ…
ಶರಣರಾ ವಚನಗಳ
ಜಗದಗಲ ಹರಡಿ
ಕನ್ನಡದ ಕಂಪನು
ಬೀರಿದ ಮಹಾಮಹಿಮರು…
ಮಾನವ ಧರ್ಮದ ಉಸಿರಾಗಿ
ಸತ್ಯನಿಷ್ಠೆಯ ಕಾಯಕದಲಿ
ಜೀವನವನೇ ತೇಯ್ದು
ಅದಕಾಗೇ ಬಲಿದಾನ ನೀಡಿ
ಅಮರರಾದ ನಿಮಗೆ
ಸಾವಿರದ ಶರಣು..ಶರಣು..!

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

_—————————————————–ಆತ್ಮೀಯ ಓದುಗರಲ್ಲಿ ವಿನಂತಿ

e-ಸುದ್ದಿಯಲ್ಲಿ ಪ್ರಕಟವಾಗುವ ಲೇಖನ, ಕವಿತೆ, ಕತೆ, ಪ್ರಬಂಧ, ಸುದ್ದಿಗಳಿಗೆ ಆಯಾ ಲೇಖಕರೇ ಹೊಣೆಗಾರರು. ಅದು ಅವರ ಅಭಿಪ್ರಾಯ. ಬರಹಗಾರರು ಮತ್ತು ಓದುಗರ ನಡುವೆ e-ಸುದ್ದಿ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಪ್ರಕಟವಾಗುವ ವಿಷಯಗಳಿಗೆ ಚರ್ಚೆ ಮಾಡಲು ನೇರವಾಗಿ ಲೇಖಕರನ್ನು ಸಂಪರ್ಕಿಸಿ.

-ಸಂಪಾದಕ

Don`t copy text!