ದುರ್ಗಾಕ್ಯಾಂಪಿನಲ್ಲಿ ಗುರುವಂದನ ಮತ್ತು ಸ್ನೇಹ ಮಿಲನ ಕಾರ್ಯಕ್ರಮ
e- ಸುದ್ದಿ ಮಸ್ಕಿ
ತಾಲೂಕಿನ ದುರ್ಗಾ ಕ್ಯಾಂಪ್ ಉನ್ನತೀಕರಿಸಿದ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗಚ್ಚಿನ ಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ನೆರವೇರಿಸಿದರು.
ಹಿರಿಯ ಶಿಕ್ಷಕರ ಹನುಮಂತಪ್ಪ ಬಂಡಿವಡ್ದರ್ ಹಾಗೂ ಗಂಗಾಧರ್ ಶಿಕ್ಷಕರು, ಚನ್ನಪ್ಪ ಶಿಕ್ಷಕರು ರಾಮಣ್ಣ ಹಂಪರಾಗುಂದಿ ಶಿಕ್ಷಕರು , ಪ್ರಶಾಂತ್ ಶಿಕ್ಷಕರು , ಮಾತನಾಡಿದರು.
ಸುಮಾರು 28 ವರ್ಷಗಳಿಂದ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಗೂ ಕಿರಿಯ ಶಿಕ್ಷಕರುಗಳಿಗೆ ಒಂದು ವೈಶಿಷ್ಟ ಪೂರ್ಣವಾದ ಗುರು ವಂದನ ಕಾರ್ಯಕ್ರಮವನ್ನು ಗ್ರಾಮದ ಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು , ಸದಸ್ಯರು ಊರಿನ ಯುವಕರ ತಂಡ ಹಾಗೂ ಹಳೆ ವಿದ್ಯಾರ್ಥಿಗಳ ತಂಡ ಸೇರಿ ಗುರುವಂದನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು.
ಇದೇ ಸಮಯದಲ್ಲಿ ಸುಮಾರು 20 ತಂಡಗಳ ಹಳೆ ವಿದ್ಯಾರ್ಥಿಗಳಿಂದ ಶಾಲಾ ಶಿಕ್ಷಕರಿಗೆ ಸನ್ಮಾನ ಮಾಡುವುದರ ಮುಖಾಂತರ ಗೌರವವನ್ನು ಸಮರ್ಪಿಸಿದರು. ಹಾಗೂ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಏರ್ಪಡಿಸಲಾಗಿತ್ತು.
ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ , ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೋಭಾ , ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಈಗಿನ ವಿದ್ಯಾರ್ಥಿಗಳು ಮತ್ತು ಗ್ರಾಮದ ಸುತ್ತಮುತ್ತಲಿನ ಯುವಕರು ಮತ್ತು ಹಿರಿಯರು ಭಾಗಿಯಾಗಿದ್ದರು.