ಹೆಗಲ ಮೇಲೆ ಹೆಣ್ಣು ಮಗುವನ್ನು ಹೊತ್ತು, ಪೆನ್ ಮಾರುತ್ತಿದ್ದ ವ್ಯಕ್ತಿ: ಯಾರೋ ಫೋಟೋ ತೆಗೆದ ನಂತರ ಏನಾಯ್ತು??
ಮನ ಕಲಕುವ ಈ ವರದಿ
ಯುದ್ಧಗಳಿಂದ ಮಾನವ ಜಾತಿಗೆ ಎಂದಿಗೂ ಲಾಭವಾಗಿಲ್ಲ ಮತ್ತು ಆಗುವುದೂ ಇಲ್ಲ. ಸಿರಿಯಾದಲ್ಲಿಯ ಯುದ್ಧದಿಂದ ಅನೇಕ ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಯುದ್ಧದಿಂದ ಅನೇಕರು ತಮ್ಮ ಭೂಮಿ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಆಶ್ರಯ ಪಡೆಯಲು ವಲಸೆ ಹೋಗಿದ್ದಾರೆ. ಬೇರುತ್ ನ ಲೆಬನೀಸ್ ಪಟ್ಟಣದಲ್ಲಿ ಅನೇಕ ಸೀರಿಯಾ ಶರಣಾರ್ಥಿಗಳಿಗೆ ರಸ್ತೆಯ ಬದಿಯಲ್ಲಿಯೇ ಜೀವಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಶರಣಾರ್ತಿಗಳು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಹೊಟ್ಟೆಯನ್ನು ತುಂಬಿ ಕೊಳ್ಳುತ್ತಿದ್ದಾರೆ.
ಇಂಥ ಪರಿಸ್ಥಿತಿಗೆ ಶರಣಾದ ವ್ಯಕ್ತಿಯೊಬ್ಬ ತನ್ನ ಮಗಳ ಜೊತೆಗೆ ಲೆಬನಾನ್ ಗೆ ಪಾಲಾಯನಗೈದ. ಅಲ್ಲಿ ಜೀವಿಸುವ ಸಲುವಾಗಿ ಆತ ರಸ್ತೆಯ ಮೇಲೆ ಪೆನ್ನುಗಳನ್ನು ಮಾರುತ್ತಿದ್ದ. ಆತನ ವೈರಲ್ ಆದ ಈ ಒಂದು ಫೋಟೋದಿಂದ ಆತನ ಜೀವನವೇ ಅದೃಷ್ಟಮಯ ರೀತಿಯಲ್ಲಿ ಬದಲಾಗಿದೆ. ವೈರಲ್ ಆಗಿರುವ ಈ ಫೋಟೋದಲ್ಲಿಯ ವ್ಯಕ್ತಿಯ ಹೆಸರು ಅಬ್ದುಲ್.
.ಫೋಟೋದಲ್ಲಿ ಆತ ತನ್ನ ಮಗಳನ್ನು ಕಂಕುಳಲ್ಲಿ ಎತ್ತಿ ಹಿಡಿದು ಮಧ್ಯಾಹ್ನದ ಸಮಯದಲ್ಲಿ ಪೆನ್ನುಗಳನ್ನು ಮಾರಾಟ ಮಾಡಲು ಸುತ್ತಾಡುತ್ತಿದ್ದನು. ಅಬ್ದುಲ್ ಜನರಿಗೆ ಪೆನ್ನುಗಳನ್ನು ಖರೀದಿಸಲು ವಿನಂತಿಸುತ್ತಿರುವಾಗ ಯಾರೋ ಒಬ್ಬರು ಈತನ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಬ್ದುಲ್ ನ ಈ ಪರಿಸ್ಥಿತಿಯನ್ನು ನೋಡಿ ಜನರಿಗೆ ತುಂಬಾ ಕೆಡುಕೆನಿಸಿತು. ಹೀಗಾಗಿ ಈ ಫೋಟೋ ಸಖತ್ ವೈರಲ್ ಆಗಿದೆ.
ಸಮಯವು ಯಾವತ್ತೂ ಒಂದೇ ರೀತಿಯಾಗಿರುವುದಿಲ್ಲ ಎನ್ನುತ್ತಾರೆ.
ಯಾವಾಗ ಅದೃಷ್ಟ ಒಲಿಯುವುದು ಆಗ ಬಿಕ್ಷುಕನು ಸಹ ರಾಜನಾಗುತ್ತಾನೆ. ಕೆಲವೇ ದಿವಸಗಳ ಹಿಂದೆ ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಹೊಟ್ಟೆ ಪಾಡಿಗಾಗಿ ಪೆನ್ನುಗಳನ್ನು ಮಾರುವ ಅಬ್ದುಲ್ ನ ಜೀವನ ಒಂದು ಫೋಟೋದಿಂದ ಒಮ್ಮೆಲೆ ಅದೃಷ್ಟಕರ ರೀತಿಯಲ್ಲಿ ಬದಲಾಯಿತು. ಹೇಗೆ ನೋಡಿ….
ವೈರಲ್ ಆದ ಈ ಫೋಟೋವನ್ನು ನೋಡಿ ಅನೇಕರು ಕಣ್ಣೀರು ಹಾಕಿದ್ದಾರೆ. ಅಬ್ದುಲ್ ನ ಈ ಫೋಟೋ ವೈರಲ್ ಆದ ನಂತರ ನಾರ್ವೆಯ ಒಬ್ಬ ಪತ್ರಕರ್ತ ಗಿಸಾರ್ ಸಾಯಮನಾರ್ಸನ್ ಟ್ವಿಟರ್ನಲ್ಲಿ @buy_pens ಹೆಸರಿನ ಒಂದು ಅಕೌಂಟ್ ನಿರ್ಮಿಸಿ ಅದಕ್ಕಾಗಿ ಹಣ ನೀಡಲು ಅಪೀಲ್ ಮಾಡಿದನು. ಆತ 5000 $ (ಅಮೆರಿಕನ್ ಡಾಲರ್) ಕಲೆ ಹಾಕುವ ಗುರಿ ಇಟ್ಟನು. ಈ ಅಪೀಲಿನ ಕೊನೆಯ ದಿವಸ 1 ಲಕ್ಷ 90 ಸಾವಿರ ಅಮೆರಿಕನ್ ಡಾಲರ್ ಹಣ ಕೂಡಿತು.
ಇಂದು ಅಬ್ದುಲ್ ಸ್ವತಃ ಒಂದು ಒಳ್ಳೆಯ ಉದ್ಯೋಗ ಮಾಡುವುದಲ್ಲದೆ ತನ್ನಂತಹ 16 ಶರಣಾರ್ಥಿಗಳಿಗೆ ದಿನಂಪ್ರತಿ ಕೆಲಸದ ಜೊತೆಗೆ ಒಳ್ಳೆಯ ಜೀವನ ಜೀವಿಸಲು ಸಹಾಯಮಾಡುತ್ತಿದ್ದಾನೆ.
ಜನರು ನೀಡಿದ ಹಣ ಭಾರತೀಯ ರೂಪಾಯಿಗಳಲ್ಲಿ ಸುಮಾರು 1 ಕೋಟಿ 25 ಲಕ್ಷ ರೂಪಾಯಿಗಳಷ್ಟು ಆಗುತ್ತದೆ. ಎಲ್ಲ ಹಣವನ್ನು ಗೀಸಾರ್ ನು ಅಬ್ದುಲ್ ನಿಗೆ ನೀಡಿದನು. ದಾನದ ಸ್ವರೂಪದಲ್ಲಿ ದೊರೆತ ಹಣದಿಂದ ಅಬ್ದುಲ್ ಇಂದು ಒಂದು ಉದ್ಯೋಗವನ್ನು ಪ್ರಾರಂಭಿಸಿದ್ದಾನೆ. ಉಳಿದ ಶರಣಾರ್ಥಿಗಳಿಗೂ ಅಬ್ದುಲ್ ಸಹಾಯ ಮಾಡಿದ್ದಾನೆ. ಲೆಬನಾನ್ ನಲ್ಲಿ ಇಂದು ಒಟ್ಟು 1.2 ದಶಲಕ್ಷ ಶರಣಾರ್ಥಿಗಳು ಇದ್ದಾರೆ.
ಅಬ್ದುಲ್ಲಾನ ಫೋಟೋ ಜಗತ್ತಿನ ಮನಸ್ಸು ಗೆದ್ದ ನಂತರ ಅವರ ಸಹಾಯದಿಂದ ಅಬ್ದುಲ್ ನಿಗೆ ಈಗ ಯಾವುದು ಕಡಿಮೆ ಇಲ್ಲ. ಜನರ ಸಹಾಯದಿಂದ ಇಂದು ಆತ ಉದ್ಯೋಗಸ್ಥನಾಗಿದ್ದಾನೆ. ಅಪಾರ್ಟ್ಮೆಂಟ್ ಒಂದರಲ್ಲಿ 2 ಕೋಣೆಗಳ ಒಳ್ಳೆಯ ಮನೆಯಲ್ಲಿ ತನ್ನ ಮಗಳಾದ ರೀಮ್ ಜೊತೆಗೆ ಇದ್ದಾನೆ.
ಕೃಪೆ
ನಮ್ಮ ಓದುಗರಿಗಾಗಿ ವೈರಲ್ ಪೋಸ್ಟ್ ವೆಬ್ ಪೇಬ್ ಪೇಜಿನಿಂದ ಈ ಲೇಖನ ಪಡೆಯಲಾಗಿದೆ.