ಡಾ ರಾಮಮನೋಹರ ಲೋಹಿಯಾ
ಇದ್ದನೊಬ್ಬ ನಮ್ಮ ದೇಶದಿ
ರೈತ ಬಡವರ ಮಿತ್ರನು
ಶ್ರಮದ ಸಂಸ್ಕೃತಿ ದೇಶ ಭಕ್ತಿ
ನಾಡು ನುಡಿಗೆ ದುಡಿದನು
ಸತ್ಯ ಸಮತೆ ಶಾಂತಿ ಮಂತ್ರ
ಗಾಂಧಿ ಚರಕದ ಚಕ್ರವು
ಕ್ರಾಂತಿ ಚಳುವಳಿ ದಂಗೆ ಎದ್ದನು
ದೇಶ ಉದಯ ಸ್ವತಂತ್ರವು
ಲೆಕ್ಕ ಕೇಳಿದ ಪ್ರಧಾನಿಯನ್ನು
ನಾಯಿಗೆ ಮಾಡುವ ಖರ್ಚು
ತಿನ್ನಲಿಲ್ಲ ಅನ್ನ ಗಂಜಿ
ಏಕೆ ವ್ಯರ್ಥ ವೆಚ್ಚು ?
ಸಮಾಜವಾದ ಮೂಲ ತತ್ವ
ಜೈಲು ಕಂಡ ಯೋಧನು
ರಾಷ್ಟ್ರ ಪ್ರೀತಿ ತನ್ನ ಉಸಿರು
ದೇಶವಾಯಿತು ನಿತ್ಯ ಹಸಿರು
ರಾಮ ಕೃಷ್ಣ ಓದಿಕೊಂಡ
ತಾನು ಬ್ರಹ್ಮಚರ್ಯನು
ಹಾಸ್ಯ ವಿನೋದ ಮೂರ್ತಿ ಭಂಜಕ
ದೇಶಕ್ಕಾಗಿ ಮಡಿದನು
ಸಂತೆಯೊಳಗಿನ ಸಂತ ಪುರುಷ
ರಾಮಮನೋಹರ ಲೋಹಿಯಾ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಇಂದು
ಡಾ ರಾಮಮನೋಹರ ಲೋಹಿಯಾ* ಅವರ ಪುಣ್ಯ ಸ್ಮರಣೆ ದೇಶವು ಕಂಡ ಧೀಮಂತ ನಾಯಕ ಅಪ್ರತಿಮ ಸಮಾಜವಾದಿ ಚಿಂತಕ ಸಾಹಿತಿ ಮರೆಯಾಗಿ 56 ವರುಷ