ಜ್ಯೋತಿಯಿಂದ ಜ್ಯೋತಿ ಬೆಳಗಿಸಿ…

ಜ್ಯೋತಿಯಿಂದ ಜ್ಯೋತಿ ಬೆಳಗಿಸಿ…

ಕಾರ್ತಿಕದ ಕತ್ತಲೆಯ ಕಳೆಯುತಲಿ
ಬೆಳಗುತಿದೆ ಜ್ಯೋತಿ ಹಣತೆಯಲಿ
ತಂದು ಸಡಗರ ಸಂಭ್ರಮ ಹರುಷ
ದೀಪಗಳ ಹಬ್ಬ ನೀಡಿ ಸುಖಸ್ಪರ್ಷ

ಸ್ನೇಹ ವಿಶ್ವಾಸಗಳ ತೈಲವೆರೆದು
ನಿಸ್ವಾರ್ಥ ಸೇವೆಯ ಬತ್ತಿ ಉರಿಸಿ
ಬೆಳಗಿಸುತ ಜ್ಯೋತಿಯಿಂ ಜ್ಯೋತಿಯನ್ನು
ಹರಡೋಣ ಸತ್ಯ ಸುಪ್ರಭೆಯನಿಂದು

ಜಾತಿ ಮತಗಳ ಗೊಡ್ಡು ಭೇದವಳಿಸಿ
ಸೌಹಾರ್ದ ಸಮರಸದ ಭಾವ ಬೆಳೆಸಿ
ಭಾವೈಕ್ಯ ಬೆಳಕಿನ ಕಿರಣ ಸೂಸಿ
ಬಾಳೋಣ ಒಂದಾಗಿ ಶಾಂತಿ ನೆಲೆಸಿ

ಭಾಷೆ ಭಾಷೆಗಳ ಗಡಿಯ ಮೀರಿ
ರೋಷ ದ್ವೇಷಗಳ ತುಳಿದು ಮೆಟ್ಟಿ
ಮಾನವತೆ ಸಂಪ್ರೀತೀ ಸುಧೆಯ ಹರಿಸಿ

ಬೆಳಗೋಣ ಪ್ರೇಮ ಜ್ಯೋತಿಯನು ಜಗದಿ..

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.

Don`t copy text!