ಗಜಲ್

ಗಜಲ್

ದೀಪದಿಂದ ದೀಪವನ್ನು ಹೊತ್ತಿಸಲು ಬೆಳಕನ್ನು ನೀಡುತ್ತದೆ
ಮಾತ್ಸರ್ಯವು ತನ್ನನ್ನೇ ಸುಟ್ಟು ಕತ್ತಲೆಯನ್ನು ಕೊಡುತ್ತದೆ

ಪ್ರೀತಿಯಿಲ್ಲದೆ ಯಾವ ಜೀವಿ ಬದುಕಲುಂಟು ಜಗದಲ್ಲಿ
ನಗುವನ್ನು ಅಪ್ಪಲು ಬದುಕು ಖುಷಿಯನ್ನು ತರುತ್ತದೆ

ದುಷ್ಟರ ಸಂಗವು ಸುಖದಿಂದಲೇ ಅಂತ್ಯವಾಗುವುದಿಲ್ಲ
ಶಿಷ್ಟರ ಸಂಗವಿರೆ ತನ್ನೊಳಗಿನ ದುಃಖವನ್ನು ತಳ್ಳುತ್ತದೆ

ಎಣ್ಣೆ ಬತ್ತಿ ಜೊತೆಯಾದಾಗಲೇ ಪ್ರಜ್ವಲನೆಯಾಗುವುದು
ಕಷ್ಟ ಸುಖದ ಸಮ್ಮಿಶ್ರ ಸಾರವು ಜೀವವನ್ನು ರೂಪಿಸುತ್ತದೆ

ಕವೀಶ್ವರನ ಹೃದಯದಲ್ಲಿ ಸಮಭಾವದ ಪ್ರೀತಿಯುಂಟು
ರವಿಯ ಕಿರಣವು ಭೇದವಿಲ್ಲದ ಸಮತೆಯನ್ನು ಸಾರುತ್ತದೆ

ಈಶ್ವರ ಮಮದಾಪೂರ, ಗೋಕಾಕ
ಮೊಬೈಲ್ : ೯೫೩೫೭೨೬೩೦೬

Don`t copy text!