ಗಜಲ್
ಬನ್ನಿರಿ ಬನ್ನಿರಿ ಚಿಣ್ಣರೆಲ್ಲರು ಶಾಲೆಗೆ ಬನ್ನಿರಿ ಮಕ್ಕಳೆ
ಓದು ಬರಹ ಕಲಿಯಲೆಲ್ಲರು ಶಾಲೆಗೆ ಬನ್ನಿರಿ ಮಕ್ಕಳೆ
ಅಕ್ಷರ ಕಲಿತು ಸಾಕ್ಷರರಾಗಲು ಸ್ವಾಗತ ನಿಮಗೆ ಚಿಣ್ಣರೆ
ದೇವರ ಗುಡಿಯ ಹೂಗಳೆಲ್ಲರು ಶಾಲೆಗೆ ಬನ್ನಿರಿ ಮಕ್ಕಳೆ
ಪುಸ್ತಕ ಓದುತ ಮಸ್ತಕ ಬೆಳೆಸಿ ಜ್ಞಾನದೀಪವ ಪಡೆಯಿರಿ
ಸುಜ್ಞಾನ ಗಳಿಸಲು ಬಾಲಕರೆಲ್ಲರು ಶಾಲೆಗೆ ಬನ್ನಿರಿ ಮಕ್ಕಳೆ
ಬಿಸಿಯೂಟ ನೀಡಿ ಆಟವನಾಡಿಸುತ ಆಡಿಸುವರಿಲ್ಲಿ
ಬೆಲ್ಲದ ಸಿಹಿ ಚಕ್ಕೆಯ ನೀಡುವರು ಶಾಲೆಗೆ ಬನ್ನಿರಿ ಮಕ್ಕಳೆ
ಕಥೆಯನು ಹೇಳುತ ಹಾಡನು ಹಾಡಿಸುತ ನಲಿಸುವರಿಲ್ಲಿ
ಜ್ಞಾನಜ್ಯೋತಿಯನು ಬೆಳಗುವರು ಶಾಲೆಗೆ ಬನ್ನಿರಿ ಮಕ್ಕಳೆ
– ಈಶ್ವರ ಮಮದಾಪೂರ , ಗೋಕಾಕ
ಮೊಬೈಲ್ : ೯೫೩೫೭೨೬೩೦೬