ಬೆಳಕಾದ ಮಹಾತ್ಮ
ಬಾಚಬೇಕು ತಲೆ ಅಸ್ಪೃಶ್ಯರ
ನೊಂದ ಬಳಲಿದ ಅಬಲೆಯರ
ಶೋಷಿತ ಜನಾಂಗದ ದಲಿತರ
ಅಪ್ಪಿದ ಕುದ್ಮುಲ್ ರಂಗರಾವರಂತೆ
ಹೆದರಲಿಲ್ಲ ವಿರೋಧಿ ಜನಾಂಗಕ್ಕೆ
ತೂರಿದರು ಕಲ್ಲು ಸೆಗಣಿ ಮಣ್ಣು
ಮಹಾತ್ಮನಿಗೂ
ಬದುಕಿದರು ಅವರಿಗಾಗಿ
ತೆರೆದರು ಶಾಲೆ ಶೇಡಿಗುಡ್ಡೆಯಲಿ
ಕರಕುಶಲ ಕಲೆ
ಬದುಕು ಕಟ್ಟುವ ಮೆಲೆ
ನೂರು ಅವಮಾನಗಳನು ಎದುರಿಸಿ ನಡೆದ ಮಹಾತ್ಮ
ಗಾಂದೀಜಿಗೂ ಗುರುವಾದರು
ಸುಟ್ಟು ಹಾಕಿದರು
ಬಂದ ಪುರಸ್ಕಾರ
ಪತ್ರಗಳು ನೂರೆಂಟು
ಅಡ್ಡಿ ಪಡಿಸಿದ ವಕೀಲ ವೃತ್ತಿಗೆ ಕೊಟ್ಟರು ರಾಜಿನಾಮೆ
ಜೀವನ ಪೂರ್ತಿ ಸವೆಸಿದರು ದಲಿತರಿಗಾಗಿ
ನನ್ನ ಶಾಲೆಯಲ್ಲಿ ಕಲಿತ
ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ
ಸರಕಾರಿ ನೌಕರಿ ಹಿಡಿದು
ಕಾರಿನಲ್ಲಿ ಓಡಾಡಬೇಕು
ಆ ಕಾರಿನ ಧೂಳು ನನ್ನ ತಲೆಗೆ ತಾಗಬೇಕು
ಅವಾಗ ನನ್ನ ಜನ್ಮ ಸಾರ್ಥಕ
ಸಮಾಧಿ ಯ ಮೇಲೆ ಬರೆದ ನುಡಿ
ಬುದ್ಧ ಬಸವಣ್ಣನವರ
ಆದರ್ಶದ ಬೆಳಕು
ಬೆಳಗಿ ಆರಿದ ದೀಪ
ನಮಿಸೋಣ
ಅಪ್ಪಿದ ತಂದೆಯನ್ನು
–ಡಾ ಸಾವಿತ್ರಿ ಕಮಲಾಪೂರ