ಡಾ. ಅರವಿಂದ ಜತ್ತಿ

ಡಾ. ಅರವಿಂದ ಜತ್ತಿ

ರಿವೇ ಗುರು ಎಂಬ ತತ್ತ್ವ ಸಿದ್ಧಾಂತ ಭಾರತ ದೇಶದ ಮೂಲೆ ಮೂಲೆಗೂ ಪಸರಿಸುವ ರಾಷ್ಟ್ರ ಬಸವ ಸಮಿತಿ ಅಧ್ಯಕ್ಷರು,

ಸ ರಸಂಜನೆಯ ತೃಪ್ತಿ ಬದುಕಿಗೆ ಶರಣರ ವಿಚಾರಗಳು ದಾರಿ ದೀಪ ಎನ್ನುತ್ತ ವಚನಗಳು ಅನ್ಯ ಭಾಷೆಗೆ ತರ್ಜುಮೆಯ ಮಾಡುತ್ತಿರುವ
ಕಾಯಕ ಜೀವಿಗಳಿವರು,

ವಿಂ ಗಡಿಸದೆ ಎಲ್ಲರನ್ನೂ ಸಂಗಡ ತೆಗೆದುಕೊಂಡು ಹೋಗುವುದೆ ಶರಣರ ದೂರದೃಷ್ಟಿ ಎಂಬ ವಿಚಾರ ಪ್ರತಿ ಕಾಲೇಜುಗಳಿಗೆ ಹೋಗಿ ವಚನ ಪ್ರತಿಬಿಂಬಿಸಿದ ಅನುಭಾವಿಗಳಿವರು,

 ಯವೇ ಧರ್ಮದ ಮೂಲ ಇದು ವೈಚಾರಿಕ ವೈಜ್ಞಾನಿಕ ವಿಷಯ ಎಂಬುದು ಪಾಶ್ಚಿಮಾತ್ಯ ದೇಶಗಳಿಗೆ ತಮ್ಮ ನುಡಿ ಕಾಣಿಕೆ ಮೂಲಕ ತಿಳಿಸಿದ ಅಪರೂಪದ ವಿಚಾರವಾದಿಗಳಿವರು,

ಗ ಬದುಕಲಿ ಜನ ಬದುಕಲಿ ಎಂದು ಸಮ ಸಮಾಜದ ಕಲ್ಪನೆ ಕೊಟ್ಟ ಬಸವಾದಿ ಶರಣರ ಆಚಾರ ವಿಚಾರ ಎಲ್ಲೆಡೆ ಮನ ಮಾತಾಗಿಸುತ್ತಿರುವ ಅಪರೂಪದ ಮಾತೃಹೃದಯಿಗಳಿವರು,

ತಿ ಳುವಳಿಕೆಯಿಂದ ಅನುಭಾವದ ಅನುಭವದಿಂದ ವಚನ ಸಾಹಿತ್ಯ ಜೀವನದ ಹಾಸು ಹೊಕ್ಕಾಗಿಸಲು ತನು ಮನ ಧನ ಸಮಯ ಕೊಡುತ್ತಿರುವ ಬಸವ ಶ್ರಮಜೀವಿಗಳಿವರು,

ಡಾ. ಅರವಿಂದ ಜತ್ತಿ
ಬಸವ ಅನುಭಾವಿ ಸಾಹಿತಿಗಳಿಗೆ
ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿನ್ನಲೆಯಲ್ಲಿ ಅಣ್ಣಾಜಿ ಅವರಿಗೆ ವಚನ ವೈಭವ ಸಮತಿ ಪರವಾಗಿ ಅಭಿಮಾನ ಪೂರ್ವಕವಾದ ಗೌರವಿಸಿದೆ

ಟೋಕರೆ ಶಿವಶಂಕರ

Don`t copy text!