ಲಿಂಗಾಯತ ಧರ್ಮವು ವಿಶ್ವ ಧರ್ಮವು.
ಜಾತಿ ವಿಮೋಚನೆ ಹಾಗೂ ಬಸವಣ್ಣನವರ ವಚನಗಳಲ್ಲಿ ದಲಿತರನ್ನು ಅಪ್ಪಿಕೊಂಡ ರೀತಿ ಶ್ಲಾಘನೀಯವಾದದ್ದು .
ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ
ದಲಿತರನ್ನು ಅಸ್ಪ್ರಶ್ಯರನ್ನು ಅಪ್ಪ ದೊಡ್ಡಪ್ಪ ಚಿಕ್ಕಪ್ಪ ಅಣ್ಣ ಎಂದೆಲ್ಲ ಕರೆದು ಅವರನ್ನು ಮುಖ್ಯ ಸಮಾಜವಾಹಿನಿಗೆ ತಂಡ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲಬೇಕು.
ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ
ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕರಿಯರಿ ಕೂಡಲ ಸಂಗಮದೇವಾ
ದಮನಿತರನ್ನು ದಲಿತರನ್ನು ಶೋಷಿತರನ್ನು ಕಾರ್ಮಿಕರನ್ನು ಅಪ್ಪಿಕೊಂಡ ಧರ್ಮ ಶರಣ ಧರ್ಮವಾಗಿದೆ.
ಸನಾತನ ವ್ಯವಸ್ಥೆಗೆ ಪರ್ಯಾಯವಾಗಿ ಮೂಡಿ ಬಂದ ಈ ಅವೈದಿಕ ಹಿಂದುಯೇತರ ಸ್ವತಂತ್ರ ಧರ್ಮವು ಇಂದು ಮಠೀಯ ವ್ಯವಸ್ಥೆಯ ಪಾರುಪಥ್ಯದಲ್ಲಿ ಉಸ್ತುವಾರಿಯಲ್ಲಿ ತನ್ನ ನೆಲೆಸೆಲೆಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ
ಅಕ್ಕ ಸ್ವಾಮಿಯ ಸ್ವಾಮಿ ಶರಣು ಮುಂತಾದ ಬಸವ ಉದ್ಯಮಿಗಳು ಬಸವಣ್ಣನವರನ್ನು ಬಂಡವಾಳ ಮಾಡಿಕೊಂಡಿದ್ದಾರೆ. ( CAPITAL ) ಅವರ ಹೆಸರು ಮುಂದೆ ಮಾಡಿ ಕಾಲೇಜು ಅಂಗಡಿ ಮುಗ್ಗಟ್ಟು ಮಳಿಗೆಗಳು ಬ್ಯಾಂಕುಗಳು ಇವುಗಳನ್ನು ನಡೆಸುತ್ತಿವೆ ಸಾಂಸ್ಥಿಕರಣ ಗೊಂಡ ಲಿಂಗಾಯತ ಧರ್ಮವು ಅದರಿಂದ ಮೊದಲು ಹೊರಬರಬೇಕು ಆಗ ಮಾತ್ರ ಅದಕ್ಕೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಂತಾಗುತ್ತದೆ.
ಪ್ರತಿಯೊಬ್ಬ ಬಸವ ಭಕ್ತ ಲಿಂಗಾಯತ ವಚನಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡು ಆಚರಣೆಗೆ ತಂದರೆ ಲಿಂಗಾಯತ ಧರ್ಮವು ವಿಶ್ವ ಧರ್ಮವಾಗುವದರಲ್ಲಿ ಸಂದೇಹವಿಲ್ಲ
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ