ಪ್ರಕ್ಷಿಪ್ತ ವಚನಗಳ ಶೋಧ ಪರಿಷ್ಕರಣೆ
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.
ಬಸವಣ್ಣನವರ ವಚನ ಸಂಪುಟ 1 ವಚನ ಸಂಖ್ಯೆ 1401
ಇದು ಬಸವಣ್ಣನವರ ವಚನ ಸಂಕಲನದಲ್ಲಿ ಸಂಪುಟದಲ್ಲಿ ಸೇರಿಕೊಂಡಿರುವ ಪ್ರಕ್ಷಿಪ್ತ ವಿರ್ರೋಪಗೊಂಡ ವಚನದ ಒಂದು ಉದಾಹರಣೆ.
ಹಸುವ ಕೊಂದಾತ ಮಾದಾರ ಚೆನ್ನಯ್ಯ
ಇದು ತಪ್ಪಾಗಿ ಪಾಠಾಂತರ ಮಾಡಿದ್ದಾರೆ. ಹದಿನಾರನೆಯ ಶತಮಾನದ ಕಾಳಾಮುಖಿ ಶೈವರು ದಲಿತರ ಅಸ್ಪ್ರಶ್ಯರ ವಚನಗಳನ್ನು ತಿರುಚುವುದಲ್ಲದೆ ಅವರ ಉಲ್ಲೇಖವಿರುವ ಶರಣರ ಕೆಲ ವಚನಗಳನ್ನು ಕುಲಗೆಡಿಸಿದ್ದಾರೆ. ಮಾದಾರ ಚೆನ್ನಯ್ಯ ಮೆಟ್ಟು ಹೊಲೆಯುವವ ಕಾಯಕದವನಾಗಿದ್ದನು. ಮಾದರು ಸತ್ತ ಪ್ರಾಣಿಗಳ ಚರ್ಮವನ್ನು ತೆಗೆಯುತ್ತಾರಲ್ಲದೆ ಪ್ರಾಣಿಗಳನ್ನು ಕೊಲ್ಲುವದಿಲ್ಲ.
ಹೀಗಾಗಿ ಹಸುವ ಕೊಂದಾತ ಮಾದಾರ ಚೆನ್ನಯ್ಯ ಅಂದರೆ ಆಕಳನ್ನು ಮಾದಾರ ಕುಲದವರು ಕೊಲ್ಲುತ್ತಾರೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು. ಇದು ಶುದ್ಧ ಸುಳ್ಳು .
ಕರಿಕಾಲ ಚೋಳನ ಆಸ್ಥಾನದಲ್ಲಿದ್ದ ಮಾದಾರ ಚೆನ್ನಯ್ಯ ಕುದುರಿಗೆ ಹುಲ್ಲು ಹಾಕುವ ಕಾಯಕ ಮಾಡುತ್ತಿದ್ದ .ಕಾಲಾಂತರದಲ್ಲಿ ರಾಜನೊಂದಿಗೆ ಸಂಘರ್ಷಕ್ಕೆ ಇಳಿದು ಚೋಳ ರಾಜ್ಯವ ತೊರೆದು
ಬಸವಣ್ಣನಿರುವ ಕಲ್ಯಾಣಕ್ಕೆ ಬರುತ್ತಾನೆ . ಆಗ ಅಲ್ಲಿ ಮಾದಾರ ಚೆನ್ನಯನು ತಮ್ಮ ಕುಲ ಕಸುಬಾದ ಚಪ್ಪಲಿ ಜೋಡು ಮೆಟ್ಟುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ವೃತ್ತಿಯನ್ನು ಕೈಗೊಳ್ಳುತ್ತಾನೆ .
ಮಾದಾರ ಚೆನ್ನಯನ ಮನೆಗೆ ಶಿವನೇ ಬಂದು ಅಂಬಲಿ ಕುಡಿದು ಹೋದನೆಂದು ಪುರಾಣ ಹೇಳುತ್ತವೆ.
ಅಂಬಲಿ ಸಿದ್ಧ ಪಡಿಸುವಲ್ಲಿ ಮಾದಾರ ಚೆನ್ನಯ್ಯ ಶುದ್ಧ ಹಸ್ತನಾಗಿದ್ದನು ನಿಪುಣನಾಗಿದ್ದನು.
ಹೀಗಾಗಿ ತನ್ನ ಕಾಯಕದ ನಂತರ ಮಹಾಮನೆಯಲ್ಲಿ ಅಂಬಲಿಯನ್ನು ಸಿದ್ಧಪಡಿಸುವ ಸೇವೆಯನ್ನು ಮಾಡುತ್ತಿದ್ದ. ಹೀಗಾಗಿ ಹಸಿದು ಬಂದವರಿಗೆ ಅಂಬಲಿ ನೀಡಿದ ಮಾದಾರ ಚೆನ್ನಯ್ಯನು ಹಸಿವು ಕೊಂದಾತ ಮಾದಾರ ಚೆನ್ನಯ್ಯನ ಬದಲಾಗಿ ಹಸುವ ಕೊಂದಾತ ಮಾದಾರ ಚೆನ್ನಯ್ಯ ಎಂದು ತಿರುಚಿರಬಹುದು,
ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಡೋಹರ ಕಕ್ಕಯನು ಚರ್ಮ ಹದ ಮಾಡುವ ಕಾಯಕದವನು . ಅದರ ಜೊತೆಗೆ ಮಕ್ಕಳನ್ನು ಆರೈಕೆ ಮಾಡುವ ಉಪಚರಿಸುವ ಸೇವೆ ಮಾಡುತ್ತಿದ್ದನು .ಕಾರಣ ಅಕ್ಕ ನಾಗಮ್ಮಳ ಒಂದು ವಚನದಲ್ಲಿ ಒಕ್ಕುದ ಮಿಕ್ಕುದ ಪ್ರಸಾದದಿಂದ ಹುಟ್ಟಿದಾತ ಚೆನ್ನಬಸವಣ್ಣನು ಎಂದಿದ್ದಾಳೆ. ಅಂದರೆ ಶಿಶು ವೈದ್ಯಗಾರ ಮಕ್ಕಳ್ನು ಸಲುಹುವವನು ಎಂದರ್ಥ . ಇದನ್ನು ಹದಿನಾರನೆಯ ಶತಮಾನದ ಸಂಕಲನಕಾರರು ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ ಎಂದು ಉದ್ಧೇಶಪೂರಿತವಾಗಿ ತಿರುಚಿದ್ದಾರೆ ವಿರೂಪಿಸಿದ್ದಾರೆ. ಶಿಶು ವೈದ್ಯಗಾರ ಎಂದರೆ ಮಕ್ಕಳ ಪಾಲಕನು( care taker of children and guardian ).
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ
ಇದನ್ನು ಅತ್ಯಂತ ಹೀನಾಯವಾಗಿ ವಿರೂಪಗೊಳಿಸಿದ್ದಾರೆ. ಪಾಪ ಕರ್ಮವ ತೊಳೆದಾತ ನಮ್ಮ ಮಡಿವಾಳ ಮಾಚಿದೇವ ಎಂಬ ಅರ್ಥವನ್ನು ನೀಡುವ ಸಾಲುಗಳ ಜಾಗೆಯಲ್ಲಿ ಪಾಪಿ ಕರ್ಮಿನಮ್ಮ ಮಡಿವಾಳ ಮಾಚಯ್ಯ ಎಂದು ತಿದ್ದಿದ್ದಾರೆ. ಬಟ್ಟೆ ಮಾಡಿ ಮಾಡುವ ಭಕ್ತರ ಬಟ್ಟೆ ಹಾಸಿಗೆ ಮುಂತಾದವುಗಳನ್ನು ಸ್ವಚ್ಛಮಾಡಿ ಅವರವರ ಮನೆಗೆ ಮುಟ್ಟಿಸುವ ಕಾರ್ಯವನ್ನು ಮಾಡುವ ಮಾಚಿದೇವನು ಅಪ್ಪಟ ಗಣಾಚಾರಿ. ಇಂತಹ ಉದ್ಧೇಶಪೂರಿತ ಪ್ರಕ್ಷಿಪ್ತತೆ ವಿರೂಪಗೊಳಿಸುವ ಕಾರ್ಯದ ಶುದ್ಧೀಕರಣ ನಡೆದಿದೆ ಆದರೆ ಅದಕ್ಕೆ ಒಂದು ಸ್ವತಂತ್ರ ಸಂಶೋಧನಾ ಸಂಸ್ಥೆಯೇ
ನಿರ್ಮಾಣವಾಗಬೇಕು ಇಲ್ಲದಿದ್ದರೆ. ಶೈವವಾದಿಗಳು ಕಾಳಾಮುಖಿಗಳು ತಿರುಚಿದ ವಚನಗಳು ಬಸವಣ್ಣನವರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿ ಗೋಚರಿಸುತ್ತದೆ .
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ, ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.
ಇಂತಹ ಅಪ್ಪಟ ಕಾಯಕ ಯೋಗಿಗಳ ಸೇವಾ ಮೂರ್ತಿಗಳ ಕೂಡಿಕೊಂಡಿಪ್ಪ ಕೂಡಲ ಸಂಗಯ್ಯನು ಮತ್ತೇನು ಬೇಡನು. ಹಸಿವು ಹಿಂಗಿಸುವ. ಮಾದರ ಚೆನ್ನಯ್ಯ ಮಕ್ಕಳ ವೈದ್ಯಗಾರ. ಕಕ್ಕಯ್ಯ ಇವರ ಅನುಪಮ ಕಾರ್ಯ ಪ್ರಸಾದ. ಇದನ್ನು ಬಿಟ್ಟು ಕೂಡಲ ಸಂಗಮ ದೇವ ಬೇರೇನೂ ಬೇಡನು.
ಸೇವೆಯಲ್ಲಿ ದೇವರನ್ನು ಕಾಣುವ ಶರಣರನ್ನು ಕ್ರೂರಿಗಳನ್ನಾಗಿ ಬಿಂಬಿಸಿದ್ದಾರೆ ಇದು ಸಂಪೂರ್ಣ ಸುಳ್ಳು ಅನ್ಯಾಯ.
-ಡಾ .ಶಶಿಕಾಂತ.ಪಟ್ಟಣ ರಾಮದುರ್ಗ