ಕಾವ್ಯ ವಚನದಲ್ಲಿ ನಾಯಿ

ಕಾವ್ಯ ವಚನದಲ್ಲಿ ನಾಯಿ

ಪ್ರಾಣಿಗಳಲ್ಲೇ ಅತ್ಯಂತ ನಂಬಿಕೆಯ ಪ್ರಾಣಿ ಎಂದರೆ ನಾಯಿ .ನಂಬಿದ ಮನೆಯ ಯಜಮಾನನನ್ನು ತನ್ನ ಜೀವ ಕೊಟ್ಟು ಕಾಪಾಡುವ ಈ ನಾಯಿಯನ್ನು ನಿಸ್ಪ್ರಯೋಜಕ ವ್ಯಕ್ತಿಯ ಗುಣಸ್ವಭಾವಕ್ಕೆ ಹಾಗೂ ನೀಚ, ದುಷ್ಟಗುಣ ವ್ಯಕ್ತಿಯ ಗುಣಸ್ವಭಾವಕ್ಕೆ ಹೋಲಿಸಬಹುದು.

ಈ ನಾಯಿಗಳಲ್ಲಿ ಅನೇಕ ರೀತಿಯ ತಳಿಗಳು ಇವೆ .ಅಂದರೆ ಮನುಷ್ಯರಲ್ಲಿ ಇರುವ ಆರು ವೈರಿಗಳು ಅಂದರೆ ಅರಿಷಡ್ವರ್ಗಕ್ಕೆ ಹೋಲಿಸಬಹುದು . ಒಂದೊಂದು ಸ್ವಭಾವದ ಜಾತಿ ನಾಯಿಗಳು ಈ ಅರಿಷಡ್ವರ್ಗ ಗಳು ಆಗಿವೆ. ಎಂದರೆ ತಪ್ಪಿಲ್ಲ. ಅದಕ್ಕೇ ಅನೇಕ ದಾಸರು ಶರಣರು.ಶ್ರೇಷ್ಠ ಕವಿವರ್ಯರು ತಮ್ಮ ಕಾವ್ಯ ಕಥೆಗಳಲ್ಲಿ ನಾಯಿಯ ಉದಾಹರಣೆಯನ್ನು ತೆಗೆದುಕೊಂಡು ಕಾವ್ಯವನ್ನು ರಚನೆ ಮಾಡಿದ್ದಾರೆ .
ಪುರಂದರದಾಸರು ತಮ್ಮ ಒಂದು ಕವಿತೆಯಲ್ಲಿ ಹೀಗೆ ಹೇಳುತ್ತಾರೆ .

ಹುಗ್ಗಿ ಮಾಡೋ ಅಲ್ಲಿಗೆ ಹೋದರೆ
ತಗ್ಗಿ ಬಗ್ಗಿ ನೋಡುವಿರಿ ಹುಗ್ಗಿ ಮಾಡೋ ಸೌಟಲಿ ಹೊಡೆದರೆ
ಕುಂಹಿ ಕುಂಹಿ ರಾಗವ ಮಾಡುವಿರಿ

ಇದರ ಅರ್ಥ ಎನೆಂದರೆ ಪಂಚೇಂದ್ರೀಯಗಳಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ತ್ವಚೆ ಯ ಬಗ್ಗೆ ಹೇಳುತ್ತ .ನಾಸಿಕ ವಾಸನಾ ಬಲವನ್ನು(ಆಸೆ) ಹೊಂದಿರುತ್ತದೆ . ಯಾವ ಯಾವ ಮನೆಗಳಲ್ಲಿ ಯಾವ ಯಾವ ಆಹಾರ ತಯಾರಿಸುತ್ತಾರೆ ಎಂದು ತಿಳಿದು ಅತ್ತ ಕಡೆ ಮನಸ್ಸು ಹೋಗಿ ಚಿತ್ತ ಚಾಂಚಲ್ಯ ವಾಗುತ್ತದೆ .ಮಾಡುವ ಕೆಲಸ ಕಾರ್ಯದಲ್ಲಿ ಎಕಾಗ್ರತೆ ಕಡಿಮೆಯಾಗುತ್ತದೆ .ಕೆಲಸ ಕಾರ್ಯದಲ್ಲಿ ಏಕಾಗ್ರತೆ ಕಡಿಮೆಯಾದಾಗ ಕೆಲಸ ಕೊಟ್ಟ ಯಜಮಾನ ತನ್ನ ಬಾಯಿ ಮಾತಿನಿಂದ ಬಡಿದಂತೆ ಎಚ್ಚರಿಸುವ ಎಚ್ಚರಿಕೆಯ ಮಾತುಗಳನ್ನು ಆಡುತ್ತಾನೆ .ಅವಾಗ ಯಜಮಾನ ಹೇಳಿದ ಮಾತುಗಳನ್ನು ಕೇಳದೇ ಕುಂಹಿ ಕುಂಹಿ ರಾಗ ಮಾಡುವ ಅಂದರೆ ಮಾಡುವ ಕೆಲಸದಲ್ಲಿ ಅನೇಕ ಸಮಸ್ಯೆಗಳನ್ನು ಹೇಳಿ ಕೆಲಸ ಕಾರ್ಯದಿಂದ ಹೊರಗೆ ಅರಾಮವಾಗಿ ಉಳಿಯಲು ಬಯಸುತ್ತ.ಎಂತಹ ಒಂದು ಅರ್ಥವನ್ನು ದಾಸರು ಕಟ್ಟಿದ್ದಾರೆ ನೋಡಿ .
ಅದೇ ರೀತಿಯಾಗಿ
ಇನ್ನೊಂದು ತಮ್ಮ ನುಡಿಯಲ್ಲಿ

ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ…

ಈ ಸಮಾಜಕ್ಕೆ ತನ್ನಿಂದ ಅಲ್ಪಸ್ವಲ್ಪ ವಾದರೂ ಯಾವುದೇ ಉಪಕಾರವಾಗದಿದ್ದರೂ ಆಡಂಬರದ ಮಾತುಗಳಿಗೆ ಕೊನೆಯಿರುವುದಿಲ್ಲ . ತುತ್ತು ಅನ್ನಕ್ಕಾಗಿ ಕಚ್ಚಾಡುವ ನಾಯಿಗಳಂತೆ ಸಮಾಜದಲ್ಲಿ ಇತರರೊಂದಿಗೆ ಸದಾ ಕಚ್ಚಾಡುವುದೇ ಇವರ ಕಾಯಕವಾಗಿರುತ್ತದೆ .

ಕುಮಾರವ್ಯಾಸ ಅವರು ಬರೆದ ಒಂದು ನುಡಿಯಲ್ಲಿ

ಮಂದೆಗೆಳೆಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ ಇಂದು ಕೀಚಕ ನಾಯ ಕಾಲಲಿ ನೊಂದೆ ನಾನೀ……

ದ್ರೌಪದಿಯು ಅವಮಾನಕ್ಕೊಳಗಾದ ಮೂರು ಪ್ರಸಂಗದಲ್ಲಿ ಕೀಚಕನನ್ನು ನಾಯಿ ಎಂದು ದ್ರೌಪದಿಯು ಟೀಕಿಸಿರುವುದನ್ನು ಕವಿ ಕುಮಾರವ್ಯಾಸ ಅವರು ತಮ್ಮ ಕಾವ್ಯದಲ್ಲಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ .

ಜೇಡರ ದಾಸಿಮಯ್ಯನವರು ತಮ್ಮ ವಚನಗಳಲ್ಲಿ

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಬೀಸುವ ವಾಯು ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ

ಈ ಭೂಮಿ ದೇವರ ಕೊಡುಗೆ ಈ ಬೆಳೆ ದೇವರು ನಮಗೆ ಕೊಟ್ಟ ಕೊಡುಗೆ ಈ ಧರೆಯ ಮೇಲೆ ಬೀಸುವ ಗಾಳಿಯೂ ಕೂಡಾ ದೇವರ ಕೊಡುಗೆ. ಇಲ್ಲಿ ಬೀಸುವ ಗಾಳಿಯೇ ನಮಗೆಲ್ಲ ಉಸಿರು ಅಂದರೆ ಜೀವ ಇದ್ದಂತೆ . ಇಲ್ಲಿ ಬೆಳೆದಿರುವ ಬೆಳೆ ಎಲ್ಲಾ ನಮಗೆ ಬದುಕು ಈ ಜೀವ , ಬದುಕು ಕೊಟ್ಟ ದೇವ ಭಗವಂತನನ್ನು ನೆನೆಯುವುದನ್ನು ಬಿಟ್ಟು ಅನ್ಯರನ್ನು ನೆನಪಿಸುತ್ತ , ಹೊಗಳುತ್ತ ಅವರನ್ನೇ ಮೆಚ್ಚುತ್ತ ,ಮೆಚ್ಚಿಸುತ್ತ ಮುಸುರೆಕೊಟ್ಟವರ ಹಿಂದೆಯೇ ಹಿಂದೆಯೇ ತಿರುಗುತ್ತ ನಾಯಿಯಂತೆ ತಿರುಗುವ ನಾಯಿಯಂತೆ ಬಾಲ ಅಲ್ಲಾಡಿಸುತ್ತ ತಿರುಗಾಡುತ್ತ ಬೀದಿ ಬೀದಿ ಸುತ್ತುವ ನಾಯಿಗಳು ಇದ್ದಂತೆ ಎನ್ನುವ ಮಾತನ್ನು ನಾವು ಇಲ್ಲಿ ಗ ಮನಿಸಬಹುದಾಗಿದೆ .

ಒಟ್ಟಿನಲ್ಲಿ ಸಮಾಜದಲ್ಲಿ ಬದುಕುವ ನಾವು ಯಾರು ಒಳ್ಳೆಯವರು, ಯಾರು ಕೆಟ್ಟವರು, ಎನ್ನುವ ಸೂಕ್ಷ್ಮ ಬುದ್ಧಿಯನ್ನು ತಿಳಿದು ಬದುಕು ಸಾಗಿಸಬೇಕು .ವ್ಯಕ್ತಿ ಸಮಾಜದಲ್ಲಿ ಹೇಗಿದ್ದರೂ , ಆಡಿಕೊಳ್ಳುವವರು ಇದ್ದೇ ಇರುವರು. ಕೆಲವೊಂದು ತೆಗಳುತ್ತವೆ ಅಂದರೆ,(ಕಚ್ಚುತ್ತವೆ)ಹೊಗಳುತ್ತವೆ ಅಂದರೆ,(ಸಾಕಿದವು ನಾಯಿ)ಪುರಸ್ಕರಿಸುತ್ತವೆ(ಹೊತ್ತು ಹೊತ್ತಿಗೆ ನಾಯಿಗೆ ಆಹಾರ ಹಾಕಿದಾಗ)ಮತ್ತು ತಿರಸ್ಕರಿಸುತ್ತವೆ (ಹೊತ್ತು ಹೊತ್ತಿಗೆ ನಾಯಿಗೆ ಆಹಾರ ಹಾಕದೇ ಇದ್ದಾಗ ) ಬೊಗಳುತ್ತವೆ (ಹೊಟ್ಟೆಕಿಚ್ಚು ಪಟ್ಟಾಗ) ಕಂಡ ಕಂಡ ವ್ಯಕ್ತಿಗಳನ್ನು ಕಂಡು ಬೊಗಳುತ್ತವೆ .
ಇನ್ನೂ ಕೆಲವೊಂದು ಸುಮ್ಮನಿರುತ್ತವೆ. ಯಾರ ಚಿಂತೆ ನಮಗೆ ಏಕೆ ? ನನ್ನಷ್ಟಕ್ಕೆ ನಾನಿದ್ದರೆ ಸಾಕು ಎಂದು ಇನ್ನೂ ಕೆಲವೊಂದು ಜೊಲ್ಲು ಸುರಿಸುತ್ತವೆ .ಉತ್ತಮ ಆಹಾರ ಕಂಡಾಗ ಅಂದರೆ ಸುಂದರ ನಾರಿಯರನು ಕಂಡಾಗ
ಇನ್ನೂ ಕೆಲವೊಂದು ನಾಯಿ ಸ್ವಭಾವ ಇರುತ್ತವೆ .ಇಷ್ಷ ಇಲ್ಲದ ನಾಯಿಗಳನ್ನು ದೂರ ಬಿಟ್ಟು ಬಂದರೂ ಮತ್ತೆ ಮನೆಗೆ ಬಂದು ಸೇರುತ್ತವೆ ಎಷ್ಟು ಬೈದರೂ ಹೊಡೆದರೂ ಮನೆ ಬಿಟ್ಟು ದೂರ ಕಳುಹಿಸಿದರೂ ಮತ್ತೆ ಬಂದು ಸೇರುವರು. ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಬಂದರೂ ನಾಚುವುದಿಲ್ಲ .ಗೆದ್ದ ಎತ್ತಿನ ಬಾಲ ಎನ್ನುವ ಹಾಗೆ ಹೀಗೆ ವಿವಿಧ ಗುಣ ಸ್ವಭಾವದ ಜನರು ಸಮಾಜದಲ್ಲಿ ಇರುವರು ಒಂದು ಮನೆಯಿಂದ ಮತ್ತೊಂದು ಮನೆಗೆ ತಿರುಗಾಡುವಂತೆ ನಾಯಿ ಪಾಡಿನ ಬದುಕು
ಒಟ್ಟಿನಲ್ಲಿ ನಿಯತ್ತಿನ ಪ್ರಾಣಿಯಾದ ನಾಯಿಯು ನಂಬಿದ ಯಜಮಾನನನ್ನು ತನ್ನ ಜೀವ ಕೊಟ್ಟಾದರೂ ಬದುಕಿಸುತ್ತದೆ .
ಹಾಗೇ ನಾವೂ ಕೂಡಾ ಇರಬೇಕು .
ಜೀವ ಕೊಡದಿದ್ದರೂ ಪರವಾಗಿಲ್ಲ ಜೀವ ತೆಗೆಯುವ ಕೆಲಸವನ್ನು ಅಂದರೆ ಮೋಸದ ದ್ರೋಹದ ಕೆಲಸವನ್ನು ಮಾತ್ರ ಯಾರೂ ಮಾಡಬಾರದು . ಇದೇ ಅಲ್ಲವೇ ಉತ್ತಮ ಬದುಕಿನ ನಡೆ .ನಮಗೆ ಕಲಿಸಿದ ಶರಣರ ಬದುಕಿನ ನುಡಿ 🙏🏻🙏🏻

ಡಾ ಸಾವಿತ್ರಿ ಕಮಲಾಪೂರ

Don`t copy text!