ದಾಸ ಶ್ರೇಷ್ಠ ಕನಕದಾಸರು ಸರ್ವ ಶ್ರೇಷ್ಠರು -ಆರ್.ಬಸನಗೌಡ ತುರ್ವಿಹಾಳ
e- ಸುದ್ದಿ ಮಸ್ಕಿ
ದಾಸರಲ್ಲಿ ಶ್ರೇಷ್ಠ ದಾಸರೆಂದರೆ ಕನಕದಾಸರು. ಕನಕದಾಸರು ಹುಟ್ಟಿನಿಂದ ಶ್ರೀಮಂತರಾಗಿದ್ದರು ಶ್ರೀಮಂತಿಕೆಯನ್ನು ತ್ಯಜಿಸಿ ಸಾಮಾನ್ಯರಂತೆ ಬದುಕಿ, ಬದುಕಿನ ಆದರ್ಶಗಳ ಬಿತ್ತಿ ದೈವತ್ವದ ಕಡೆ ಸಾಗಿದ ಪುಣ್ಯಾತ್ಮರು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ
ಕೊಂಡಾಡಿದರು.
ಪಟ್ಟಣದ ಕನಕವೃತ್ತದಲ್ಲಿ ಗುರುವಾರ ಕನಕ ಜಯಂತಿಯ ಅಂಗವಾಗಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಹಾಲುಮತ ಸಮಾಜದ ಅಧ್ಯಕ್ಷ ಮಲ್ಲನಗೌಡ ಸುಂಕನೂರು, ಕರಿಯಪ್ಪ ಹಾಲಾಪೂರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ. ಚಿಗರಿ, ತಹಶಿಲ್ದಾರರ ಅರಮನೆ ಸುಧಾ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಕರಿಬಸನಗೌಡ ಗುಡದೂರು, ಬಸವರಾಜ ನವಲಿ, ರಮೇಶ್ ಕರಕುರಿ, ದುರುಗೇಶ ವಕೀಲರು, ಬಸವ ಗೂಗ್ಲಿ, ಮಲ್ಲಯ್ಯ ಮುರಾರಿ, ಬೆಂಗಳೂರು ಕರಿಯಪ್ಪ, ಶಿವರೆಡ್ಡಿ, ಆನಂದ ವಿರಾಪೂರ, ರವಿ ಚಿಗರಿ, ಕರಿಯಪ್ಪ ಯಕ್ಲಲಪೂರ, ಹುಲ್ಲಗಪ್ಪ ವೀರಭದ್ರಪ್ಪ, ಹಾಗೂ ಇತರರು ಇದ್ದರು.