ಶಾಂತಿ -ಅಶಾಂತಿ
ಶಾಂತಿ ಅಶಾಂತಿಯ
ಮೋಹದ ಬಲೆಯಲಿ
ಸಿಲುಕಿ ನರಳಾಡುವ ಮಾನವ
ಇನಿತು ಭಕ್ತಿ ಕಾಮನೆಗೆ
ಇಲ್ಲ ಸ್ಥಳ ಹೃದಯ ಮಂದಿರದಲ್ಲಿ
ಹರಡಿಕೊಂಡ ಭಾವ ನೈದಿಲೆಯ
ಕುಸುಮಗಳು ಕೆಸರಿನಲ್ಲಿ
ನಿತ್ಯ ಅರಳಿ ನಗುವ ಮೊಗ್ಗುಗಳು
ಮುಡಿದರೇನು ?
ಅನುರಾಗ ಪ್ರೀತಿಯಲಿ
ಅರಳುವ ಭಾವ ಕುಸುಮಗಳು
ತನಿದು ಸಂತೈಸದ ಮನ
ಕರೆದು ಮಾಯವಾಯಿತು
ಮೋಡ ಮರೆಯಲಿ
ಅದೇಷ್ಷೋ ತಾರೆಗಳು ಎನಿಸಲಾರದಷ್ಷು
ಹೊಳೆಯುವ ಕಣ್ಣ ರೆಪ್ಪೆಯಲಿ ದಿಗಂತದಾಕಾಶ ವೈಭವ
ಕುಣಿದು ಕುಪ್ಪಳಿಸುವ
ವೈಭವಪೇತ ಮೆರವಣಿಗೆ
ಕಾಯಬೇಕು ಭಗವಂತ
ಅಶಾಂತಿಯ ಮನದಲ್ಲೊಂದು
ಸಂತಸದ ನಗೆ ಚೆಲ್ಲಿ
ಮುನ್ನಡೆಸೋ ಭಗವಂತ
ಕರಮುಗಿದು ಅರ್ಪಿಸುವೆ
ಒಡಲಾಳದ ನೋವು
ಬಿರುದು ಬಾವಲಿಗಿಲ್ಲ ಸಂಭ್ರಮ
ಜೇಂಕರಿಸಿ ನಡೆವ ನುಡಿಗಳೊಳಗಿಲ್ಲದ ಹುರುಳು
ಅರ್ಧೈಸಿ ಮುನ್ನಡೆಯಿಸುವ ದೇವನಿಂದು ಭಕ್ತಿ ಪೂರ್ವಕ ಶರಣೆಂಬೆ
ಒಂದು ಶರಣಾರ್ಥಿಗೆ
ಮತ್ತೊಂದು ಶಲಣಾರ್ಥಿ ಹೆಚ್ಚಾಯಿತು ಭಾರ
ತನುವ ತೊಗಲು ಕೊಯ್ದು
ಭಾರವ ಇಳಿಸಿಕೊಂಬ
ಶರಣ ದಂಪತಿಗಳು
ತವರು ನೆಲವಿಂದು ಪಾವನ
ತೊಳೆದ ಮನ ನಿಷ್ಕಲ್ಮಷ ಭಾವ
ಉಕ್ಕಿ ಹರಿದ ಜಲದ
ಸೊಗಢು ಗೂಡು
ಬೇಸರದ ತನುವಿಂದು
ಕುದಿಯುವ ಕುದಿಯುವ ಎಸರಿನಲಿ
ಬೆಂದ ಜೀವ ಬಾಡುತ್ತಿದೆ ನಿತ್ಯ ಸತ್ಯ
ಸತ್ಯದ ಮೇಲೆ ಸುಳ್ಳಿನ ಆರೋಪ
ಬೀಸಲಿ ತಂಗಾಳಿ ಮೈ ನವಿರೇಳಿ
ಅನುದಿನ ಅನುಗಾಲ
ಕುಣಿದು ಕುಪ್ಪಳಿಸಲಿ
ತವರು ನೆಲ
_ಡಾ ಸಾವಿತ್ರಿ ಕಮಲಾಪೂರ