ಗಝಲ್.
ಮೂಕ ಮನದ ಹಕ್ಕಿಗಳು ಅದೇಕೋ ಕೂಡಿವೆ ಗೆಳೆಯಾ
ಸಾಕಿದ ಮನೆಯ ನೆನೆದು ಅದೇನೋ ಬೇಡಿವೆ ಗೆಳೆಯ
ಒಂದಾಗಿ ಬಾಳಿದರೆ ಸ್ವರ್ಗ ಸುಖವೆಂದು ಹೇಳುತ್ತಿವೆಯೇ
ಚಂದಾದ ಹಸಿರ ಹುಲ್ಲ ಮೇಲೆ ಬಯಕೆ ಕಾಡಿವೆ ಗೆಳೆಯಾ.
ಪಂಚ ಪಾಂಡವರೆ ಬೆರೆತಂತೆ ಗಹನವಾದ ವಿಚಾರ ವಿನಿಮಯವು
ಸಂಚಿನ ಹುನ್ನಾರ ಕಂಡು ಸಹನೆಯಲಿ ಪ್ರಾರ್ಥನೆ ಮಾಡಿವೆ ಗೆಳೆಯಾ
ಮುಸ್ಸಂಜೆಯ ಹೊತ್ತು ಮುದ್ದಾದ ಮುಖಗಳು ಮುದುಡಿ ಕೂತಿವೆ
ನಿಸ್ಸಂದೇಹ ಬೇಸರಿಸಿ ದಣಿದು ಅಭಯ ನೀಡಿವೆ ಗೆಳೆಯಾ.
ಸಾಯಂಕಾಲ ಖಗಗಳ ಮಜ್ಜನ ಜಯಳಿಗೆ ಮುದವ ತಂದಿದೆ
ಭಯಂಕರ ಗಾಳಿಯ ಸೂಚನೆಯಲಿ ಉಪಾಯ ಹೂಡಿವೆ ಗೆಳೆಯಾ
–ಜಯಶ್ರೀ.ಭ ಭಂಡಾರಿ.
ಬಾದಾಮಿ.