೫ಎ ಕಾಲುವೆ ರಾಜಕೀಯ ಅಸ್ತç? ರೈತರಿಗೆ ನೀಡಿದ ಭರವಸೆ ಸುಳ್ಳಾಯಿತೇ ?

೫ಎ ಕಾಲುವೆ ರಾಜಕೀಯ ಅಸ್ತç? ರೈತರಿಗೆ ನೀಡಿದ ಭರವಸೆ ಸುಳ್ಳಾಯಿತೇ ?

e- ಸುದ್ದಿ ಮಸ್ಕಿ

ನಾರಯಣಪುರ ಬಲದಂಡೆ ಕಾಲುವೆಯ ೫ (ಎ) ಪಾಮನಕಲ್ಲೂರು ಶಾಖಾ ಕಾಲುವೆ ಜಾರಿ ವಿಷಯಕ್ಕೆ ಶಾಸಕ ಆರ್.ಬಸನಗೌಡ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರಿಂದ ದಶಕಗಳ ಹೋರಾಟ ಮಣ್ಣು ಪಾಲಾಗುವ ಲಕ್ಷಣಗಳು ಗೋಚರಿಸತೊಡಗಿವೆ.
೫ ಕಾಲುವೆ ಜಾರಿಯಿಂದ ಸಾವಿರಾರು ರೈತರ ಭೂಮಿ ನೀರಾವರಿ ಆಗಲಿದೆ. ನೀರಾವರಿ ಆದರೆ ಈ ಭಾಗದ ಬಹುಸಂಖ್ಯಾತ ಜನ ವಲಸೆ ಹೋಗುವನ್ನು ತಪ್ಪಿಸಬಹುದು ಎಂದು ರೈತರು ಸಂಘಟಿತರಾಗಿ ದಶಕಗಳಿಂದ ಹೋರಾಟವನ್ನು ಜೀವಂತವಾಗಿಟ್ಟಿದ್ದರು.
೨೦೧೮ ರಲ್ಲಿ ನಡೆದ ಉಪ ಉಪಚುನಾವಣೆ ಮತ್ತು ೨೦೨೩ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೫ ಎ ಕಾಲುವೆ ಜಾರಿಗೆ ತರುತ್ತೇವೆ ಎಂದು ರೈತ ಹೋರಾಟಗಾರರಿಗೆ ನಂಬಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಗೆಲುವಿಗೆ ರಾಜಕೀಯ ಅಸ್ತçವನ್ನಗಿ ಮಾಡಿಕೊಂಡು ಯಶ ಕಂಡಿದ್ದರು.
೨೦೧೮ ಉಪ ಚುನಾವಣೆಯ ಸಂದರ್ಭದಲ್ಲಿ ಪಾಮನಕಲ್ಲೂರಿನಲ್ಲಿ ನಡೆದ ಅನಿರ್ಧಿಷ್ಟ ಧರಣಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ೫ ಎ ಜಾರಿ ಮಾಡುತ್ತೇವೆ ಎಂದು ರೈತರಿಗೆ ಮಾತು ಕೊಟ್ಟಿದ್ದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ೫ ಎ ಕಾಲುವೆ ಜಾರಿ ಕಷ್ಟವಾಗಿದ್ದು ತಾಂತ್ರಿಕ ತೊಂದರೆಯಿAದ ಹರಿ ನೀರಾವರಿ ಬದಲು ಹನಿ ನೀರಾವರಿ ಮಾಡಲು ಯೋಜನೆ ರೂಪಿಸಿದ್ದರು. ರೈತ ಮುಖಂಡರು ಪ್ರತಾಪಗೌಡ ಪಾಟೀಲರ ಮಾತು ಕಹಿ ಎನಿಸಿ ಕಾಂಗ್ರೆಸ್ ಅಭ್ಯಾರ್ಥಿ ಆರ್.ಬಸನಗೌಡ ತುರ್ವಿಹಾಳ ಅವರನ್ನು ಬೆಂಬಲಿಸಿ ಆಯ್ಕೆ ಆಗಲು ಸಹಾಯ ಹಸ್ತ ಚಾಚಿದ್ದರು.
ಬೆಳಗವಿಯಲ್ಲಿ ನಡೆದ ಅಧಿವೇಶನದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸದನದಲ್ಲಿ ನೀರಾವರಿ ಸಚಿವರಿಗೆ ೩ ಪ್ರಶ್ನೆಗಳನ್ನು ಕೇಳಿದ್ದರು. ಅ) ಎನ್.ಆರ್.ಬಿ.ಸಿ ೫ (ಎ) ಕಾಲುವೆ ಯೋಜನೆ ಜಾರಿಗೆ ರೈತರ ಹೋರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದಿಯೇ ? ಆ) ಎನ್.ಆರ್.ಬಿ.ಸಿ ೫ (ಎ) ಕಾಲುವೆ ಯೋಜನೆ ಅನುಷ್ಠಾನಕ್ಕೆ ಸಕಾರ ತೆಗೆದುಕೊಂಡಿರುವ ಕ್ರಮಗಳೇನು ? ಇ) ೫ ಎ ಕಾಲುವೆ ನಿರ್ಮಾಣಕ್ಕೆ ಯಾವ ಕಾಲಮಿತಿಯಲ್ಲಿ ಸರ್ಕಾರ ಮಂಜೂರಾತಿ ನೀಡುವುದು ? ಎಂದು ಚುಕ್ಕಿ ಪ್ರಶ್ನೆ ಕೇಳಿದ್ದರು.
ಶಾಸಕರು ಕೇಳಿದ ಎರಡನೇ ಪ್ರಶ್ನೆ (ಆ)ಗೆ ಉತ್ತರಿಸಿದ ಸಚಿವರು ಮಸ್ಕಿ ತಾಲ್ಲೂಕಿನ ನೀರಾವರಿ ವಂಚಿತ ಸುಮಾರು ೨೩ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತಂತೆ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆಯ ಪೂರ್ಣಕಾರ್ಯ ಸಾಧ್ಯತಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸುವ ಪ್ರಕ್ರಿಯೆ ಕೃಷ್ಣ ಭಾಗ್ಯ ಜಲ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದಿದ್ದಾರೆ.
ಮೂರನೇ (ಇ) ಪ್ರಶ್ನೆಗೆ ಉತ್ತರಿಸಿದ ಸಚಿವರು ಎನ್.ಆರ್.ಬಿ.ಸಿ ೫(ಎ) ಯೋಜನೆಗೆ ಅಗತ್ಯವಿರುವ ನೀರಿನ ಹಂಚಿಕೆ, ಅನುದಾನ ಲಭ್ಯತೆಗೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಜಲ ಸಂಪನ್ಮೂಲ ಸಚಿವರ ಉತ್ತರದಿಂದ ಯೋಜನೆ ಜಾರಿ ಕುರಿತು ರೈತರಲ್ಲಿ ಗೊಂದಲ ಶುರುವಾಗಿದೆ.೧೦೭ ಹಳ್ಳಿಗಳಿಗೆ ನೀರಾವರಿ ಸೌಲಬ್ಯ ಕಲ್ಪಿಸುವ ಈ ಯೋಜನೆ ರಾಜಕೀಯ ಪಕ್ಷಗಳ ಮೇಲಾಟದಿಂದ ರೈತರು ಕಂಗಾಲಾಗುವAತಾಗಿದೆ.
ಬಿಜೆಪಿ ಸರ್ಕಾರ ನಂದವಾಡಗಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಹಳ್ಳಿಗಳಿಗೆ ಹನಿ ನೀರು ಕೊಡಲು ಯೋಜನೆ ರೂಪಿಸಿದ್ದರು. ಈ ಭಾಗದ ರೈತರು ಹನಿ ನೀರಾವರಿ ಬೇಡ ಹರಿ ನೀರಾವರಿ ಕಲ್ಪಿಸಿ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ನಂತರ ವಟಗಲ್ ಬಸವೇಶ್ವರ ಹರಿ ನಿರಾವರಿ ಯೋಜನೆ ಜಾರಿಗೆ ಬಿಜೆಪಿ ಸರ್ಕಾರ ಮಂಜೂರಾತಿ ನೀಡಿತ್ತು. ಆಗಲು ರೈತರು ಇದನ್ನು ಒಪ್ಪಲಿಲ್ಲ. ಇದರ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಪಕ್ಷ ೫ ಎ ಕಾಲುವೆ ಯಥವತ್ತಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಾರ್ಥಿ ಗೆಲುವಿಗೆ ಸೋಪಾನ ಮಾಡಿಕೊಂಡಿತು.
——————————————————————————————————————-

ನಾರಯಣಪುರ ಬಲದಂಡೆ ಕಾಲುವೆಯ ೫ಎ ಉಪ ಕಾಲುವೆ ಯೋಜನೆ ಜಾರಿಗಾಗಿ ಸರ್ಕಾರ ಬದ್ದವಾಗಿದ್ದು. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ.
-ಆರ್.ಬಸನಗೌಡ ತುರ್ವಿಹಾಳ ಶಾಸಕರು ಮಸ್ಕಿ
———————————————————–

ರೈತರ ಬಗ್ಗೆ ಕಾಳಜಿ ಇಟ್ಟುಕೊಂಡೆ ಯೋಜನೆ ಜಾರಿಗೆ ಪ್ರಯತ್ನಿಸಿದ್ದೆ. ರೈತÀ ಮುಖಂಡರು ನನ್ನ ಮೇಲೆ ವಿಶ್ವಾಸ ಇಡಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೫ ಎ ಕಾಲುವೆ ಯೋಜನೆ ನಿರ್ಮಿಸುವುದಾಗಿ ರೈತರಿಗೆ ಸುಳ್ಳು ಹೇಳಿದ್ದರು. ಈಗ ಅವರ ಬಣ್ಣ ಬಯಲಾಗಿದೆ. ಮಾತು ಕೊಟ್ಟಂತೆ ೫ ಎ ಕಾಲುವೆ ನಿರ್ಮಾಣ ಮಾಡಲಿ
-ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ ಮಸ್ಕಿ
———————————————————-

Don`t copy text!