ವೀರಭದ್ರೇಶ್ವರ 21 ನೇ ಕಾರ್ತಿಕ ದೀಪೋತ್ಸವ
e-ಸುದ್ದಿ, ಮಸ್ಕಿ
ಮಸ್ಕಿಯ ಮೇನ್ ಬಜಾರ್ ದಲ್ಲಿರುವ ವೀರಭದ್ರೇಶ್ವರ ದೇವರ 21ನೇ ವರ್ಷದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ಜರುಗಿತು.
ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ದೀಪ ಬೆಳಗುವ ಮೂಲಕ ಚಾಲನೇ ನೀಡಿದರು.
ಮಸ್ಕಿಯ ಗುರು ಹಿರಿಯರು ಹಾಗೂ ಸಕಲ ಸದ್ಭಕ್ತರು ಮಹಿಳೆಯರು ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..