ಪುಸ್ತಕ ಪರಿಚಯ
ಮತ್ತೆ ಅವತರಿಸಿದ ದೈತ್ಯರು
(ಮಕ್ಕಳ ವೈಜ್ಞಾನಿಕ ಕಾದಂಬರಿ)
ಲೇಖಕರ ಹೆಸರು … ಜಂಬುನಾಥ ಕಂಚ್ಯಾಣಿ…… ಮೊಬೈಲ್.೯೯೦೧೧೧೧೭೩೪
ಪ್ರಕಾಶನ….ಮಾನ್ಯತಾ ಸಾಹಿತ್ಯ ಪ್ರಕಾಶನ ವಿಜಯಪುರ. ಮೊ. ೮೭೬೨೬೭೮೧೦೩
ಪ್ರಕಟಿತ ವರ್ಷ…. ೨೦೨೩
ಬೆಲೆ……. ರೂ.೧೨೫.೦೦
ಶ್ರೀ ಜಂಬುನಾಥ ಕಂಚ್ಯಾಣಿ ಅವರು ವಿಜ್ಞಾನದ ಶಿಕ್ಷಕರಾಗಿ ಮತ್ತು ಪ್ರೌಢಶಾಲೆಯ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿದ್ದು ಮಕ್ಕಳ ಸಾಹಿತ್ಯ, ಪ್ರೌಢ ಸಾಹಿತ್ಯ, ವಚನ ಸಾಹಿತ್ಯ, ಗಜಲ್ ,ಕತೆ, ಕಾಬಂಬರಿಗಳನ್ನು ರಚಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯಲೋಕವನ್ನು ಸಮೃದ್ಧಿಗೊಳಿಸಿದ್ದಾರೆ. ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಮಕ್ಕಳ ಸಾಹತ್ಯ ಪರಿಷತ್ತದ ಅಧ್ಯಕ್ಷರಾಗಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇತ್ತೀಚಿಗೆ ಜಂಬುನಾಥ ಕಂಚ್ಯಾಣಿ ಅವರ ಮತ್ತೆ ಅವತರಿಸಿದ ದೈತ್ಯರು ಮಕ್ಕಳ ವೈಜ್ಞಾನಿಕ ಕಾದಂಬರಿಯು ಪ್ರಕಟವಾಗಿದೆ. ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ ಈ ಕೃತಿಯಲ್ಲಿ ಒಟ್ಟು ಇಪ್ಪತ್ತು ಅಧ್ಯಾಯನಗಳಿದ್ದು ಪ್ರತಿ ಅಧ್ಯಾಯನದಲ್ಲಿ ಒಂದು ಹೊಸ ವಿಷಯದ ಮೇಲೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತಾ, ನಾವು ನೆಲೆಸಿದ ಭೂಮಿ ಹೇಗೆ ಹುಟ್ಟಿತು , ಇಂದು ಜೀವಿಸುವ ಎರೆ ಹುಳುವಿನಿಂದ ಹಿಡಿದು ಅಳಿದು ಹೋದ ಜೀವಿಗಳಾದ ಡೈನೋಸಾರ ಎಂಬ ದೈತ್ಯಾಕಾರದ ಹಲ್ಲಿಗಳ ಬಗ್ಗೆ ವಿವರಿಸುತ್ತಾ ಮಕ್ಕಳ ಮನದಲ್ಲಿ ಅದ್ಭುತವಾದ ಭಾವನೆಗಳನ್ನು ಅರಳಿಸುತ್ತಾ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಚಿಗುರಿಸುತ್ತಾ ,ಮೂಢನಂಬಿಕೆ,ಅಂಧಶ್ರದ್ಧೆಗಳನ್ನು ಅಳಿಸುತಾ, ದೇಶಾಭಿಮಾನ ,ಭಾವೈಕ್ಯತೆ, ಮಾನವೀಯತೆ,ಹಾಗೂ ಸದ್ಗುಣಗಳು ಮಕ್ಕಳ ಮನದಲ್ಲಿ ಬೆಳೆಯುವಂತೆ ಲೇಖಕರು ಕೃತಿಯಲ್ಲಿ ಬರೆತಿದ್ದಾರೆ.ಹಾಗೂ ಕೃತಿಯಲ್ಲಿ ವಿಷಯಕ್ಕೆ ತಕ್ಕಂತೆ ಚಿತ್ರಗಳು ಹಾಕಿದ್ದು ಕೃತಿಯ ಮೌಲ್ಯ ಹೆಚ್ಚಾಗಿದೆ.
ಹಿರಿಯ ಸಾಹಿತಿಗಳು ಪ್ರೊ.ಟಿ.ಎಸ್. ನಾಗರಾಜ ಶೆಟ್ಟಿ ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ.ಸಂಕಲನದ ಮುಖ ಚಿತ್ರವು ಸೊಗಸಾಗಿದ್ದು ಆಕಷಿ೯ತವಾಗಿದೆ.
ಜಂಬುನಾಥ ಕಾಂಚಾಣಿಯವರು ಪ್ರೌಢಶಾಲೆಯಲ್ಲಿ ವಿಜ್ಞಾನದ ಶಿಕ್ಷಕರಾದ ಕಾರಣ ಮಕ್ಕಳಿಗೆ ವಿಜ್ಞಾನ ಕಾದಂಬರಿ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ ಶಿಕ್ಷಕ ಹಾಗೂ ಮಕ್ಕಳ ಒಡನಾಟ , ಶಾಲೆಯ ಪ್ರಯೋಗಾಲಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ,ರಾಜ್ಯ ಮಟ್ಟ ಮತ್ತು ರಾಷ್ಟ್ರಮಟ್ಟದ ಸೆಮಿನಾರುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು, ಮಕ್ಕಳ ಪ್ರಗತಿ ಹಾಗೂ ಶಾಲಾ ಪ್ರಗತಿಯ ಬಗ್ಗೆ ಓದುಗರಿಗೆ ಮನವರಿಕೆ ಆಗುವಂತೆ ಕಾದಂಬರಿಯಲ್ಲಿ ಹಂತ ಹಂತವಾಗಿ ಸುಂದರವಾಗಿ ಮಕ್ಕಳಿಗೆ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ಕಾದಂಬರಿಯನ್ನು ರಚಿಸಿದ್ದಾರೆ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಪರ ಊರುಗಳಲ್ಲಿ ಇರುವ ಪ್ರಾಣಿ ಸಂಗ್ರಹಗಳಿಗೆ ಭೇಟಿ ನೀಡಿ ಅಲ್ಲಿಯ ಪ್ರಾಣಿಗಳ ಬಗ್ಗೆ ವಿವರಿಸುವುದು, ರಾಷ್ಟ್ರೀಯ ಮಕ್ಕಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರಗಳಿಗೆ ಭೇಟಿ ಕೊಡಿಸಿ ಅಲ್ಲಿಯ ವಸ್ತುಗಳ ಬಗ್ಗೆ ಪರಿಚಯಿಸುವ ಪರಿ ಬಹಳ ಮನೋವೈಜ್ಞಾನಿಕವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ .
ಭೂಮಿಯ ಹುಟ್ಟು ಮತ್ತು ವಿಕಾಸವಾದ ರೀತಿ ಜೀವಿಗಳಲ್ಲಿ ಲಿಂಗಾಣು.ಗಳು ಮತ್ತು ಸಂತಾನೋತ್ಪತ್ತಿ,, ಮತ್ಸಲೋಕ . ದೈತ್ಯ ಸರಿಸೃಪಗಳು , ಭೂಮಂಡಲನ್ನಾಳಿದ ಬಲಾಡ್ಯರು ,ಶಿವನಂದಿ ಬೆಟ್ಟದ ಕೊಳ್ಳದಲ್ಲಿ ಸಿಗುವ ಸಿಲೆಂದ್ರಿಯಗಳು ,ಹಿಮದ ಅಡಿಯಲ್ಲಿ ಸಿಕ್ಕ ಗುಂಡುಗಳ ಬಗ್ಗೆ ಡೈನಾಸರ್ ಮರಿಗಳ ಬಗ್ಗೆ ವಿವರಿಸುತ್ತಾ , ಮೈಸೂರ ಮೃಗಾಲಯಕ್ಕೆ ಭೇಟಿಕೊಟ್ಟು ಅಲ್ಲಿಯ ವಿವಿಧ ಪ್ರಾಣಿಗಳನ್ನು ಪರಿಚಯಿಸುವುದು ,ಹಿಮ್ಲಿ ಮರಿಗಳತ್ತ ಜನಸಾಗರ ಬರುವುದು ,ಪ್ರಧಾನ ಮಂತ್ರಿಗಳಿಂದ ಮಕ್ಕಳಿಗೆ ಸನ್ಮಾನ ಹೀಗೆ ಎಲ್ಲಾ ವಿಷಯ ಬಗ್ಗೆ ವಿವರವಾಗಿ ಕಾದಂಬರಿಯಲ್ಲಿ ಬರೆದಿದ್ದಾರೆ.
ಪ್ರಕೃತಿಯಲ್ಲಿ ಅಳೆದು ಹೋದ ಡೈನಾಸಾರಗಳೆಂಬ ದೈತಾಕಾರದ ಹಲ್ಲಿಗಳನ್ನು ವೈಜ್ಞಾನಿಕ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಮರು ಸೃಷ್ಟಿ ಮಾಡಲು ಮಾನವರಿಗೆ ಸಾಧ್ಯವಿಲ್ಲ ಎಂದು ಯೋಚಿಸಿ ಲೇಖಕರು ತಮ್ಮ ಕಲ್ಪನಾ ಶಕ್ತಿಯಿಂದ ಮತ್ತೆ ಅವುಗಳನ್ನು ಸೃಷ್ಟಿಸುವ ಬಗ್ಗೆ ಯೋಚಿಸಿ ಮತ್ತೆ ಅವತರಿಸಿದ ದೈತ್ಯರು ಎಂಬ ಕಾದಂಬರಿಯನ್ನು ರಚಿಸಿ ,ಹೊಸ ರೀತಿಯ ಮಕ್ಕಳ ವೈಜ್ಞಾನಿಕ ಕಾದಂಬರಿಯನ್ನು ಮಕ್ಕಳ ಕೈಯಲ್ಲಿ ಕೊಟ್ಟಿದ್ದಾರೆ .
ಮತ್ತೆ ಅವತರಿಸಿದ ದೈತ್ಯರು ಮಕ್ಕಳ ವೈಜ್ಞಾನಿಕ ಕಾದಂಬರಿ ಓದು ಕೇವಲ ಮಕ್ಕಳಿಗಲ್ಲದೆ ಹಿರಿಯರಿಗೂ ಕುತೂಹಲ ಮತ್ತು ಹೊಸ ವಿಷಯಗಳ ಪರಿಚಯ ಮಾಡಿಸುತ್ತದೆ , ಓದಿಸಿಕೊಂಡು ಹೋಗುತ್ತದೆ.
ಜಂಬುನಾಥ ಕಂಚ್ಯಾಣಿಯವರ ಈ ಕೃತಿ ಇಂಗ್ಲೀಷಗೆ ಅನುವಾದವಾಗುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದ್ದು ಇವರಿಂದ ಇಂತಹ ಅನೇಕ ವೈಜ್ಞಾನಿಕ ಕೃತಿಗಳು ಬರಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ