ಶಬ್ದ ಗಾರುಡಿಗನ ನಿಶಬ್ದ ಪಯಣ

ಶಬ್ದ ಗಾರುಡಿಗನ ನಿಶಬ್ದ ಪಯಣ

ಮೃದು ವಚನದಿ ಮನೆಮಾತಾಗಿ
ಎಲ್ಲರ ಹೃದಯ ಗೆದ್ದ ಮುಗ್ಧ
ಸಾಧನೆಯ ಶಿಖರವೇರಿದ ಸಿದ್ಧ

ಸರಳತೆಯೇ ಅಸ್ತ್ರವಾಗಿ
ಸಜ್ಜನಿಕೆಯೇ ಶಾಸ್ತ್ರವಾಗಿ
ಸಮಾಜದುದ್ದಾರಕೆ ಶ್ರಮಿಸಿದ
ಆತ್ಮ ಪರಿಶುದ್ಧ

ನುಡಿದಂತೆ ನಡೆದು
ನಗುನಗುತ್ತಲೇ ಸಾಧನೆಯ
ಹಾದಿ ಶ್ರದ್ಧೆಯಿಂದ ಸವೆಸಿದ
ಪರಿವರ್ತನೆಯ ಬುದ್ಧ

ಶಬ್ದ ಗಾರುಡಿಗನ ನಿಶಬ್ದ ಪಯಣ
ನಿನ್ನ ಪಾದದಡಿ ಬಯಲ ಬೆಳಕಾಯ್ತು
ತವನಿಧಿ ವಿಜಯಮಹಾಂತೇಶ.

ಸವಿತಾ ಮಾಟೂರ ಇಲಕಲ್ಲ

Don`t copy text!