ಅಯೋಧ್ಯೆ.ಗಝಲ್
ದಶರಥ ನಂದನ ಶ್ರೀರಾಮನ.ಪಟ್ಟಾಭಿಷೇಕಕ್ಕಾಗಿ. ತೆರೆಯುತಿದೆ ಅಯೋಧ್ಯೆ
ದಶಕಗಳ ಕನಸು ನನಸಾಗುವ ಕಾಲನ ಲೀಲೆಯಲಿ ಮೆರೆಯುತಿದೆ ಅಯೋಧ್ಯೆ
ಸಂಭ್ರಮದ ಕ್ಷಣಗಳ ಕಂಗಳಲಿ ತುಂಬಿಕೊಳ್ಳಲು ಪುಳಕಿತರಾಗಿಹರಲ್ಲವೇ
ಭ್ರಮೆಯೆಲ್ಲ ಕರಗಿ ಏಳು ಪವಿತ್ರ ನದಿಗಳ ಜಲದಲಿ ಮಿಂದು ಮೊರೆಯುತಿದೆ ಅಯೋಧ್ಯೆ.
ಸ್ವರ್ಗವೇ ಧರೆಗಿಳಿದು ಬಂದಂತೆ ವಿಜೃಂಭಣೆಯಿಂದ. ನಳನಳಿಸುತಿದೆ.v
ಕಾರ್ಗತ್ತಲೆ ಕಳೆದು ಪುಷ್ಪ ವೃಷ್ಟಿಯ ಸೂರೆಗೊಳ್ಳುತ ಬೆರೆಯುತಿದೆ ಅಯೋಧ್ಯ.
ಐದುನೂರು ವರ್ಷಗಳ ಹಬ್ಬ ಮರುಕಳಿಸಿ ದೀಪಾವಳಿ ಅಚರಿಸುತಿದೆ ನೋಡು
ಆಯ್ದಾಯ್ದು ಪೇರಿಸಿಟ್ಟ ಶಿಲೆಗಳು ನಗುವ ಸೂಸಿ ಇತಿಹಾಸ ಬರೆಯುತಿದೆ ಅಯೋಧ್ಯೆ
ವನವಾಸದ ಜಿಂಕೆ ಜಟಾಯು. ಅಳಿಲುಗಳು ಲಲ್ಲಾನ ಸೇವೆಗೆ ಸೇರುತಿವೆ ಜಯಾ.
ಐತಿಹಾಸಿಕ ಕ್ಷಣಗಣನೆಗೆ ವಿಶ್ದದ ಚಿತ್ತ ಸೆಳೆದು ಕೈ ಬೀಸಿ
ಕರೆಯುತಿದೆ ಅಯೋಧ್ಯೆ.
– ಜಯಶ್ರೀ.ಭ.ಭಂಡಾರಿ.
ಬಾದಾಮಿ.