ವಿಶ್ವಕರ್ಮ ಕುಲಕಸಬುಗಳ ಬಿಕ್ಕಟ್ಟುಗಳು

ಬದುಕು

ವಿಶ್ವಕರ್ಮ ಕುಲಕಸಬುಗಳ ಬಿಕ್ಕಟ್ಟುಗಳು

ವಿಶ್ವಕರ್ಮ ಸಮುದಾಯದ ವೃತ್ತಿ ಗಳನ್ನು ನಿರ್ವಹಿಸುವ ಪಂಚ ಕುಲ‌ ಕಸುಬುಗಳಲ್ಲಿ ಒಂದಾದ ಅಕ್ಕಸಾಲಿಗ , ಪತ್ತಾರ ,ಸೋನಾರ ,ಅಕ್ಕಸಾಲಿ ಆಚಾರಿ ಇತ್ಯಾದಿ ಹೆಸರಿನಿಂದ ಕರೆಯುತ್ತಿರುವವರ ಕಾಯಕದವರಲ್ಲಿ ಇದು ಒಂದು
ಪಂಚಾಳರು ಐದು ವೃತ್ತಿಗಳನ್ನು ಮಾಡುವರೆಂದು ಕರಯಿಸಿಕೊಂಡ ಈ ಸಮಾಜದಲ್ಲಿ ಅವರವರದೆ ಒಂದೊಂದು ,ಕಥೆ,_ ವ್ಯಥೆ

ಅಕ್ಕಸಾಲಿಗ –ಚಿನ್ನದಕೆಲಸದ ಉತ್ಪನ್ನಗಳ ಮಾಡುವವರು,
ಬಡಿಗೇರ – ಕಾಷ್ಠ, ಕಟ್ಟಿಗೆ ಮರದಕೆಲಸಗಳನ್ನುಮಾಡುವವರು,

ಕಮ್ಮಾರ – ಕಬ್ಬಿಣದ ಕೆಲಸ ಮಾಡುವವರು

ಕಂಚುಗಾರ – ಕಂಚಿನ , ತಾಮ್ರ ಹಿತ್ತಾಳೆಯ ,ಉತ್ಪನ್ನ ಗಳ
ಕೆಲಸಮಾಡುವವರು,

ಶಿಲ್ಪಿ – ಮೂರ್ತಿ ಕೆತ್ತನೆಯ ಕೆಲಸಗಳನ್ನು ಮರಗಳಿಂದ , ಕಲ್ಲಿನಿಂದ ,ತೇರು ಇತ್ಯಾದಿ ಕಾಯಕ ಮಾಡುವವರು
ಮನು ಮಯ ತ್ವಷ್ಟ ಶಿಲ್ಪಿ ದೈವಜ್ಞ ಎಂಬುವವರ ಋಷಿ ಮುನಿ ಪರಂಪರೆಯ ,ಗೋತ್ರಗಳ ವಾರಸುದಾರರು

ಈ ಐದು ತರಹದ ಕಾಯಕ ಗಳನ್ನು ಬಹು ಪ್ರಾಚೀನ ಕಾಲದಿಂದಲೂ ,ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾ, ಜನ ಸಾಮಾನ್ಯರಿಗೆ , ರೈತರಿಗೆ ,ಕೃಷಿಕೂಲಿಕಾರ್ಮಿಕರಿಗೆ, ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಪರಿಕರಗಳನ್ನು ಕಮ್ಮಾರನ ಕುಲುಮೆ ಉರಿದು ವರ್ಷವೀಡಿ ಮಾಡಿಕೊಟ್ಟು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದ ದವಸ ಧಾನ್ಯಗಳನ್ನು ಆಯಗಾರಿಕೆ ರೂಪದಲ್ಲಿ ಪಡೆಯುವ ಪುರಾತನ ಸಂಸ್ಕೃತಿ, ಜೀವಂತ ಪಧ್ಧತಿಯನ್ನು ಇಂದಿಗೂ ಅನುಸರಿಸುತ್ತಿದ್ದಾರೆ

ಇಂದಿಗೂ ಸಹ ಇನ್ನೂಳಿದ ಸಮಾಜದವರ ಜೊತೆ ಪರಸ್ಪರ ಸಹಕಾರ ಸೌಹಾರ್ದ ,ಸಹಬಾಳ್ವೆಯಿಂದ ಬದುಕು ನಡೆಸುತ್ತಿರುವ ವಿಶ್ವಕರ್ಮ ಸಮಾಜ 
ನಿರಂತರ ಕಾಯಕ , ಸಮಾಜ ಸೇವೆ , ಕಷ್ಟ ಸಹಿಷ್ಣು ಶ್ರಮಜೀವಿಗಳು ಇವರು

ಇತ್ತೀಚಿನ ” ಜಾಗತೀಕರಣದ ಉದಾರೀಕರಣ, ಯಂತ್ರಗಳ ಆವಿಷ್ಕಾರದಿಂದ ,ಕೈ ಕೆಲಸಗಾರರಿಗೆ, ಬಂಡವಾಳಶಾಹಿಗಳ ಪ್ರಲೋಭನೆಯಿಂದಾಗಿ , ಕೆಲಸಗಾರರಿಗೆ ತೀವ್ರ , ಹೊಡೆತ ಬಿದ್ದ ಪರಿಣಾಮವಾಗಿ ಸಮಾಜದ ಕಾಯಕಕ್ಕೆ , ಧಕ್ಕೆಯುಂಟಾಗಿದೆ

ಪಂಚ ಕುಲಕಸಬುದಾರರಿಗೆ, ತಮ್ಮತಮ್ಮೊಳಗಿನ ಮಾರುಕಟ್ಟೆಯ ದರ ಪೈಪೋಟಿ ,ಆಧುನಿಕತೆಯ ,ಭರಾಟೆಯ ಪ್ರಸಕ್ತ ವಿದ್ಯಮಾನಗಳು, ದೇಶಿಯ ಉತ್ಪನ್ನ ಗಳಿಗೆ ಬೆಲೆಇಲ್ಲದಂತಾಗಿದೆ,
ಮಾರುಕಟ್ಟೆಯಲ್ಲಿ ,ಸ್ಪರ್ಧಾತ್ಮಕ ವ್ಯಾಪಾರ,ವ್ಯವಹಾರವನ್ನು ನಿಭಾಯಿಸುವ ಭೌಧ್ದಿಕ, ಆರ್ಥಿಕ ,ವ್ಯವಹಾರಿಕ ಕೌಶಲಗಳ ಕೊರೆತೆಯನ್ನು ಈ ಕ್ಷೇತ್ರ ಇಂದಿಗೂ ಎದುರಿಸುತ್ತಿದೆ,

ಕಾರಣ , ಗ್ರಾಮೀಣ ಭಾಗದ ಈ ಪಂಚಾಳ ಜನಾಂಗದ ವೃತ್ತಿ ಯವರು ,ಪಟ್ಟಣದ ಕಡೆ ಮುಖಮಾಡಿ ತಮ್ಮ ಕಾಯಕಕ್ಕೆ ಕಾಯಕಲ್ಪನಿಡುವಲ್ಲಿ ಪರಿ ಶ್ರಮಿಸುತ್ತಿದ್ದಾರೆ,

ದುಬಾರಿ ಬಾಡಿಗೆ, ಕಾರ್ಮಿಕರ ಕೊರತೆ ,ರೆಡಿಮೇಡ್ ,ಬಂಗಾರದ ಜುವೇಲರಿ ಶಾಪ್ ಗಳ, ದೊಡ್ಡ ಬಂಡವಾಳದವರ ಚಿನ್ನ ಬೆಳ್ಳಿ ಶೋರೂಮ್ ಅಂಗಡಿಗಳು
ಮರದಕೆಲಸಗಾರದವರ ಆಧುನಿಕ ,ರೆಡಿಮೇಡ್ ಬಾಗಿಲು ಕಿಟಕಿ ಮನೆಗೆ ಬೇಕಾದ ಎಲ್ಲ ತರಹದ ಸಾಮಗ್ರಿಗಳ ಪೊರೈಕೆ ,
ಕಮ್ಮಾರಿಕೆ,ಶಿಲ್ಪಿ ಕಂಚಗಾರ ಕಾಯಕದವರ ಪರಿಸ್ಥಿತಿ ಇಷ್ಟೇ ,ತ್ರಾಸದಾಯಕವಾಗಿದೆ,

ಅಲ್ಲಲ್ಲಿ ತಮ್ಮ ವೈಯಕ್ತಿಕ ಛಾಪನ್ನು ತಮ್ಮ ತಮ್ಮ ಕಾಯಕಗಳಲ್ಲಿ ಉಳಿಸಿಕೊಂಡವರು ಇದ್ದಾರೆ,ಇಂತಹವರಿಂದಲೇ , ಇವರಿಂದಲೇ ಸಮಾಜಕ್ಕೆ ಗೌರವ ಪುರಸ್ಕಾರ ಇದ್ದೇ ಇದೆ

ಆಧುನಿಕತೆಗೆ , ರಡಿಮೇಡ್ ಸಾಮಗ್ರಿಗಳಿಗೆ ,ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಿದೆ

ದೇಶೀಯ ಉತ್ಪನ್ನ ಗಳ ತಯಾರಿಕರಿಗೆ, ನೆಲೆ ಬೆಲೆ ಇಲ್ಲದ ಇಂತಹ ಸಂಕಷ್ಟದ ಸಮಯದಲ್ಲಿ ಕುಲಕಸಬುದಾರರು ನನ್ನಿಂದಲೇ ಈ ಕೆಲಸಕ್ಕೆ ಮುಕ್ತಿದೊರೆಯಲಿ ಎಂದುಕೊಂಡು ; ಮಕ್ಕಳಿಗೆ ಕಾಯಕ ಕಲಿಸುತ್ತಿಲ್ಲ , ಅವರು ಆಸಕ್ತಿಯನ್ನು ವಹಿಸುತ್ತಿಲ್ಲ ಪ್ರಸ್ತುತ ದಿನಗಳಲ್ಲಿ ಓದಿನಕಡೆ ಮುಖಮಾಡಿಸಿದ್ದು ಸುಳ್ಳಲ್ಲ

ಬರಹ -ನಟರಾಜ್ ಸೋನಾರಕು ಕುಷ್ಟಗಿ

Don`t copy text!