ಪುಟ್ಟ ತತ್ತಿಯ ಕನಸು

ಪುಟ್ಟ ತತ್ತಿಯ ಕನಸು

ಅಮ್ಮನ ಭ್ರೂಣದೊಳಗೆ ಸೃಷ್ಟಿಯಾಗಿ
ನವಮಾಸ ತುಂಬಿರಲು
ಆತುರದಿ ಕಾತುರದಿ ಹೊರಬಂದೆ
ಈ ಭೂ ಜಗತ್ತಿಗೆ…

ತಾಯ ಮಡಲಲ್ಲಿ ಬೆಚ್ಚನೆಯ ಕಾವು
ಏನು ಕಾಣಲೊಲ್ಲದು ಜಗವು
ಅಮ್ಮನ ನವಿರಾದ ಅಪ್ಪುಗೆಗೆ
ತವಕಿಸುತ್ತಿದೆ ಮನವು….

ಏನೇನೋ ಸುಂದರ ಕನಸು
ತಾಯ ಅಪ್ಪುಗೆಯ ಕಾವಿಗೆ
ಮಟ್ಟೆಯೊಡೆದು ಮರಿಯಾಗಿ
‘ಚಿಂವ್ ಚಿಂವ್ ‘ಎಂದು ಹಾರುವಾಸೆ…

ಅಮ್ಮ ತಂದ ಹುಳು ಹುಪ್ಪಟೆಗಳ
ನನಗೆ ತಿನ್ನಿಸುವಾಗ
ಹೊಟ್ಟೆ ತುಂಬಿದ ಮೇಲೆ
‘ಪುರ್’ ಎಂದು ಹಾರುವಾಸೆ …

ಉರಗವೊಂದು ಗೂಡೊಳಗೆ ನುಸುಳಿದಾಗ
ಅದ ನನ್ನಮ್ಮ ನೋಡಿ ಎಗರಿರಲು
ನಾ ಕೆಳ ಜಾರಿ ಬಿದ್ದಾಗ
ಪುಟ್ಟ ತತ್ತಿಯ ಕನಸು ನುಚ್ಚು ನೂರಾಯ್ತು…

ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ

Don`t copy text!